ದೇಶದ ಪ್ರತಿ ಜಿಲ್ಲೆಯಲ್ಲೂ ಪಿಎಂ ಕೇರ್ಸ್ ಫಂಡ್ ನಿಂದ `ಆಮ್ಲಜನಕ ಘಟಕ ಸ್ಥಾಪನೆ :ಮೋದಿ

ನವ ದೆಹಲಿ : ಪಿಎಂ ಕೇರ್ಸ್ ಫಂಡ್ ನಿಂದ ದೇಶದ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಜಿಲ್ಲೆಗಳು ಕೊರೊನಾದಿಂದ ಗೆದ್ದರೆ ದೇಶವೇ ಗೆದ್ದಂತೆ, ಹೀಗಾಗಿ ನನ್ನ ಗ್ರಾಮವನ್ನು ಕೊರನಾ ಮುಕ್ತ ಮಾಡುತ್ತೇನೆ ಎಂದು ಗ್ರಾಮಗಳ ಜನರೇ ಸಂಕಲ್ಪ ಮಾಡಬೇಕು. ಕೃಷಿ ಭೂಮಿಯಲ್ಲಿ ಭೌತಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕೊರನಾ ನಿಯಂತ್ರಣದಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯ. ಜಿಲ್ಲಾಧಿಕಾರಿಗಳೇ ಕೊರೊನಾ ವೈರಸ್ ವಿರುದ್ದ ಫೀಲ್ಡ್ ಕಮಾಂಡರ್ ಗಳು ಎಂದು ಜಿಲ್ಲಾಧಿಕಾರಿಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ನಮ್ಮ ಅಸ್ತ್ರ ಲೋಕಲ್ ಕಂಟೇನ್ಮೆಂಟ್, ಫೀಲ್ಡ್ ಕಮಾಂಡರ್ ನಂತೆ ಇಡೀ ಜಿಲ್ಲೆಯನ್ನು ಸಶಸಕ್ತೀರಣ ಮಾಡಿ. ಕಾಳಸಂತೆಯಲ್ಲಿ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಕೆಲವು ಜಿಲ್ಲೆಗಳಲ್ಲಿ ಕೊರೊನಾ ಕಡಿಮೆಯಾಗುತ್ತಿದೆ. ಕೊರೊನಾ ತುತ್ತತುದಿ ತಲುಪಿ ಈಗ ಕಡಿಮೆಯಾಗುತ್ತಿದೆ. ಕಡಿಮೆಯಾಗುತ್ತಿದೆಯಾದರೂ ಎಚ್ಚರಿಕೆ ಅತ್ಯಗತ್ಯ ಎಂದು ಅವರು ಬಲವಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement