ನಾರದ ಕುಟುಕು ಪ್ರಕರಣ: ಟಿಎಂಸಿ ಸಚಿವರ ಜಾಮೀನಿಗೆ ತಡೆ ನೀಡಿದ ಕೋಲ್ಕತ್ತಾ ಹೈಕೋರ್ಟ್

ಕೋಲ್ಕತ್ತಾ: ನಾರದ ಕುಟುಕು ಪ್ರಕರಣದಲ್ಲಿ ಸೋಮವಾರ ಬಂಧಿಸಲ್ಪಟ್ಟ ನಾಲ್ವರು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಾಯಕರಿಗೆ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯವು ಸೋಮವಾರ ನೀಡಿದ ಜಾಮೀನಿಗೆ ಕೋಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ.
ಆರೋಪಿಗಳು ಬುಧವಾರದ ವರೆಗೆ ಕೇಂದ್ರ ತನಿಖಾ ದಳ (ಸಿಬಿಐ) ವಶದಲ್ಲಿರುತ್ತಾರೆ.
ಇದಕ್ಕೂ ಮುನ್ನ ಸೋಮವಾರ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯವು ಆಡಳಿತಾರೂಢ ಟಿಎಂಸಿ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರ ಮತ್ತು ಕೋಲ್ಕತ್ತಾದ ಮಾಜಿ ಮೇಜರ್ ಸೋವನ್ ಚಟರ್ಜಿ ಅವರಿಗೆ ಜಾಮೀನು ನೀಡಿತ್ತು. ಆದಾಗ್ಯೂ, ಅವರನ್ನು ತಕ್ಷಣ ಬಿಡುಗಡೆ ಮಾಡಲಾಗಿಲ್ಲ.
ನಾಲ್ವರು ಆರೋಪಿಗಳನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ ಮತ್ತು ನ್ಯಾಯಾಲಯದ ತೀರ್ಪನ್ನು ಸಿಬಿಐ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸಚಿವ ಫಿರ್ಹಾದ್ ಹಕೀಮ್ ಅವರ ಪುತ್ರಿ ಶಬ್ಬಾ ಹಕೀಮ್ ಟ್ವೀಟ್‌ ಮಾಡಿದರು.
ಆದರೆ, ಈ ವಿಷಯವನ್ನು ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದಿಂದ ವರ್ಗಾಯಿಸಿ ಪಶ್ಚಿಮ ಬಂಗಾಳದ ಹೊರಗೆ ಸ್ಥಳಾಂತರಿಸಬೇಕೆಂದು ಸಿಬಿಐ ಹೈಕೋರ್ಟಿಗೆ ಮನವಿ ಮಾಡಿದ್ದರಿಂದ ನಾಲ್ವರು ಬಂಧನದಲ್ಲಿದ್ದರು.
ಇದಕ್ಕೂ ಮೊದಲು ನಾಲ್ವರು ನಾಯಕರ ಬಂಧನವು ತನಿಖಾ ಸಂಸ್ಥೆಯ ಕಚೇರಿಯ ಹೊರಗೆ ಭಾರಿ ಪ್ರತಿಭಟನೆಗೆ ನಾಂದಿ ಹಾಡಿತು. ಟಿಎಂಸಿ ಬೆಂಬಲಿಗರು ಸಿಬಿಐ ಹೊರಗಡೆ ಬೀಡುಬಿಟ್ಟಿರುವ ಕೇಂದ್ರ ಪಡೆಗಳ ಮೇಲೆ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಕಲ್ಲು ತೂರಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಬಿಐ ಕಚೇರಿಗೆ ನುಗ್ಗಿ ತನ್ನ ನಾಯಕರೊಂದಿಗೆ ತನ್ನನ್ನೂ ಬಂಧಿಸಬೇಕೆಂದು ಒತ್ತಾಯಿಸಿದರು.
ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮಾನ್ ಬ್ಯಾನರ್ಜಿ ಅವರು ಈ ಬಂಧನಗಳನ್ನು ಕಾನೂನುಬಾಹಿರ ಎಂದು ಕರೆದಿದ್ದಾರೆ, ರಾಜ್ಯಪಾಲರ ಅನುಮೋದನೆಯ ಆಧಾರದ ಮೇಲೆ ಸಿಬಿಐ ನಡೆಸುವ ಕಾನೂನುಬಾಹಿರ ಎಂದು ವಾದಿಸಿದ್ದಾರೆ. “ಸಿಬಿಐನಿಂದ ನನಗೆ ಯಾವುದೇ ಪತ್ರ ಬಂದಿಲ್ಲ ಅಥವಾ ಪ್ರೋಟೋಕಾಲ್ ಪ್ರಕಾರ ಯಾರೂ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ” ಎಂದು ಅವರು ಹೇಳಿದರು.
ರಾಜ್ಯಪಾಲ ಜಗದೀಪ್ ಧಂಕರ್ ಅವರು ನಾಲ್ವರು ನಾಯಕರನ್ನು ವಿಚಾರಣೆಗೆ ಒಳಪಡಿಸಲು ಇತ್ತೀಚೆಗೆ ಅನುಮತಿ ನೀಡಿದ್ದರು, ಅದರ ನಂತರ ತನಿಖಾ ಸಂಸ್ಥೆ ತನ್ನ ಚಾರ್ಜ್‌ಶೀಟ್ ಅನ್ನು ಅಂತಿಮಗೊಳಿಸಿದ್ದು, ಅವರನ್ನು ಬಂಧಿಸಲು ಮುಂದಾಯಿತು.
ಸಮರ್ಥ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ ಬಂಧನಕ್ಕಾಗಿ ಮುಂದುವರಿಯಲಾಗಿದೆ ಎಂದು ಸಿಬಿಐ ಹೇಳಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement