ನಾಳೆ ಸಿಎಂ ಸುದ್ದಿಗೋಷ್ಠಿ: ಲಾಕ್‌ಡೌನ್‌ ವಿಸ್ತರಣೆ ಪ್ರಕಟಿಸುತ್ತಾರಾ ಬಿಎಸ್‌ವೈ..?

ಬೆಂಗಳೂರು:ಕರ್ನಾಟಕದಲ್ಲಿ ಈಗ ಲಾಕ್​ಡೌನ್​ ವಿಸ್ತರಣೆ ಚರ್ಚಾ ವಿಷಯ. ಮೇ 10ರಿಂದ 24ರ ವರೆಗೆ ಲಾಕ್​ಡೌನ್​ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ಲಾಕ್​ಡೌನ್​ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೆಚ್ಚಾಗಿದೆ.
ರಾಜ್ಯದ ಅನೇಕ ಸಚಿವರೂ ಲಾಕ್​ಡೌನ್​ ಮುಂದುವರಿಸುವುದಕ್ಕೆ ಒಲವು ತೋರಿದ್ದಾರೆ. ಜೊತೆಗೆ ತಜ್ಞರು ಸಹ ಲಾಕ್‌ಡೌನ್‌ ವಿಸ್ತರಣೆ ಬಗ್ಗೆ ಸರ್ಕಾರಕ್ಕೆ ಹೇಳಿದ್ದಾರೆ. ಹೀಗಾಗಿ ಲಾಕ್​ಡೌನ್​ ಬಗ್ಗೆ ಸರ್ಕಾರ ಏನು ನಿರ್ಧಾರ ಕೈಗೊಲ್ಳಲಿದೆ ಎಂಬುದು ಜನರಲ್ಲಿರುವ ಕುತೂಹಲ. ಈ ಮಧ್ಯೆ ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್‌ಡೌನ್‌ ಕುರಿತು ಮೂರು ದಿನಗಳೊಳಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬುಧವಾರ (ಮಾ.೧೯) ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ನಾಳೆಯ ಸುದ್ದಿಗೋಷ್ಠಿಯಲ್ಲೇ ಲಾಕ್​ಡೌನ್​ ಬಗ್ಗೆ ಮುಖ್ಯಮಂತ್ರಿಗಳು ಸರ್ಕಾರದ ನಿರ್ಧಾರ ತಿಳಿಸುತ್ತಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ವಾರ ಸಚಿವ ಸಂಪುಟ ಸಭೆ ನಿಗದಿಯಾಗಿಲ್ಲ. ಹೀಗಾಗಿ ಲಾಕ್​ಡೌನ್​ ವಿಸ್ತರಣೆ ಕುರಿತಂತೆ ಹಿರಿಯ ಸಚಿವರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಲಾಕ್​​ಡೌನ್​ ವಿಸ್ತರಣೆ ಮಾಡಿದರೂ ಸಹ ಕೈಗಾರಿಕೆ ಸೇರಿದಂತೆ ಕೆಲ ಆಯ್ದ ವಲಯಗಳಿಗೆ ವಿನಾಯಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಮಾತ್ರವಲ್ಲದೇ ಲಾಕ್​ಡೌನ್​ ಸಂದರ್ಭದಲ್ಲಿ ಜನರ ಜೀವನ ನಿರ್ವಹಣೆಯೂ ಸರ್ಕಾರದ ಜವಾಬ್ದಾರಿ ಆಗಿರುವುದರರಿಂದ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ಊಟ ಹಾಗೂ ಪಡಿತರ ಚೀಟಿ ಹೊಂದಿರುವವರಿಗೆ ಧವಸ ಧಾನ್ಯಗಳನ್ನ ನೀಡುವ ಬಗ್ಗೆ ಹಾಗೂ ವಿಶೇಷ ಪ್ಯಾಕೇಜ್‌ ಬಗ್ಗೆ ನಾಳೆ ಮುಖ್ಯಮಂತ್ರಿಗಳು ಘೋಷಣೆ ಮಾಡುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ಧರ್ಮೇಂದ್ರ ಪ್ರಧಾನ ರಾಜೀನಾಮೆ ಅಂಗೀಕಾರ; ಪ್ರಲ್ಹಾದ ಜೋಶಿಗೆ ಕೇಂದ್ರ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement