ಮೈಸೂರು: ಕೋವಿಡ್ ಸೋಂಕಿನಿಂದ ಗುಣಮುಖರಾದ ಅನೇಕರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಮೈಸೂರಿನಲ್ಲಿ ಇಬ್ಬರು ಕೋವಿಡ್ ವಾರಿಯರ್ಗಳು ಬ್ಲ್ಯಾಕ್ ಫಂಗಸ್ನಿಂದ ಸಾವಿಗೀಡಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪಾಲಿಕೆ ಗುತ್ತಿಗೆ ನೌಕರರಾದ ವಿನೋದ್ (28) ಹಾಗೂ ರವಿ (38) ಮೃತಪಟ್ಟವರು. ಕೊರೊನಾ ಸೋಂಕಿತರ ಶವ ಸಾಗಿಸುತ್ತಿದ್ದ ಚಾಲಕ ರವಿಗೆ 16 ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಳಿಕ ಅವರಿಗೆ ಬ್ಲ್ಯಾಕ್ ಫಂಗಸ್ ತಗುಲಿದ್ದು, ಶಸ್ತ್ರಚಿಕಿತ್ಸೆ ಸಹ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಫಾಗಿಂಗ್ ಆಟೋ ಚಾಲಕನಾಗಿದ್ದ ವಿನೋದ್ಗೆ ಮೂರು ದಿನದ ಹಿಂದೆ ಸೋಂಕು ದೃಢಪಟ್ಟಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಲು


ನಿಮ್ಮ ಕಾಮೆಂಟ್ ಬರೆಯಿರಿ