ಜೈಪುರ: ಮುಖ್ಯವಾಗಿ ಕೋವಿಡ್-19 ನಿಂದ ಚೇತರಿಸಿಕೊಳ್ಳುವ ಜನರ ಮೇಲೆ ಪರಿಣಾಮ ಬೀರುವ ಮುಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಪ್ರಕರಣಗಳನ್ನು ರಾಜಸ್ಥಾನ ಸರ್ಕಾರ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಕಪ್ಪು ಶಿಲೀಂಧ್ರ ಚಿಕಿತ್ಸೆಯಲ್ಲಿ ಬಳಸುವ ಔಷಧದ 2,500 ಬಾಟಲುಗಳನ್ನು ಖರೀದಿಸಲು ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.
ರಾಜಸ್ಥಾನ ಸಾಂಕ್ರಾಮಿಕ ಕಾಯ್ದೆ 2020 ರ ಅಡಿಯಲ್ಲಿ ರಾಜ್ಯದಲ್ಲಿ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ಮತ್ತು ಅಧಿಸೂಚಿತ ರೋಗವೆಂದು ಪರಿಗಣಿಸಲಾಗಿದೆ ಎಂದು ರಾಜ್ಯದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಅಖಿಲ್ ಅರೋರಾ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಪ್ಪು ಶಿಲೀಂಧ್ರ ಮತ್ತು ಕೊರೊನಾ ವೈರಸ್ಸಿಗೆ ಸಮಗ್ರ ಮತ್ತು ಸಂಘಟಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ತಜ್ಞರ ಪ್ರಕಾರ, ಮಧುಮೇಹ ಇರುವವರು ಕಪ್ಪು ಶಿಲೀಂಧ್ರ ಸೋಂಕನ್ನು ಪಡೆಯುವ ಸಾಧ್ಯತೆ ಹೆಚ್ಚು. ಕೋವಿಡ್-19 ಸೋಂಕುಗಳ ಉಲ್ಬಣದ ಮಧ್ಯೆ, ದೆಹಲಿ ಹಾಗೂ ಮಹಾರಾಷ್ಟ್ರ ಕಪ್ಪು ಶಿಲೀಂಧ್ರದ ಪ್ರಕರಣಗಳನ್ನು “ಹೆಚ್ಚು ವರದಿ ಮಾಡುತ್ತಿದೆ.”


ನಿಮ್ಮ ಕಾಮೆಂಟ್ ಬರೆಯಿರಿ