ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ.. ಎರಡನೇ ಅಲೆ ಉಲ್ಬಣದ ಮುಕ್ತಾಯದ ಸಂಕೇತವೇ..?

ದೆಹಲಿಯಲ್ಲಿ ಸಾಂಕ್ರಾಮಿಕ ರೋಗವು ನಿಧಾನವಾಗುತ್ತಿರಬಹುದು, ರಾಜಧಾನಿ ಈಗ ಎರಡನೇ ಕೋವಿಡ್ ಅಲೆಯ ಉತ್ತುಂಗದಲ್ಲಿ ಹೊಸ ಪ್ರಕರಣಗಳಲ್ಲಿ ಐದನೇ ಒಂದು ಭಾಗವನ್ನು ವರದಿ ಮಾಡಿದೆ. ಹಲವಾರು ಇತರ ಡೇಟಾ ಬಿಂದುಗಳು ಇದನ್ನು ಸೂಚಿಸುತ್ತವೆ.
ಉದಾಹರಣೆಗೆ, ದೆಹಲಿಯ ಆರ್-ಮೌಲ್ಯ 0.57 ಡಿಸೆಂಬರ್ 2020 ಮಟ್ಟಕ್ಕೆ ಹತ್ತಿರದಲ್ಲಿದೆ. ಇದು ಏಪ್ರಿಲ್ ಮಧ್ಯದಲ್ಲಿ 2.3 ಕ್ಕೆ ಮುಟ್ಟಿತ್ತು. ಅಂದರೆ ಒಬ್ಬ ಕೋವಿಡ್-ಪಾಸಿಟಿವ್ ವ್ಯಕ್ತಿಯು ಎರಡು ಜನರ ಮೇಲೆ ಸೋಂಕು ತಗುಲಿಸಬಹುದಾಗಿತ್ತು, ಆದರೆ ಈಗ ಕುಸಿಯುತ್ತಿದೆ. ಇತರ ದರಗಳಾದ ಸಕಾರಾತ್ಮಕತೆ ದರ (ಪರೀಕ್ಷಿಸಿದ ಒಟ್ಟು ವ್ಯಕ್ತಿಗಳಲ್ಲಿ ಧನಾತ್ಮಕ ಪರೀಕ್ಷಿಸುವ ಜನರ ಸಂಖ್ಯೆ) ಮತ್ತು ಹೊಸ ಪ್ರಕರಣಗಳ ಸಂಖ್ಯೆಯೂ ಸಹ ದೆಹಲಿಯಲ್ಲಿ ಕುಸಿಯುತ್ತಿದೆ.
ರಾಷ್ಟ್ರೀಯ ಮಟ್ಟದಲ್ಲಿಯೂ ಸಹ, ಸರಾಸರಿ ಸಾಪ್ತಾಹಿಕ ಹೊಸ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸಕ್ರಿಯ ಪ್ರಕರಣ ಮೇ 16 ರಂದು ಸುಮಾರು ಒಂದು ಲಕ್ಷ ಮತ್ತು ಒಂದು ದಿನದ ನಂತರ 1.6 ಲಕ್ಷಕ್ಕೆ ಇಳಿಯಿತು. ಹೆಚ್ಚಿನ ರಾಜ್ಯಗಳಲ್ಲಿ ಪರೀಕ್ಷಾ ಸಕಾರಾತ್ಮಕ ದರಗಳು ಇಳಿದಿವೆ ಮತ್ತು ಆರ್-ಮೌಲ್ಯವು 0.9 ಕ್ಕೆ ಇಳಿದಿದೆ.
ಜಾಗತಿಕ ಆರೋಗ್ಯ ತಜ್ಞರ ಪ್ರಕಾರ, 1 ಕ್ಕಿಂತ ಕಡಿಮೆ ಇರುವ ಆರ್-ಮೌಲ್ಯವು ಸಾಂಕ್ರಾಮಿಕ ರೋಗವು ನಿಧಾನವಾಗಬಹುದು ಎಂಬುದನ್ನು ಸೂಚಿಸುತ್ತದೆ.
ದೈನಂದಿನ ಹೊಸ ಪ್ರಕರಣಗಳು, ದೈನಂದಿನ ಸಾವುಗಳು ಮತ್ತು ಆರ್-ಮೌಲ್ಯವು ಕೆಲವು ಪ್ರಮುಖ ರಾಜ್ಯಗಳಲ್ಲಿ ಕಡಿಮೆಯಾಗುತ್ತಿವೆ.
ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸರಾಸರಿ ದೈನಂದಿನ ಹೊಸ ಪ್ರಕರಣಗಳ ಕುಸಿತವು ಗಣನೀಯವಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಗಮನಾರ್ಹವಾಗಿದೆ -ಕೆಲವೇ ದಿನಗಳ ಹಿಂದೆ ಭಾರತದ ಒಟ್ಟು ಪ್ರಕರಣಗಳಲ್ಲಿ ಹೆಚ್ಚಿನ ಏರಿಕೆಗೆ ಈ ಮೂರು ರಾಜ್ಯಗಳು ಕಾರಣವಾಗಿದ್ದವು. ಈ ರಾಜ್ಯಗಳಲ್ಲಿ ಸರಾಸರಿ ದೈನಂದಿನ ಸಾವುಗಳು ಇನ್ನೂ ಹೆಚ್ಚಾಗಿದ್ದರೂ, 7 ದಿನಗಳ ನಂತರ ಕಡಿಮೆಯಾಗಲಿವೆ ಎಂಬುದಾಗಿ ತಜ್ಞರು ಹೇಳುತ್ತಾರೆ.
ದೇಶದಲ್ಲಿ, ಮೇ 3 ಮತ್ತು ಮೇ 9 ರ ನಡುವೆ ಸರಾಸರಿ ದೈನಂದಿನ ಹೊಸ ಪ್ರಕರಣಗಳು ಸುಮಾರು ಸರಾಸರಿ 3.92 ಲಕ್ಷಗಳಂತೆ ಸ್ಥಿರವಾಗಿದ್ದವು. ನಂತರದ ವಾರದಲ್ಲಿ 3.29 ಲಕ್ಷಕ್ಕೆ ಇಳಿಯಿತು. ಆದಾಗ್ಯೂ, ಸರಾಸರಿ ದೈನಂದಿನ ಸಾವುಗಳು 3,888 ರಿಂದ 4,038ದ ಆಸುಪಾಸು ಇದೆ. ಬಹುಶಃ ಇದು ದೈನಂದಿನ ಪ್ರಕರಣಗಳು ಕಡಿಮೆಯಾದ ಒಂದು ವಾರದಲ್ಲಿ ಅಥವಾ ಎಂಟ್ಹತ್ತು ದಿನಗಳಲ್ಲಿ ಕಡಿಮೆಯಾಗಬಹುದು.
ದೆಹಲಿಯ ವಿಷಯದಲ್ಲಿ, ಹೊಸ ಪ್ರಕರಣಗಳ ಕುಸಿತವು ಹೆಚ್ಚು ಸ್ಪಷ್ಟವಾಗಿದೆ. ಸರಾಸರಿ ದೈನಂದಿನ ಪ್ರಕರಣಗಳು ಮೇ 3 ಮತ್ತು ಮೇ 9 ರ ನಡುವೆ ಸುಮಾರು 18,000 ದಿಂದ ಮುಂದಿನ ವಾರ 10,000 ಕ್ಕೆ ಇಳಿದವು. ಮಹಾರಾಷ್ಟ್ರದಲ್ಲಿ, ಹೊಸ ಪ್ರಕರಣಗಳು ಕಡಿಮೆಯಾಗಿದ್ದರೆ, ಸಾವುಗಳು ಸ್ವಲ್ಪಮಟ್ಟಿಗೆ ಏರಿಕೆಯಾಗಿವೆ.
ಎಲ್ಲವನ್ನೂ ಮೀರಿಸಲು, ಉತ್ಪತ್ತಿ ದರವನ್ನು 0.9 ಕ್ಕೆ ಇಳಿಸುವುದರಿಂದ ಸಂಕೋಚನ ಕ್ರಮದಲ್ಲಿದ್ದೇವೆ ಎಂದು ಸೂಚಿಸುತ್ತದೆ. ಆದರೆ ಆರಂಭಿಕ ಚಿಹ್ನೆಗಳ ಬಗ್ಗೆ ಮಾತ್ರ ನೋಡುತ್ತಿದ್ದೇವೆ. ಯಾಕೆಂದರೆ ಮೊದಲನೇ ಅಲೆಯಲ್ಲಿಯೂ ಜನವರಿ ಹಾಗೂ ಫೆಬ್ರುವರಿಯಲ್ಲಿ ಬಹುತೇಕ ಕಡಿಮೆಯಾದಂತೆ ತೋರಿದ್ದ ದೈನಂದಿನ ಪ್ರಕರಣಗಳು ಹಾಗೂ ಸಾವುಗಳು ನಮ್ಮ ನಿರ್ಲಕ್ಷ್ಯದಿಂದ ಏರಲು ಪ್ರಾರಂಭಿಸಿ ಉಲ್ಬಣವು ದೇಶದ ಆರೋಗ್ಯ ವ್ಯವಸ್ಥೆಯನ್ನೇ ಮಂಡಿಯೂರುವಂತೆ ಮಾಡಿತು.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement