ಕರ್ನಾಟಕದ ಹಿರೇಬೆಣಕಲ್‌‌ ಸೇರಿ ಭಾರತದ 6 ಸ್ಥಳಗಳು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಸಂಭವನೀಯ ಪಟ್ಟಿಗೆ ಸೇರ್ಪಡೆ

ಕರ್ನಾಟಕದ ಹಿರೇಬೆಣಕಲ್‌ ಸೇರಿದಂತೆ ಭಾರತದ 6 ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ  ಸಂಭವನೀಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಈ ಮಾಹಿತಿ ನೀಡಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ದೇಶದಿಂದ 9 ಸ್ಥಳಗಳನ್ನು ಭಾರತ ಸರ್ಕಾರ ಕಳುಹಿಸಿತ್ತು. ಈ ಪೈಕಿ 6 ಸ್ಥಳಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಭವನೀಯ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ, ಭಾರತವು ವಾರಾಣಸಿಯಲ್ಲಿ ಗಂಗಾ ಘಾಟ್, ತಮಿಳುನಾಡಿನ ಕಾಂಚೀಪುರಂ ದೇವಸ್ಥಾನ, ಮಧ್ಯಪ್ರದೇಶದ ಸತ್ಪುರ ಟೈಗರ್ ರಿಸರ್ವ್, ಮಧ್ಯಪ್ರದೇಶದ ಜಬಲ್ಪುರದ ಭೇಡಾಘಾಟ್, ಮಹಾರಾಷ್ಟ್ರದ ಮರಾಠಾ ಮಿಲಿಟರಿ ಆರ್ಕಿಟೆಕ್ಚರ್ ಹಾಗೂ ಕರ್ನಾಟಕದ ಹಿರೆ ಬೆಣಕಲ್‌ ಸ್ಥಳಗಳನ್ನು ಪಟ್ಟಿಯಲ್ಲಿ ಸೇರಿಸಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇ ಬೆಣಕಲ್

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ಲ.ಈ ಸ್ಥಳದಲ್ಲಿ ಶಿಲಾಯುಗಕಾಲದ ಕಲ್ಲಿನ ಸಮಾಧಿಗಳು ಸುಮಾರು 400 ನೂರಕ್ಕೂ ಹೆಚ್ಚು ಸಿಕ್ಕಿವೆ.ಇಂಥ ಅಪರೂಪದ ಐತಿಹಾಸಿಕ ಸ್ಥಳ ಇದಾಗಿದೆ. ಕುಬ್ಜರ ಬೆಟ್ಟ ಎಂದು ಖ್ಯಾತಿ ಪಡೆದಿರುವ ಈ ಪ್ರದೇಶದಲ್ಲಿ 2001ರಲ್ಲಿ ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ಉತ್ಖನನ ನಡೆಸಿತ್ತು.
ಉತ್ಖನದ ವೇಳೆ ಸುಟ್ಟು ಕರಕಲಾದ ಪ್ರಾಣಿಯ ಮೂಳೆ ಮತ್ತು ಮಡಿಕೆ ಪತ್ತೆಯಾಗಿತ್ತು. ಸ್ಥಳೀಯರ ನಂಬಿಕೆಯ ಪ್ರಕಾರ ಇಲ್ಲಿ ಕುಬ್ಜರು ವಾಸವಾಗಿದ್ದರು. ಶೀಘ್ರದಲ್ಲಿ ಯುನೆಸ್ಕೋ ಅಂತಿಮ ಮುದ್ರೆ ಒತ್ತಲಿದೆ.
ಸಂಭವನೀಯ ಪಟ್ಟಿಯಲ್ಲಿ ಈ 6 ಸ್ಥಳಗಳನ್ನು ಸೇರಿದ ನಂತರ, ಭಾರತದಿಂದ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ನೀಡಲಾದ ಒಟ್ಟು ಹೆಸರುಗಳ ಸಂಖ್ಯೆ 48 ಕ್ಕೆ ಏರಿದೆ.
2020 ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಓರ್ಚಾ ನಗರಗಳನ್ನು ಯುನೆಸ್ಕೋ ವ್ಯಾಪ್ತಿಗೆ ತರಲಿದೆ. ವಿಶ್ವ ಪರಂಪರೆಯ ನಗರಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಓರ್ಚಾ ಎಂಬುದು ಭಗವಾನ್ ರಾಮನನ್ನು ರಾಜ ರಾಮ ಎಂದು ಪೂಜಿಸುವ ಸ್ಥಳವಾಗಿದೆ. ಗುಜರಾತಿನ ಅಹಮದಾಬಾದ್ ಅನ್ನು ಯುನೆಸ್ಕೋ ವಿಶ್ವ ಪರಂಪರೆಯ ನಗರವೆಂದು ಘೋಷಿಸಲಾಗಿದೆ. ವಿಶ್ವ ಪರಂಪರೆಯ ನಗರವೆಂದು ಘೋಷಿಸಲ್ಪಟ್ಟ ಭಾರತದ ಮೊದಲ ನಗರ ಅಹಮದಾಬಾದ್.
ಪ್ರಸ್ತುತ ಭಾರತದಲ್ಲಿ 48 ವಿಶ್ವ ಪರಂಪರೆಯ ತಾಣಗಳಾಗಿದ್ದು. ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಒಂದು ಸಾಂಸ್ಕೃತಿಕ ಮತ್ತು ಇನ್ನೊಂದು ನೈಸರ್ಗಿಕ. 2017 ರಲ್ಲಿ ಭಾರತದ ನಾಲ್ಕು ಸ್ಥಳಗಳಲ್ಲಿ ನಡೆದ ಕುಂಭ ಮೇಳವನ್ನು ಯುನೆಸ್ಕೋದ ಸಾಂಸ್ಕೃತಿಕ ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಯಿತು. ವಿಶ್ವಾದ್ಯಂತ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.
2019 ರಲ್ಲಿ, ಪಿಂಕ್ ಸಿಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೈಪುರದ (ಪಾರ್ಕೋಟಾ) ಗಡಿ ಗೋಡೆಯನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಯುನೆಸ್ಕೋ (ಯುನೈಟೆಡ್ ನೇಷನ್ ಎಜುಕೇಷನಲ್ ಸೈಂಟಿಫಿಕ್ ಕಲ್ಚರಲ್ ಆರ್ಗನೈಸೇಶನ್) ಸೇರಿಸಿತ್ತು.

ಪ್ರಮುಖ ಸುದ್ದಿ :-   ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತಕ್ಕೆ ? ದೆಹಲಿಗೆ ತೆರಳಲಿರುವ ಸಿಎಂ ಡಿಕೆ ಶಿವಕುಮಾರ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement