ಸಾಗರ್ ಧಂಕರ್ ಹತ್ಯೆ ಪ್ರಕರಣ: ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲಕುಮಾರ್ ಬಂಧನ:ವರದಿ

ನವ ದೆಹಲಿ: ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿ ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಸುಶೀಲಕುಮಾರ್ ಮತ್ತು ಸಹೋದ್ಯೋಗಿ ಅಜಯಕುಮಾರ್ ಅವರನ್ನು ಪಂಜಾಬಿನಲ್ಲಿ ಬಂಧಿಸಿದ್ದಾರೆ.
ಘಟನೆಯ ನಂತರ ಇಬ್ಬರೂ ಪರಾರಿಯಾಗಿದ್ದರು. 2021 ರ ಮೇ 4 ರಂದು ಜೂನಿಯರ್ ಚಾಂಪಿಯನ್‌ಶಿಪ್ ವಿಜೇತ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರನ್ನು ಛತ್ರಸಾಲ ಕ್ರೀಡಾಂಗಣದಲ್ಲಿ ಇತರ ಕುಸ್ತಿಪಟುಗಳು ಹೊಡೆದರು, ನಂತರ ಸಾಗರ್ ಸಾವಿಗೀಡಾದರು. ಘಟನೆಯ ಸಮಯದಲ್ಲಿ ಸುಶೀಲಕುಮಾರ್ ಅಲ್ಲಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಇದರ ನಂತರ, ಮಾಡೆಲ್ ಟೌನ್‌ನಲ್ಲಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರೋಹಿಣಿಯ ವಿಧಿವಿಜ್ಞಾನ ತಜ್ಞರು ಕೂಡ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಆದರೆ, ದೆಹಲಿ ಪೊಲೀಸರು ಸುಶೀಲಕುಮಾರ್ ಅವರ ಮನೆಗೆ ತಲುಪಿದಾಗ, ಅವರು ಅಲ್ಲಿಂದ ಕಾಣೆಯಾಗಿದ್ದರು. ಅಂದಿನಿಂದಲೂ ಸುಶೀಲಕುಮಾರ್ ಅವರ ಹುಡುಕಾಟ ಮುಂದುವರೆದಿತ್ತು. ಆತನ ವಿರುದ್ಧ ಲುಕ್‌ ಔಟ್ ನೋಟಿಸ್ ಕೂಡ ನೀಡಲಾಗಿದೆ. ಅದೇ ಸಮಯದಲ್ಲಿ ದೆಹಲಿ ಪೊಲೀಸರು ಸುಶೀಲಕುಮಾರ್ ಅವರ ಸುಳಿವು ನೀಡಿದವರಿಗೆ 1 ಲಕ್ಷ ರೂ ಮತ್ತು ಅವರ ಪಾಲುದಾರ ಅಜರಕುಮಾರ ಅವರಿಗೆ 50,000 ರೂ.ಬಹುಮಾನ ಘೋಷಿಸಿದ್ದರು.
ಈ ಹಿಂದೆ 24 ವರ್ಷದ ಪ್ರಿನ್ಸ್ ದಲಾಲ್ ಅವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅವರು ಹರಿಯಾಣದ ಝಾಜ್ಜರ್ ಮೂಲದವರು.
ಕುಸ್ತಿಪಟು ಸುಶೀಲಕುಮಾರ್ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. 2012 ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಸುಶೀಲ ಕುಮಾರ್ ಯಶಸ್ವಿಯಾಗಿದ್ದರು.

ಪ್ರಮುಖ ಸುದ್ದಿ :-   ಯುಪಿಐನಲ್ಲಿ ₹2,000ಕ್ಕಿಂತ ಹೆಚ್ಚಿನ ಹಣ ಪಾವತಿಗೆ ಶೇ. 0.4ರಷ್ಟು ಶುಲ್ಕ ; ಇದು ಯಾರಿಗೆ ಅನ್ವಯ, ಯಾರಿಗೆ ಎಂದಿನಂತೆ ಫ್ರೀ?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement