ನವ ದೆಹಲಿ: ಕೋವಿಡ್ ಸೋಂಕಿನ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಎರಡು ಆಯ್ಕೆಗಳನ್ನು ಸೂಚಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಗ್ರುಪ್ ಮುಂದೆ ಭಾನುವಾರ ಮಧ್ಯಾಹ್ನ ಪ್ರಸ್ತುತಿ ನೀಡಲಾಯಿತು. ಕಡಿಮೆ ಅವಧಿ ಪರೀಕ್ಷೆಗೆ ಸರ್ಕಾರ ಒಲವು ತೋರುವ ಸಾಧ್ಯತೆಯಿದೆ ಮತ್ತು ರಾಜ್ಯ ಮಂಡಳಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ
ಸಿಬಿಎಸ್ಇ ಬೋರ್ಡ್ ಪರೀಕ್ಷೆ -2021 ರದ್ದಾಗುವುದಿಲ್ಲ ಮತ್ತು ಕೋವಿಡ್ ಪ್ರೋಟೋಕಾಲ್ಗಳ ಮಧ್ಯೆ ಕಳೆದ ವರ್ಷದಂತೆ ಜುಲೈನಲ್ಲಿ ಪರೀಕ್ಷೆ ಹೆಚ್ಚಾಗಿ ನಡೆಯಲಿದೆ ಎಂದು ಕೇಂದ್ರ ಮತ್ತು ರಾಜ್ಯಗಳ ನಡುವೆ ಭಾನುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ.ಕಾಮ್ ವರದಿ ಮಾಡಿದೆ.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಫಾರ್ಮ್ಯಾಟ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಯ ದಿನಾಂಕಗಳನ್ನು ಜೂನ್ 1ರಂದು ಹಂಚಿಕೊಳ್ಳಲಿದ್ದಾರೆ ಎಮದು ವರದಿ ತಿಳಿಸಿದೆ.
19 ಪ್ರಮುಖ ವಿಷಯಗಳಲ್ಲಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಆಯ್ಕೆ ಬಗ್ಗೆ ಚರ್ಚಿಸಲಾಯಿತು ಮತ್ತು ಅನೇಕ ರಾಜ್ಯಗಳಿಂದ ಬೆಂಬಲವನ್ನು ಪಡೆಯಲಾಯಿತು. ಇತರ ವಿಷಯಗಳಿಗೆ, ಆಂತರಿಕ ಮೌಲ್ಯಮಾಪನಗಳಂತಹ ಮೌಲ್ಯಮಾಪನಕ್ಕಾಗಿ ಬೇರೆ ಮಾರ್ಗವನ್ನು ಹುಡುಕಬಹುದಾಗಿದೆ.
ಸಭೆಯಲ್ಲಿ ಮತ್ತೊಂದು ಆಯ್ಕೆಯನ್ನು ಚರ್ಚಿಸಲಾಗಿದೆ – ಶಾಲೆಗಳಲ್ಲಿ ಪ್ರಮುಖ ವಿಷಯಗಳಿಗೆ 90 ನಿಮಿಷಗಳ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವುದು. ಮುಂದಿನ ವಾರದಲ್ಲಿ ಆಯ್ಕೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ವಿವರವಾದ ಹೇಳಿಕೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ತಿಳಿಸಲಾಗಿದೆ.
12ನೇ ತರಗತಿ ಸಿಬಿಎಸ್ಇ ಮಂಡಳಿ ಪರೀಕ್ಷೆಯ 2021 ರ ನಡವಳಿಕೆಗೆ ಸಂಬಂಧಿಸಿದಂತೆ ಒಂದು ತಿಂಗಳಿಗೂ ಹೆಚ್ಚು ಅನಿಶ್ಚಿತತೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ನಿಯಮಿತವಾಗಿ ಟ್ವಿಟರ್ಗೆ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕರೆ ನೀಡಿದ್ದರು ಏಕೆಂದರೆ ಎರಡನೇ ಅಲೆಯಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ, ವಿಶೇಷವಾಗಿ ಕಿರಿಯರು ಮತ್ತು ಮಕ್ಕಳಲ್ಲಿಯೂ ಕೂಡ ಹೆಚ್ಚಾಗುತ್ತಿದೆ.
ಭಾನುವಾರ ನಡೆಸಿದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದರು. ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಮಹಿಳಾ ಮತ್ತು ಮಕ್ಕಳ ಸಚಿವ ಸ್ಮೃತಿ ಇರಾನಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಉಪಸ್ಥಿತರಿದ್ದರು.
ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳು ಮತ್ತು ರಾಜ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಪರೀಕ್ಷಾ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಅಲ್ಲದೆ, ಕೇಂದ್ರ ಶಿಕ್ಷಣ ಸಚಿವರು ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಇತರರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಬೋರ್ಡ್ ಪರೀಕ್ಷೆಗಳು ಮತ್ತು ಇತರ ಪರೀಕ್ಷೆಗಳಿಗೆ ಸಂಬಂಧಿಸಿದ ತಮ್ಮ ಅಮೂಲ್ಯ ಸಲಹೆಗಳನ್ನು ಹಂಚಿಕೊಳ್ಳಲು ಕೇಳಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ