ಲಾಕ್‌ಡೌನ್‌ ಉಲ್ಲಂಘನೆ: ಮೊಬೈಲ್‌ ಫೋನ್ ಒಡೆದು ಯುವಕನಿಗೆ ಕಪಾಳಮೋಕ್ಷ ಮಾಡಿದ ಜಿಲ್ಲಾಧಿಕಾರಿ..!

ಛತ್ತೀಸ್‌ಗಡದ ಜಿಲ್ಲಾಧಿಕಾರಿ ಶನಿವಾರ ರಾಜ್ಯವ್ಯಾಪಿ ಲಾಕ್‌ಡೌನ್‌ ಮಧ್ಯೆ ಔಷಧಿಗಳನ್ನು ಖರೀದಿಸಲು ಹೊರಟಿರುವುದಾಗಿ ಹೇಳಿಕೊಂಡಿದ್ದ  ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.   ಜಿಲ್ಲಾಧಿಕಾರಿ   ಆತನಿಗೆ  ಥಳಿಸುವಂತೆ  ಪೊಲೀಸರಿಗೆ ಸೂಚಿಸಿದರು ಮತ್ತು  ಎಫ್ಐಆರ್ ದಾಖಲಿಸಲು ಆದೇಶಿಸಿದರು.

ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಛತ್ತೀಸ್‌ಗಡದ ಸೂರಜ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ, ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಯುವಕನ ಫೋನ್ ತೆಗೆದುಕೊಂಡು ನಂತರ ಅದನ್ನು ರಸ್ತೆಗೆ ಅಪ್ಪಳಿಸಿ ಒಡೆದಿದ್ದಾರೆ.
ಆ ಯುವಕ ಲಾಕ್ ಡೌನ್ ಸಮಯದಲ್ಲಿ ತಾನೆ ಏಕೆ ಹೊರಗೆ ಬಂದಿದ್ದೆ ಎಂಬುದನ್ನು ವಿವರಿಸಲು ಕೆಲವು ಪೇಪರ್‌ಗಳನ್ನು ತೋರಿಸಲು ಪ್ರಯತ್ನಿಸುತ್ತಿರುವಾಗಲೂ ಜಿಲ್ಲಾಧಿಕಾರಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಆಗ ಕೆಲವು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸುತ್ತಾರೆ, ಮತ್ತು ಅವರಲ್ಲಿ ಒಬ್ಬ ಯುವಕನಿಗೆ ಹೊಡೆಯಲು ಪ್ರಾರಂಭಿಸುತ್ತಾನೆ. ಏತನ್ಮಧ್ಯೆ, ಜಿಲ್ಲಾಧಿಕಾರಿಯು ನೋಡುತ್ತ ಮಾರೊ ಐಸಿ” (ಹಾಗೆ ಹೊಡೆಯಿರಿ) ಎಂದು ಹೇಳುತ್ತಾರೆ.
ಘಟನೆ ಮತ್ತು ವೈರಲ್ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವಾಲಯದ ಅಂತರ ರಾಜ್ಯ ಕೌನ್ಸಿಲ್ ಸಚಿವಾಲಯದ ಕಾರ್ಯದರ್ಶಿ ಸಂಜೀವ್ ಗುಪ್ತಾ, ಜಿಲ್ಲಾಧಿಕಾರಿಯ ಕೃತ್ಯವು ತಿರಸ್ಕಾರಾರ್ಹ ಮತ್ತು “ಐಎಎಸ್ ಅಧಿಕಾರಿಯಾಗಲು ಅನರ್ಹ” ಎಂದು ಹೇಳಿದರು. ಈ ವಿಷಯದ ಕುರಿತು ಛತ್ತೀಸ್‌ಗಡದ ಮುಖ್ಯ ಕಾರ್ಯದರ್ಶಿಯೊಂದಿಗೆ ಕೂಡ ಮಾತಾಡಿದ್ದೇನೆ ಎಂದು ಹೇಳಿದರು.
ಐಎಎಸ್ ಅಧಿಕಾರಿಯ ಅನೈತಿಕ ವರ್ತನೆ.ಈ ರೀತಿ ಹೊಡೆಯುವುದು, ಫೋನ್ ಒಡೆಯುವುದು. ಗೋರಾ ಸಾಹಿಬ್ ಸಿಂಡ್ರೋಮ್! ಅವರು ಹೆಚ್ಚು ಘನತೆಯಿಂದ ಪರಿಶೀಲಿಸಬಹುದಿತ್ತು ಅಥವಾ ಅತಿ ವೇಗದಲ್ಲಿ ಬೈಕ್‌ ಓಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲಿ. ನಾನು ಅದನ್ನು ಛತ್ತಿಸಗಡದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದೇನೆ , ಎಂದು ಸಂಜೀವ್ ಗುಪ್ತಾ ಟ್ವೀಟ್ ಮಾಡಿದ್ದಾರೆ.
ಘಟನೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಆ ಯುವಕನ ಮೇಲೆ ಅತಿ ವೇಗ ಚಾಲನೆ ಆರೋಪ ಹೊರಿಸಲಾಗಿದೆ ಎಂದು ಹೇಳಿದೆ.
ಆತ 23 ವರ್ಷದ ಯುವಕ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. (ಅವನಿಂದ) ಆ ವ್ಯಕ್ತಿಯು ತನ್ನ ಬೈಕ್‌ನಲ್ಲಿ ವೇಗವಾಗಿ ಓಡುತ್ತಿದ್ದ ಮತ್ತು ಪಟ್ಟಣವು ಲಾಕ್‌ಡೌನ್‌ನಲ್ಲಿದ್ದಾಗ ತಾನು ಏಕೆ ಹೊರಗೆ ಬಂದಿದ್ದೇನೆಂದು ಸರಿಯಾಗಿ ವಿವರಿಸಲಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪೊಲೀಸರು ಆತನನ್ನು ತಡೆಯಲು ಪ್ರಯತ್ನಿಸಿದಾಗ, ಅವರು ಬೈಕ್ ಅನ್ನು ಅತಿವೇಗದಿಂದ ಓಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರ, ನಂತರ ಹೊರಗೆ ಬಂದ ಕಾರಣ ಕೇಳಿದಾಗ ಅವರು ಎರಡು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾನೆ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement