ಅಧಿಕಾರಿಗಳ ಕಂಡು ವಧುವನ್ನು ಮಂಟಪದಲ್ಲೇ ಬಿಟ್ಟು ವರ ಮಹಾಶಯ ಪರಾರಿ..!

ಚಿಕ್ಕಮಗಳೂರು: ಕೊರೊನಾ ಸೋಂಕು ಉಲ್ಬಣದ ಕಾರಣದಿಂದಾಗಿ ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಹೀಗಾಗಿ ಮದುವೆ-ಸಮಾರಂಭಗಳನ್ನು ಆದಷ್ಟು ಕಡಿಮೆ ಮಾಡಲು ಜೊತೆಗೆ ಮದುವೆ ಮಾಡಿದರೂ ಅದಕ್ಕೂ ಜನರನ್ನು ಸೇರಿಸುವುದನ್ನು ಮಿತಿಗೊಳಿಸಲಾಗಿದೆ. ಆದರೂ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮಧುವನ್ನು ಮಂಟಪದಲ್ಲೇ ಬಿಟ್ಟು ವರ ಪರಾರಿಯಾದ ಘಟನೆ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಮದುವೆಯ ಆರ್ಭಟ ಜೋರಾಗಿ ನಡೆಯುತ್ತಿತ್ತು. ಕೊವಿಡ್​ ನಿಯಮ ಉಲ್ಲಂಘಿಸಿ ಅದ್ದೂರಿ ಮದುವೆಗೆ ಏರ್ಪಾಟು ಮಾಡಲಾಗಿತ್ತು. ಅಧಿಕಾರಿಗಳ ಬಳಿ ಕೇವಲ 10 ಜನರಿಗೆ ಮಾತ್ರ ಅನುಮತಿ ಪಡೆದು ನೂರಾರು ಮಂದಿಗೆ ಆಹ್ವಾನ ನೀಡಿ ಮದುವೆ ನಡೆಸಲಾಗಿತ್ತು. ಬಂದ ಅತಿಥಿಗಳಿಗೆ ಭಾರೀ ಭೋಜನದ ವ್ಯವಸ್ಥೆ ಸಹ ಮಾಡಲಾಗಿತ್ತು. ಭರ್ಜರಿ ಪೆಂಡಾಲ್‌ ಹಾಕಲಾಗಿತ್ತು. ಬಂದ ಜನರಿಗೆ ಟೇಬಲ್‌ ಊಟದ ವ್ಯವಸ್ಥೆ ಮಾಡಲಾಗಿತ್ತು.ಆದರೆ ಮದುವೆಯಲ್ಲಿ ನೂರಾರು ಆಗಮಿಸಿದ್ದರು. ಆದರೆ ಇದೆಲ್ಲವೂ ಪ್ರಯೋಜನಕ್ಕೆ ಬಾರದೇ ಹೋಯಿತು. ಕೊವಿಡ್​ ನಿಯಮ ಉಲ್ಲಂಘನೆ ಮಾಡಿ ಅದ್ಧೂರಿ ಮದುವೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯತದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಅವರನ್ನು ಮದುವೆ ಮಂಟಪದ ಬಳಿ ಕಂಡಿದ್ದೇ ತಡ, ವರ ಮಹಾಶಯ ವಧುವನ್ನು ಮಂಟಪದಲ್ಲೇ ಬಿಟ್ಟು ಕ್ಷಣ ಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಅಧಿಕಾರಿಗಳನ್ನು ಕಂಡ ಜನರೂ ಕಾಲ್ಕಿತ್ತಿದ್ದಾರೆ. ಮದುವೆ ಊಟಕ್ಕೆ ಕುಳಿತಿದ್ದವರು ಕೂಡ ಅರ್ಧಕ್ಕೇ ಭೋಜನ ಬಿಟ್ಟು ಓಡಿ ಹೋಗಿದ್ದಾರೆ.

ಪ್ರಮುಖ ಸುದ್ದಿ :-   ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement