ನವ ದೆಹಲಿ: ಹೆಚ್ಚುತ್ತಿರುವ ಕೊವಿಡ್ -19 ಪ್ರಕರಣಗಳಿಂದಾಗಿ ಆರೋಗ್ಯ ವ್ಯವಸ್ಥೆಗಳ ಮೇಲೆ ತೀವ್ರ ಹೊರೆ ಬೀರುತ್ತಿವೆ ಮತ್ತು ಈ ರೀತಿಯ ಸಮಯದಲ್ಲಿ, ಕೊರೊನಾ ವೈರಸ್‌ಗಾಗಿ ನವೀನ ಸ್ವ-ಪರೀಕ್ಷಾ ವಿಧಾನವು ಒಬ್ಬರಿಗೆ ಸುಲಭ ಮತ್ತು ತ್ವರಿತ ಫಲಿತಾಂಶಗಳನ್ನು ಪಡೆಯುವ ಸಮಯದ ಅವಶ್ಯಕತೆಯಾಗಿದೆ.
ಐಸಿಎಂಆರ್-ಅನುಮೋದಿತ ಕೊವಿಡ್-19 ಸ್ವಯಂ-ಪರೀಕ್ಷಾ ಕಿಟ್ ಕೇವಲ 15 ನಿಮಿಷಗಳಲ್ಲಿ ಸೋಂಕಿನ ಫಲಿತಾಂಶಗಳನ್ನು ನೀಡುತ್ತದೆ.
ಅದೇ ರೀತಿ ಇತ್ತೀಚೆಗೆ, ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ತೈವಾನ್‌ನ ರಾಷ್ಟ್ರೀಯ ಚಿಯಾವೊ ತುಂಗ್ ವಿಶ್ವವಿದ್ಯಾಲಯದ ಸಂಶೋಧಕರು, ಕೋವಿಡ್ -19 ಬಯೋಮಾರ್ಕರ್‌ಗಳಿಗಾಗಿ ತ್ವರಿತ ಮತ್ತು ಸೂಕ್ಷ್ಮ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅಮೇರಿಕನ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ತಿಳಿಸಿದೆ.
ಕುತೂಹಲಕಾರಿಯಾಗಿ, ಅವರ ಸಂವೇದಕ ವ್ಯವಸ್ಥೆಯು ಒಂದು ಸೆಕೆಂಡಿನೊಳಗೆ ಪತ್ತೆ ಹಚ್ಚಿ ಫಲಿತಾಂಶವನ್ನು ನೀಡುತ್ತದೆಯಂತೆ. ಈ ಬಗ್ಗೆ ಜರ್ನಲ್ ಆಫ್ ವ್ಯಾಕ್ಯೂಮ್ ಸೈನ್ಸ್ ಮತ್ತು ಟೆಕ್ನಾಲಜಿ ಬಿ ಅಧ್ಯಯನದಲ್ಲಿ ವಿವರಿಸಲಾಗಿದೆ.
ಇದು ನಿಧಾನಗತಿಯ ಕೋವಿಡ್ -19 ಪರೀಕ್ಷಾ ಸಮಯದ ಸಮಸ್ಯೆಗಳನ್ನು ನಿವಾರಿಸುತ್ತದೆ” ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ಮತ್ತು ಡಾಕ್ಟರೇಟ್ ಅಭ್ಯರ್ಥಿ ಮಿಂಗ್ಹಾನ್ ಕ್ಸಿಯಾನ್ ಅವರು ಜರ್ನಲ್ ಅನ್ನು ಪ್ರಕಟಿಸುವ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಪರೀಕ್ಷೆ ಹೇಗೆ ನಡೆಸಲಾಗುತ್ತದೆ ?
ವೈರಸ್ ಇರುವಿಕೆ ಕಂಡುಹಿಡಿಯಲು ಬಯೋಮಾರ್ಕರ್‌ನ ಸಂಖ್ಯೆ ವರ್ಧಿಸುವ ಅಗತ್ಯವಿದೆ (ಉದಾಹರಣೆಗೆ ಕೋವಿಡ್ -19 ಪತ್ತೆಗಾಗಿ ಸಾಮಾನ್ಯ ಆರ್‌ಟಿ-ಪಿಸಿಆರ್ ತಂತ್ರದಲ್ಲಿ ವೈರಲ್ ಆರ್‌ಎನ್‌ಎ ಪ್ರತಿಗಳು) ಅಥವಾ ಬಯೋಮಾರ್ಕರ್‌ಗೆ ಒಳಪಡಿಸವ ಸಂಕೇತವನ್ನು ವರ್ಧಿಸುವ ಟಾರ್ಗೆಟ್, ಇಲ್ಲಿ ಎರಡನೇ ತಂತ್ರವನ್ನು ಬಳಸಲಾಗಿದೆ.
ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದು ಇಲ್ಲಿದೆ…
ಪರೀಕ್ಷೆಯು ಬಯೋಸೆನ್ಸರ್ ಸ್ಟ್ರಿಪ್ ಬಳಸುತ್ತದೆ, ಅದು ವಾಣಿಜ್ಯಿಕವಾಗಿ ಲಭ್ಯವಿರುವ ಗ್ಲೂಕೋಸ್ ಟೆಸ್ಟ್ ಸ್ಟ್ರಿಪ್‌ಗಳ ಆಕಾರದಲ್ಲಿದೆ. ಪರೀಕ್ಷಾ ದ್ರವವನ್ನು ಪರಿಚಯಿಸಲು ತುದಿಯಲ್ಲಿ ಸಣ್ಣ ಮೈಕ್ರೋಫ್ಲೂಯಿಡ್ ಚಾನಲ್ ಇದೆ. “ಮೈಕ್ರೋಫ್ಲೂಯಿಡಿಕ್ ಚಾನಲ್ ಒಳಗೆ, ಕೆಲವು ವಿದ್ಯುದ್ವಾರಗಳು ದ್ರವಕ್ಕೆ ಒಡ್ಡಿಕೊಳ್ಳುತ್ತವೆ. ಒಂದನ್ನು ಚಿನ್ನದಿಂದ ಲೇಪಿಸಲಾಗಿದೆ ಮತ್ತು ಕೋವಿಡ್-ಸಂಬಂಧಿತ ಪ್ರತಿಕಾಯಗಳನ್ನು ರಾಸಾಯನಿಕ ವಿಧಾನದ ಮೂಲಕ ಚಿನ್ನದ ಮೇಲ್ಮೈಗೆ ಜೋಡಿಸಲಾಗುತ್ತದೆ ಎಂದು ಕ್ಸಿಯಾನ್ ಹೇಳಿದ್ದಾರೆ.
ಮಾಪನದ ಸಮಯದಲ್ಲಿ, ಸಂವೇದಕ ಪಟ್ಟಿಗಳನ್ನು ಕನೆಕ್ಟರ್ ಮೂಲಕ ಸರ್ಕ್ಯೂಟ್ ಬೋರ್ಡ್‌ಗೆ ಸಂಪರ್ಕಿಸಲಾಗಿದೆ, ಮತ್ತು ಸಣ್ಣ ವಿದ್ಯುತ್ ಪರೀಕ್ಷಾ ಸಂಕೇತವನ್ನು ಕೋವಿಡ್ ಪ್ರತಿಕಾಯದಿಂದ ಬಂಧಿತವಾದ ಚಿನ್ನದ ವಿದ್ಯುದ್ವಾರದ ಮತ್ತು ಮತ್ತೊಂದು ಸಹಾಯಕ ವಿದ್ಯುದ್ವಾರದ ಮಧ್ಯೆ ಕಳುಹಿಸಲಾಗುತ್ತದೆ. ಈ ಸಂಕೇತವನ್ನು ನಂತರ ವಿಶ್ಲೇಷಣೆಗಾಗಿ ಸರ್ಕ್ಯೂಟ್ ಬೋರ್ಡ್‌ಗೆ ಹಿಂತಿರುಗಿಸಲಾಗುತ್ತದೆ.
ಸಿಸ್ಟಮ್‌ನ ಸಂವೇದಕ ಪಟ್ಟಿಗಳನ್ನು ಬಳಕೆಯ ನಂತರ ಎಸಯಬೇಕು, ಆದರೆ ಟೆಸ್ಟ್ ಸರ್ಕ್ಯೂಟ್ ಬೋರ್ಡ್ ಅನ್ನು ಮರುಬಳಕೆ ಮಾಡಬಹುದು. ಇದರರ್ಥ ಪರೀಕ್ಷೆಯ ವೆಚ್ಚವನ್ನು ಬಹಳವಾಗಿ ಕಡಿಮೆ ಮಾಡಬಹುದು.
ಇದು ಅಸಾಧಾರಣವಲ್ಲವೇ? ನಮ್ಮ ಆರೋಗ್ಯ ಕಾರ್ಯಕರ್ತರ ಹೊರೆ ಸರಾಗವಾಗಿಸಲು ಸೋಂಕನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ನಮಗೆ ಇಂತಹ ಇನ್ನಷ್ಟು ಸೃಜನಶೀಲ ವಿಧಾನಗಳು ಬೇಕಾಗುತ್ತವೆ.


ನಿಮ್ಮ ಕಾಮೆಂಟ್ ಬರೆಯಿರಿ