ಬೆಂಗಳೂರಲ್ಲಿ ತಿಂಗಳ ನಂತರ 6 ಸಾವಿರಕ್ಕಿಂತ ಕಡಿಮೆ ಬಂದ ದೈನಂದಿನ ಕೊರೊನಾ ಸೋಂಕು

ಸೋಂಕು..!

ಬೆಂಗಳೂರು:ಕರ್ನಾಟಕದಲ್ಲಿ ಗುರುವಾರ ಕೊರೋನಾ 24,214 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ ಎಂದು ರಾಜ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,23,998 ಕ್ಕೆ ಏರಿಕೆಯಾಗಿದೆ.ಇದೇ ಸಮಯದಲ್ಲಿ 476 ಮಂದಿ ಸೋಂಕಿತರು ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 27,405ಕ್ಕೆ ಏರಿಕೆಯಾಗಿದೆ.ಇದೇವೇಳೆ 31,459 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿ ಆಸ್ಪತ್ತೆರಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 20,94,369 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 4,02,203 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ 5949 ಜನರಿಗೆ ಸೋಂಕು ತಗಲಿದ್ದು, ಅನೇಕ ದಿನಗಳ ನಂತರ ಆರು ಸಾವಿರದ ಕೆಳಗೆ ಪ್ರಕರಣ ವರದಿಯಾಗಿದೆ. 6643 ಜನ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. 2,06,390 ಸಕ್ರಿಯ ಪ್ರಕರಣಗಳಿದ್ದು, 273 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಗಳಲ್ಲಿ ಕೂಡ ಸಾವಿನ ಸಂಖ್ಯೆ ಏರಿಕೆಯಾಗಿದೆ. ಬಳ್ಳಾರಿ 22, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 13, ಚಿಕ್ಕಬಳ್ಳಾಪುರ 11, ಧಾರವಾಡ 15, ಮೈಸೂರು 18, ತುಮಕೂರು 14, ಉತ್ತರಕನ್ನಡ ಜಿಲ್ಲೆಯಲ್ಲಿ 13 ಮಂದಿ ಸೇರಿದಂತೆ ರಾಜ್ಯದಲ್ಲಿ ಗುರುವಾರ 476 ಮಂದಿ ಮೃತಪಟ್ಟಿದ್ದಾರೆ,
ಜಿಲ್ಲಾವಾರು ಸಂಪೂರ್ಣ ವಿವರಗಳನ್ನು ಪಿಎಡ್‌ನಲ್ಲಿ ಕೆಳಗೆ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

27-05-2021 HMB Kannada

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement