ಮಹತ್ವದ ನಿರ್ಧಾರ.. ಈಗ ವೃದ್ಧರು, ವಿಕಲಚೇತನರಿಗೆ ಮನೆ ಸಮೀಪವೇ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳು: ಕೇಂದ್ರದಿಂದ ಮಾರ್ಗಸೂಚಿ

ನವ ದೆಹಲಿ: ಹಿರಿಯ ನಾಗರಿಕರು ತಮ್ಮ ಮೊದಲ ಡೋಸ್ ಕೋವಿಡ್ -19 ಲಸಿಕೆ ಪಡೆಯುವವರಿಗೆ ಅಥವಾ ಮೊದಲ ಡೋಸ್ ತೆಗೆದುಕೊಂಡವರಿಗೆ ಈಗ ಎರಡನೇ ಡೋಸನ್ನು ತಮ್ಮ ಮನೆಗೆ ಸಮೀಪವಿರುವ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಡೋಸ್‌ ಪಡೆಯಬಹುದು. ಈ ಸೌಲಭ್ಯವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಕಲಚೇತನರನ್ನು ಸಹ ಒಳಗೊಂಡಿರುತ್ತದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಆದಾಗ್ಯೂ, ಇದು ಮನೆ-ಮನೆಗೆ-ವ್ಯಾಕ್ಸಿನೇಷನ್ ಎಂದರ್ಥವಲ್ಲ ಎಂದು ತಿಳಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋವಿಡ್ -19 ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ  ತಜ್ಞರ ಸಮಿತಿಯು ವೃದ್ಧರು ಮತ್ತು ವಿಕಲಚೇತನ ನಾಗರಿಕರಿಗಾಗಿ ‘ಮನೆಗೆ ಹತ್ತಿರ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳು’ (ಎನ್‌ಎಚ್‌ಸಿವಿಸಿ) ಗಾಗಿ ಮಾರ್ಗಸೂಚಿಗಳ ಕುರಿತು ಪ್ರಸ್ತಾವನೆಯನ್ನು ಶಿಫಾರಸು ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ ಶಿಫಾರಸುಗಳನ್ನು ಅಂಗೀಕರಿಸಿದ ಸಚಿವಾಲಯ, ವಯಸ್ಸಾದ ಮತ್ತು ವಿಭಿನ್ನ ಸಾಮರ್ಥ್ಯದ ನಾಗರಿಕರಿಗಾಗಿ ಎನ್‌ಎಚ್‌ಸಿವಿಸಿ “ಸಮುದಾಯ ಆಧಾರಿತ, ಹೊಂದಿಕೊಳ್ಳುವ ಮತ್ತು ಜನರು ಕೇಂದ್ರಿತ ವಿಧಾನವನ್ನು ಅನುಸರಿಸುತ್ತದೆ, ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮನೆಗಳಿಗೆ ಹತ್ತಿರ ತರಲಿದೆ” ಎಂದು ಹೇಳಿದೆ.
ಈ ಶಿಫಾರಸುಗಳು ಹಿರಿಯ ನಾಗರಿಕರಿಗೆ ಹಾಗೂ ಅವರ ದೈಹಿಕ ಸ್ಥಿತಿಯ ಕಾರಣದಿಂದಾಗಿ ಸೀಮಿತ ಚಲನಶೀಲತೆ ಹೊಂದಿರುವ ವಿಭಿನ್ನ ಸಾಮರ್ಥ್ಯವುಳ್ಳವರಿಗೆ ಲಸಿಕೆ ನೀಡುವುದನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿವೆ.
ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನುತೆತೆದುಕೊಂಡು ವ್ಯಾಕ್ಸಿನೇಷನ್ ಸೇವೆಗಳನ್ನು ಸಮುದಾಯಕ್ಕೆ ಹತ್ತಿರ ತರುವ ಮೂಲಕ ಡೋಸ್‌ ತೆಗೆದುಕೊಳ್ಳುವುದನ್ನು ಹೆಚ್ಚಿಸುವುದಕ್ಕೆ ಈ ಶಿಫಾರಸುಗಳು ಪ್ರತಿಕ್ರಿಯೆಯಾಗಿವೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಲೋಕಸಭಾ ಚುನಾವಣೆ : ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿಸಿದ ಶಾಸಕ ; ತಿರುಗಿ ಬಾರಿಸಿದ ಮತದಾರ...ಮುಂದಾಗಿದ್ದೇನೆಂದರೆ....

ಎನ್‌ಎಚ್‌ಸಿವಿಸಿಯಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್‌ಗೆ ಅರ್ಹರಾದವರು:
ವ್ಯಾಕ್ಸಿನೇಷನ್ ತೆಗೆದುಕೊಳ್ಳದ ಅಥವಾ ಮೊದಲ ಡೋಸ್ ವ್ಯಾಕ್ಸಿನೇಷನ್ ಪಡೆದ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು.
ದೈಹಿಕ ಅಥವಾ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳು
ಈ ವಿಶೇಷ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಆರೋಗ್ಯೇತರ ಸೌಲಭ್ಯ ಆಧಾರಿತ ಸೆಟ್ಟಿಂಗ್‌ಗಳಲ್ಲಿ ಸ್ಥಾಪಿಸಬಹುದು. ಉದಾಹರಣೆಗೆ ಸಮುದಾಯ ಕೇಂದ್ರ, ಆರ್‌ಡಬ್ಲ್ಯೂಎ ಕೇಂದ್ರ / ಕಚೇರಿ, ಪಂಚಾಯತ್ ಕಚೇರಿ, ಶಾಲಾ ಕಟ್ಟಡಗಳು, ವೃದ್ಧಾಶ್ರಮಗಳು ಇತ್ಯಾದಿಗಳಲ್ಲಿ ಸ್ಥಾಪಿಸಬಹುದು ಎಂದು ಸಚಿವಾಲಯ ಹೇಳಿದೆ.
ಸಮುದಾಯ ಗುಂಪುಗಳು ಮತ್ತು ಆರ್‌ಡಬ್ಲ್ಯೂಎಗಳ ಸಹಯೋಗದೊಂದಿಗೆ ಎನ್‌ಎಚ್‌ಸಿವಿಸಿಯ ತಾಣವನ್ನು ಮೊದಲೇ ಗುರುತಿಸಲಾಗುವುದು. ಅಂತಹ ಸೈಟ್‌ಗಳು ವ್ಯಾಕ್ಸಿನೇಷನ್ ಕೊಠಡಿ ಮತ್ತು ಗುರಿ ಗುಂಪಿಗೆ ಸೂಕ್ತವಾದ ಪ್ರವೇಶವನ್ನು ಹೊಂದಿರುವ ಕಾಯುವ ಪ್ರದೇಶವನ್ನು ಹೊಂದಿರಬೇಕು ಉದಾ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಗಾಲಿ ಕುರ್ಚಿ ಮೂಲಕ ಪ್ರವೇಶ ಮತ್ತು 30 ನಿಮಿಷಗಳ ನಂತರದ ವ್ಯಾಕ್ಸಿನೇಷನ್‌ಗೆ ಕಾಯುವುದನ್ನು ಖಚಿತಪಡಿಸಿಕೊಳ್ಳಲು ವೀಕ್ಷಣಾ ಕೊಠಡಿಗಾಗಿ ರಾಂಪ್ ಇರಬೇಕು.

ಖಚಿತಪಡಿಸಿಕೊಳ್ಳಲು ಸಚಿವಾಲಯವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ:
*ಮುಂಚಿತವಾಗಿಫಲಾನುಭವಿಗಳ ನೋಂದಣಿ ಮತ್ತು ನೇಮಕಾತಿ , ಆನ್-ಸೈಟ್ ಅಥವಾ ಕೋ-ವಿನ್ನಲ್ಲಿ ಸುಸಜ್ಜಿತ ನೋಂದಣಿ ಪ್ರಕ್ರಿಯೆಗೆ ಅನುಕೂಲವಾಗಿಸುವುದು.
*ಫಲಾನುಭವಿಗಳ ಸಾಲು ಪಟ್ಟಿ
*ಎನ್‌ಎಚ್‌ಸಿವಿಸಿ ಸೈಟ್‌ನ ಗುರುತಿಸುವಿಕೆ ಮತ್ತು ಅಸ್ತಿತ್ವದಲ್ಲಿರುವ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳೊಂದಿಗೆ ಸಂಪರ್ಕ
*ಎನ್‌ಎಚ್‌ಸಿವಿಸಿಯಲ್ಲಿ ವ್ಯಾಕ್ಸಿನೇಷನ್ ಅವಧಿಗಳಿಗೆ ಸೂಕ್ಷ್ಮ ಯೋಜನೆ
೮ಅಗತ್ಯವಿರುವಲ್ಲಿ ಸೆಷನ್ ಸೈಟಿಗೆ ವಯಸ್ಸಾದವರು ಮತ್ತು ವಿಶೇಷ ಅಗತ್ಯವಿರುವ ವ್ಯಕ್ತಿಗಳ ಪ್ರಯಾಣವನ್ನು ಸುಗಮಗೊಳಿಸಿ
ವ್ಯಾಕ್ಸಿನೇಷನ್ ಕೇಂದ್ರವನ್ನು ವೃದ್ಧರು ಮತ್ತು ವಿಶೇಷ ಅಗತ್ಯವಿರುವ ವ್ಯಕ್ತಿಗಳಿಗೆ ಸ್ನೇಹಪರವಾಗಿಸುವುದು ಎಂದು ಸಚಿವಾಲಯವು ತಿಳಿಸಿದೆ.

ಪ್ರಮುಖ ಸುದ್ದಿ :-   ಮುಂಬೈ : ಧೂಳಿನ ಬಿರುಗಾಳಿಗೆ 100 ಅಡಿ ಎತ್ತರದ ಬೃಹತ್‌ ಹೋರ್ಡಿಂಗ್ ಬಿದ್ದು 4 ಮಂದಿ ಸಾವು, 65 ಜನರಿಗೆ ಗಾಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement