ಕವಿವಿ ಗ್ರಂಥಾಲಯ, ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ವಿರಳ ವ್ಯಕ್ತಿತ್ವದ ಪ್ರೊ. ಬಿಡಿಕೆ ಮೇ ೩೧ರಂದು ವೃತ್ತಿಯಿಂದ ನಿವೃತ್ತಿ

posted in: ಅಂಕಣಗಳು | 8

(ಡಾ. ಬಿ.ಡಿ. ಕುಂಬಾರ ಅವರು ೩೧.೦೫.೨೦೨೧ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾಗಲಿದ್ದು, ಆ ನಿಮಿತ್ತ ಲೇಖನ)

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ವಿಸ್ತಾರ, ವ್ಯಾಪ್ತಿ ಸ್ವರೂಪ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂತಹ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯವನ್ನು ಅಚ್ಚುಕಟ್ಟಾಗಿ ಬೋಧಿಸಿ ವಿದ್ಯಾರ್ಥಿಗಳಲ್ಲಿ ಈ ಕ್ಷೇತ್ರದ ಕುರಿತು ಆಸಕ್ತಿ ಮಾಡುವಂತೆ ಮಾಡಿರುವ ವಿರಳ ವ್ಯಕ್ತಿಗಳಲ್ಲಿ ಡಾ. ಬಿ.ಡಿ. ಕುಂಬಾರ ಪ್ರಮುಖರು. ಬಸವಂತಪ್ಪ ದೊಡ್ಡಮಲ್ಲಪ್ಪ ಕುಂಬಾರ ಅವರು ವಿದ್ಯಾರ್ಥಿಗಳು ಮತ್ತು ಸ್ನೇಹಿತರ ಬಳಗದಲ್ಲಿ ಬಿ.ಡಿ.ಕೆ. ಎಂದೇ ಚಿರಪರಿಚಿತರು.
ಡಾ. ಬಿ. ಡಿ. ಕುಂಬಾರ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ವಯಸ್ಸು ೬೨, (ಜನನ ೦೧-೦೬-೧೯೫೯) ಡಾ. ಬಿ.ಡಿ. ಕುಂಬಾರ ಅವರು ಇತಿಹಾಸ ಮತ್ತು ಶಿಲ್ಪಕಲಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಎಂ.ಎ. ಪದವಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿಯೂ ಸ್ನಾತಕೋತ್ತರ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಫೈನಾನ್ಸಿಸಿಂಗ್ ಆಫ್ ಪಬ್ಲಿಕ್ ಲೈಬ್ರರಿಸ್ ಇನ್ ಕರ್ನಾಟಕ : ಎ ಕ್ರಿಟಿಕಲ್ ಎನೆಲೈಸಿಸ್ ವಿಷಯದ ಮೇಲೆ ಪಿ.ಎಚ್.ಡಿ. ಪದವಿಯನ್ನು ಡಾ. ಸಿ.ಆರ್. ಕರಸಿದ್ಧಪ್ಪ ಅವರ ಮಾರ್ಗದರ್ಶನದಲ್ಲಿ ೧೯೯೪ ರಲ್ಲಿ ಪಡೆದಿದ್ದಾರೆ.
೧೯೮೪ ರಿಂದ ೮೬ರ ವರೆಗೆ ಬೆಳಗಾವಿಯ ಕೆ.ಎಸ್.ಆರ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಎರಡು ವರ್ಷ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ಸೆಪ್ಟೆಂಬರ್ ೧೯೮೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ. ೧೯೯೭ ರಿಂದ ೨೦೦೫ ರ ವರೆಗೆ ಪ್ರವಾಚಕರಾಗಿ ಮತ್ತು ೨೦೦೫ ರಿಂದ ಪ್ರಾಧ್ಯಾಪಕರಾಗಿ ಇದೇ ವಿಭಾಗದಲ್ಲಿ ಸೇವೆ ಸಲ್ಲಿಸಿ, ಸದ್ಯ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
೩೫ ವರ್ಷಗಳ ಬೋಧನಾನುಭವದ ಹೊಂದಿರುವ ಡಾ. ಕುಂಬಾರ ೧೫೦ ಸಂಶೋಧನಾತ್ಮಕ ಲೇಖನಗಳು, ೧೧-ಹೆಚ್ ಇಂಡೆಕ್ಸ್ ಲೇಖನಗಳು ಹಾಗೂ ೧೩-ಐ ಇಂಡೆಕ್ಸ ಲೇಖನಗಳ ಮತ್ತು ೧೫ ಕ್ಕೂ ಹೆಚ್ಚಿನ ಸಂಪಾದಕತ್ವ ಗ್ರಂಥಗಳು ಪ್ರಕಟಗೊಂಡಿವೆ. ೦೫ ಅಂತರ್-ರಾಷ್ಟ್ರೀಯ, ೫೦ ರಾಷ್ಟ್ರೀಯ ಹಾಗೂ ೧೫ ಪ್ರಾದೇಶಿಕ ಮಟ್ಟದ ವಿಚಾರ ಸಂಕಿರಣ/ಸಮ್ಮೇಳಗಳಲ್ಲಿ ಭಾಗವಹಿಸಿ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ವಿವಿಧ ಆಯಾಮಗಳ ಕುರಿತಾದ ತಮ್ಮ ಸಂಶೋಧನಾತ್ಮಕ ಲೇಖನಗಳನ್ನು ವಿದ್ವತ್ ಪೂರ್ಣವಾಗಿ ಮಂಡಿಸುವ ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರಿಯ ವಿಶ್ವವಿದ್ಯಾಲಯಗಳು ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ವಿಶ್ವಿದ್ಯಾಲಯಗಳ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಷಯದ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಶಾಸ್ತ್ರದ ಪಠ್ಯಕ್ರಮ ಹಾಗೂ ಶೈಕ್ಷಣಿಕ ಪದ್ದತಿಗೆ ರೂಪರೇಷೆ ಸಿದ್ಧಪಡಿಸಿಕೊಟ್ಟಿರುತ್ತಾರೆ.
ಒಬ್ಬ ಪರಿಣಿತ ವ್ಯಕ್ತಿ ತರಬೇತುದಾರರಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ, ಮತ್ತು ಅದರ ತರಬೇತಿ ಯೋಜನೆಗಳ ಸಂಪನ್ಮೂಲ ವ್ಯಕ್ತಿಯಾಗಿ, ಮೈಸೂರು, ಬೆಂಗಳೂರು, ಧಾರವಾಡ, ಕುರುಕ್ಷೇತ್ರ ಮತ್ತು ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ, ಮುಂಬೈನಲ್ಲಿ ತರಬೇತುದಾರರಾಗಿ ಸೇವೆ ನೀಡಿದ್ದಾರೆ.
ಡಾ. ಕುಂಬಾರ ೪ ಪ್ರಾದೇಶೀಕ ಮತ್ತು ೫ ರಾಷ್ಟ್ರೀಯ (ಎರಡು ದಿನಗಳ) ಹಾಗೂ ೧-೪ ದಿನಗಳ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ೧೫ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ವಿಚಾರ ಸಮ್ಮೇಳನ/ಸಂಕಿರಣಗಳಲ್ಲಿನ ತಾಂತ್ರಿಕ ಅಧಿವೇಶನಗಳ ಅಧ್ಯಕ್ಷತೆ ವಹಿಸಿದ್ದಾರೆ.
ಡಾ. ಕುಂಬಾರ ಮಾರ್ಗದರ್ಶನದಲ್ಲಿ ೧೮ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿ, ಪಿ.ಎಚ್.ಡಿ. ಪದವಿ ಹಾಗೂ ೦೬ ಜನ ವಿದ್ಯಾರ್ಥಿಗಳು ಎಂ. ಫಿಲ್ ಪದವಿ ಪಡೆದಿದ್ದಾರೆ. ಸದ್ಯ ೭ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ.
ಭಾರತೀಯ ಗ್ರಂಥಾಲಯ ಸಂಘ ದೆಹಲಿ, ಭಾರತೀಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಬೋಧಕರ ಸಂಘ, ಭಾರತೀಯ ವಿಶೇಷ ಗ್ರಂಥಾಲಯಗಳು ಮತ್ತು ಮಾಹಿತಿ ಕೇಂದ್ರಗಳ ಸಂಘ, ಕರ್ನಾಟಕ ಗ್ರಂಥಾಲಯ ಸಂಘ ಮುಂತಾದ ವೃತ್ತಿಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇರ, ನಿಷ್ಠುರ ನುಡಿಯ ಅವರು ಜನರ ವಿರೋಧಗಳನ್ನು ಲೆಕ್ಕಿಸದೇ ಪ್ರಗತಿಪರ ಕಾರ್‍ಯಮಾಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ , ಹಣಕಾಸು ಸಮಿತಿಗೆ, ವಿದ್ಯಾರ್ಥಿ ಕಲ್ಯಾಣ ಮಂಡಳಿಗೆ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಕಾರ್‍ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ, ಕವಿವಿ ಸ್ನಾತಕೋತ್ತರ ಜೆಮಖಾನಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನತ್ವ ಪಡೆದಿರುವ ಕಲಾ, ವಾಣಿಜ್ಯ, ವಿಜ್ಞಾನ, ಬಿ.ಬಿ.ಎ. ಬಿ.ಸಿ.ಎ. ಹಾಗೂ ಬಿ.ಎಸ್.ಸಿ. (ಮಾಹಿತಿ ವಿಜ್ಞಾನ) ಮಹಾವಿದ್ಯಾಲಯಗಳ ಸ್ಥಳಿಯ ವಿಚಾರಣಾ/ತಪಾಸಣಾ ಸಮಿತಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ಕವಿವಿ. ಬೋಧನಾ ಸಿಬ್ಬಂದಿ ಕುಂದು-ಕೊರೆತೆ ವಿಚಾರಣಾ ಕೋಶದ ಸದಸ್ಯರಾಗಿ, ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿ ಮತ್ತು ಭಾರತೀಯ ಗ್ರಂಥಾಲಯ ಸಂಘದ ನಿಯತಕಾಲಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಡಾ. ಬಿ.ಡಿ. ಕುಂಬಾರ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಗ್ರಂಥ ಓದಲು, ಗ್ರಂಥಕೊಬ್ಬರು, ಎಲ್ಲರಿಗೂ ಗ್ರಂಥಾಲಯಗಳು, ಓದುಗರ ಸಮಯ ಉಳಿಸಿರಿ, ಗ್ರಂಥಾಲಯ ಬೆಳೆಯುವ ಶಿಶು ಎಂಬ ಪಂಚ ಸೂತ್ರಗಳನ್ನು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ತಜ್ಞರಾದ ಪ್ರೊ. ಎಂ.ಆರ್. ಕುಂಬಾರ, ಪ್ರೊ. ಕೆ.ಎಸ್. ದೇಶಪಾಂಡೆ, ಡಾ. ಸಿ.ಆರ್. ಕರಿಸಿದ್ಧಪ್ಪ, ಡಾ. ಎಸ್.ಎಲ್. ಸಂಗಮ ಮುಂತಾದವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ.
-.ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.4 / 5. ಒಟ್ಟು ವೋಟುಗಳು 41

8 Responses

 1. Jayadev Kadli

  ನೇರ ನುಡಿಗಳು.. ಬಿಡಿಕೆ ಸರ್ ಬದುಕು ಬರಹ ಮತ್ತು ಕೆಲಸದ ಬಗ್ಗೆ ನಿಜವಾದ ಮಾತುಗಳು.. ಲೇಖನ ತುಂಬಾ ಚೆನ್ನಾಗಿದೆ..

 2. j S Kadadevarmath

  I congratulate you for nice coverage of Prof B D Lumbar on account of his superannuation. I wish Prof B D Lumbar a very happy and fruitful retired life and wishing him continue to contribute to the library community. From Prof J S Kadadevarmath.

 3. Karunakar.N

  Congratulations B D Kumbar sir for your superannuation. No body tells good bye to dynamic professor like you. We need your guidance and support to develop our profession in future. Happy retirement life sir. Stay blessed with good health. 💐💐💐

 4. Purushottam Yaliwal

  ಅವರು ನಿವ್ರೃತ್ತಿ ಹೊಂದಿರುವುದು ಒಬ್ಬ ಶಿಕ್ಷಣ ಮುತ್ಸದ್ಧಿ ಯನ್ನು ಮತ್ತು ಅತ್ತ್ಯುತ್ತಮ ವಾಗ್ಮಿಯವರ ತರಗತಿಗಳು ಇಲ್ಲದೇ ಇರುವುದು ನಮಗೆ ದುಃಖದ ಸಂಗತಿಯಾಗಿದೆ..ಸರಳ ವ್ಯಕ್ತಿತ್ವದ ಇವರು ಅತ್ಯುತ್ತಮವಾಗಿ ಪಾಠ ಮಾಡುವುದರಲ್ಲಿ ಪ್ರಸಿದ್ಧಿ ಪಡೆದಿದ್ದಾರೆ…ಇವರ ಅನುಪಸ್ಥಿತಿಯಲ್ಲಿ ನಾವು ಮುಂದಿನ ಶಿಕ್ಷಣ ನಡೆಸುವುದು ನಮಗೆ ತುಂಬಾ ದುಃಖದ ಸಂಗತಿಯಾಗಿದೆ 🥺🥺🥺

 5. Prof Khaisar M Khan

  Wish you a happy and healthy Life Your always smiling cheerful looks and working for for the cause of the profession of Librarianship will continue May Almighty God shower his choicest blessings on you and your Family

 6. Dr Keshava

  ನಿಮ್ಮ ನಿವೃತಿ ಜೀವನ ಸುಖಕರವಾಗಿರಲಿ

 7. Shivalingayya K

  Congratulations and Happy, Health Retirement Life Prof. B. D Kumbar Sir

ನಿಮ್ಮ ಕಾಮೆಂಟ್ ಬರೆಯಿರಿ

advertisement