ಎಲ್ಲರಿಗೂ ಅಣ್ಣ ಶಂಕರಣ್ಣ ಮುನವಳ್ಳಿ..ಈಗ ಸಾಮಾಜಿಕ ಟ್ರಸ್ಟ್ ಸ್ಥಾಪನೆಗೆ ಚಿಂತನೆ

posted in: ಅಂಕಣಗಳು | 0

(ಜೂನ್ ೧ರಂದು ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಜನ್ಮದಿನ.. ಈ ನಿಮಿತ್ತ ಲೇಖನ)

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಸಾರ್ವಜನಿಕ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಶಂಕರಣ್ಣ ಈಶ್ವರಪ್ಪ ಮುನವಳ್ಳಿ ಅವರು ಸಾರ್ವಜನಿಕರಿಗೆ ‘ಅಣ್ಣಾ’ ಎಂದೇ ಚಿರಪರಿಚಿತರಾಗಿದ್ದಾರೆ.
ಪರಿವಾರದವರು ಅಪ್ಪಾಜಿ ಎಂದೇ ಕರೆಯುತ್ತಾರೆ. ಮೂಲತಃ ಗದುಗಿನ ಕೃಷಿ ಮತ್ತು ವ್ಯಾಪಾರ ಕುಟುಂಬದ ಶಂಕರಣ್ಣ ೧೯೭೫ ರಿಂದ ಹುಬ್ಬಳ್ಳಿಯ ನಾಗರಿಕರಿಗೆ ಚಿರಪರಿಚಿತರು. ಶಂಕರಣ್ಣನವರು ಜೂನ ೧, ೧೯೫೦ ರಂದು ಜನಿಸಿದ್ದಾರೆ. ಓದಿದ್ದು ಎಸ್.ಎಸ್.ಎಲ್.ಸಿ. ಆದರೆ ಪ್ರತಿಭಾವಂತರಾದ ಇವರು ನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕೆಎಲ್ಇ ಆಡಳಿತ ಮಂಡಳಿಗೆ ೧೯೮೯ ರಿಂದ ನಿರ್ದೇಶಕರಾಗಿದ್ದಾರೆ.
ಕೆಎಲ್ಇ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳ ಹೊಣೆಯನ್ನು ನಿರ್ವಹಿಸುತ್ತ, ಸ್ಥಳೀಯ ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ, ನಿರ್ದೇಶಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲೀಷ್‌, ಹಿಂದಿ, ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ಎರಡು ಬಾರಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಎಪಿಎಂಸಿ ಚುನಾಯಿತ ಸದಸ್ಯರಾಗಿ, ಧಾರವಾಡ ಜಿಲ್ಲಾ ಅಂಧ ಮಕ್ಕಳ ಶಾಲೆಯ ಚೇರಮನ್‌ರಾಗಿ, ಹುಬ್ಬಳ್ಳಿಯ ವಿಶ್ವನಾಥ ಕಲ್ಯಾಣ ಮಂಟಪ, ಶ್ರೀ ಗುರುಸಿದ್ದೇಶ್ವರ ಬ್ಯಾಂಕಿನ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಗತಿಗಾಗಿ ಮತ್ತು ನೈಋತ್ಯ ರೈಲ್ವೆ ಸಮಿತಿ ಸದಸ್ಯರಾಗಿದ್ದಾರೆ.
ರೈತರ ಮತ್ತು ವ್ಯಾಪಾರಸ್ಥರ ಸಮಸ್ಯೆಗಳಿಗೆ ಸ್ಪಂದಿಸತ್ತ ಬಂದಿದ್ದು, ಉತ್ತರಕರ್ನಾಟಕದ ಬೆಳವಣಿಗೆಗೆ, ಉಪಯುಕ್ತವಾದ ಸಭೆ, ಸಮಾರಂಭಗಳನ್ನು ಆಯೋಜಿಸಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ವ್ಯಾಪಾರ ಮತ್ತು ಉದ್ದಿಮೆಗಳ ಬೆಳವಣಿಗೆಯಲ್ಲಷ್ಟೇ ಅಲ್ಲದೆ, ಅನೇಕ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯದ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಶಿಸ್ತು, ಸಮಯಪ್ರಜ್ಞೆ, ಅಚ್ಚುಕಟ್ಟುತನಕ್ಕೆ ಎಂಥವರೂ ತಲೆದೂಗಬೇಕು.
ಶಿಕ್ಷಣ ಮತ್ತು ಸಾಮಾಜಿಕ ಕಳಕಳಿ ಶಂಕರಣ್ಣ ಮುನವಳ್ಳಿಯವರು ಸಮಾಜದಲ್ಲಿ ದುಂದುವೆಚ್ಚ ತೆಡೆಗಟ್ಟುವ ಉದ್ದೇಶದಿಂದ ೨೦೦೧ ರಲ್ಲಿ ೪೫, ೨೦೦೫ ರಲ್ಲಿ ೩೨, ೨೦೧೫ ರಲ್ಲಿ ೪೮, ೨೦೧೯ರಲ್ಲಿ ೨೮ ಜೋಡಿಗಳ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಸಾಮೂಹಿಕ ವಿವಾಹಗಳಲ್ಲಿ ತಮ್ಮ ಮಕ್ಕಳ ವಿವಾಹವನ್ನೂ ಏರ್ಪಡಿಸಿದ್ದು ಅವರ ವೈಶಿಷ್ಟ್ಯ.
ಸಾತ್ವಿಕ ಸ್ವಭಾವದ ಶಂಕರಣ್ಣ ಜರ್ಮನಿ, ಚೀನಾ ಮುಂತಾದ ದೇಶಗಳಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಭೇಟ್ಟಿ ನೀಡಿ, ಉತ್ತರ ಕರ್ನಾಟಕದ ವ್ಯಾಪಾರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪ್ರತಿಷ್ಠಿತ ಇನ್‌ಕಾಮೆಕ್ಸ್ ಕೈಗಾರಿಕಾ ಮೇಳವನ್ನು ಮತ್ತು ಬಾಬಾ ರಾಮದೇವ ಮಹಾರಾಜ ಅವರ ಯೋಗ ಮತ್ತು ಪ್ರಾಣಾಯಾಮ ಶಿಬಿರಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬಗೆಗೆ ಆಸಕ್ತಿ ಹೊಂದಿರುವ ಶಂಕರಣ್ಣ ಅವರು ರೈತರಿಗೆ ಹನಿ ನೀರಾವರಿ, ವೈಜ್ಞಾನಿಕ ಕೃಷಿ ಚಟುವಟಿಕೆಗಳ ಕುರಿತು ಕಾರ್ಯಕ್ರಮಗಳನ್ನು, ಆಯೋಜಿಸುತ್ತ ಬಂದಿದ್ದಾರೆ. ಬಂಡವಾಳ ಹೂಡಿಕೆದಾರರಿಗೆ, ನವೋದ್ಯೊಮಿಗಳ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ. ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಸಂಪೂರ್ಣ ಔದ್ಯೋಗೀಕರಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಕರ್ನಾಟಕ ವಾಣಿಜ್ಯೋದ್ಯಮಿ ಸಂಸ್ಥೆ, ಎಪಿಎಂಸಿ ಮುಂತಾದ ಸಂಘ ಸಂಸ್ಥೆಗಳ ಮೂಲಕ ಈ ಭಾಗದ ಪ್ರಗತಿಗೆ ಕೈಜೋಡಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ.
ಸದ್ಯದಲ್ಲಿ ಮುನವಳ್ಳಿ ಫೌಂಡೇಶನ್‌ ಟ್ರಸ್ಟ್ ಅಸ್ತಿತ್ವಕ್ಕೆ ಬರಲಿದ್ದು, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ನೀಡವ ಮತ್ತು ಮಕ್ಕಳ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮತ್ತು ಅನಾಥಾಶ್ರಮ ಮಕ್ಕಳನ್ನು ದತ್ತು ಪಡೆದು ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಭರಿಸುವ ಬಡ ಜನರಿಗೆ ಉಚಿತ ಚಿಕಿತ್ಸೆಯನ್ನು ಪಡೆಯುವ ಆಸ್ಪತ್ರೆಯನ್ನು ತೆರೆಯುವ ಬ್ಲಡ ಬ್ಯಾಂಕ್ ನಿರ್ಮಿಸುವ, ವೃದ್ಧಾಶ್ರಮದಲ್ಲಿ ಇರುವ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಉಚಿತ ವೈದ್ಯಕೀಯ ತಪಾಸಣೆ ಮಾಡಿಸುವ ಮತ್ತು ವೃದ್ಧಾಪ್ಯ ವೇತನ ನೀಡುವ, ಅಗತ್ಯ ಜನರಿಗೆ ಆಹಾರ ಒದಗಿಸುವ, ಸಾಮೂಹಿಕ ವಿವಾಹವನ್ನು ಏರ್ಪಡಿಸುವ, ಅಗತ್ಯ ಜನರಿಗೆ ವಸತಿ ಸಮುಚ್ಚಯಗಳನ್ನು ನಿರ್ಮಿಸುವ, ಪ್ರಕೃತಿ ವಿಕೋಪ ಬಂದಾಗ ಜನತೆಗೆ ಅವಶ್ಯಕ ವಸ್ತುಗಳನ್ನು ತಲುಪಿಸುವ, ವಿಕಲ ಚೇತರಿಗೆ ಜೀವನಾಂಶ ವಸ್ತುಗಳನ್ನು ಒದಗಿಸುವ ಹಲವಾರು ಉದ್ದೇಶಗಳನ್ನು ಹೊಂದಿದ್ದೇವೆ ಎಂದು ಶಂಕರಣ್ಣ ಮುನವಳ್ಳಿ ಅವರು ಹೇಳುತ್ತಾರೆ.
ಸಾರ್ವಜನಿಕ ವಿಧಾಯಕ ಕಾರ್ಯಕ್ರಮಗಳನ್ನು ಸಂಘಟಿಸಲು ಕೆಎಲ್ಇ ಸಂಸ್ಥೆಯ ಕಾರ್‍ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಮತ್ತು ಪದಾಧಿಕಾರಿಗಳು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಗುರುಸಿದ್ದೇಶ್ವರ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ, ಪರಿವಾರದ ಸದಸ್ಯರು, ನಗರದ ಗಣ್ಯರು ಮತ್ತು ಹಿತೈಷಿಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಸೌಜನ್ಯತೆಯಿಂದ ನೆನೆಯುತ್ತಾರೆ.
ಶಂಕರಣ್ಣ ಮುನವಳ್ಳಿಯವರಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಸೇವೆ ದೊರೆಯುವಂತಾಗಲಿ ಎನ್ನುವದು ಎಲ್ಲರ ಸದಾಶಯ.
-ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.5 / 5. ಒಟ್ಟು ವೋಟುಗಳು 6

ನಿಮ್ಮ ಕಾಮೆಂಟ್ ಬರೆಯಿರಿ

advertisement