ಮೆಹುಲ್ ಚೋಕ್ಸಿ ಭಾರತಕ್ಕೆ ಕರೆತರಲು ಡೊಮಿನಿಕಾದಲ್ಲಿ 8 ಸದಸ್ಯರ ಭಾರತ ತಂಡ

ನವ ದೆಹಲಿ: ಆಂಟಿಗುವಾದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಡೊಮಿನಿಕಾದಲ್ಲಿ ಬಂಧಿಯಾಗಿರುವ ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು ವಾಪಸ್ ಕರೆತರಲು ಭಾರತದಿಂದ ಎಂಟು ಸದಸ್ಯರ ಬಹು-ಏಜೆನ್ಸಿ ತಂಡ ಡೊಮಿನಿಕಾದಲ್ಲಿದೆ.
ಮೇ 28ರಂದು (ಶುಕ್ರವಾರ) ಪುಟ್ಟ ದ್ವೀಪ ರಾಷ್ಟ್ರವನ್ನು ತಲುಪಿದ ಈ ತಂಡ ನಾಳೆ ಮೆಹುಲ್ ಚೋಕ್ಸಿ ಕುರಿತ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲಿದೆ. ರಾಜಕೀಯವಾಗಿ ವಿವಾದಾಸ್ಪದವಾಗಿರುವ ಪ್ರಕರಣದಲ್ಲಿ ಡೊಮಿನಿಕನ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಸಹಾಯ ಮಾಡಲಿದೆ.
ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ದಿಂದ ತಲಾ ಇಬ್ಬರು “ಮಿಷನ್ ಚೋಕ್ಸಿ” ಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನ ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಸಿಬಿಐ ಮುಖ್ಯಸ್ಥರಾದ ಶಾರದಾ ರೌತ್ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಅಧಿಕಾರಿಯಾಗಿ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಎಲ್ಲವೂ ಯೋಜಿಸಿದಂತೆ ನಡೆದರೆ ಅದೇ ತಂಡವು ಕತಾರಿನ ಖಾಸಗಿ ಜೆಟ್‌ನಲ್ಲಿ ಚೋಕಿಸಿಯನ್ನು ಡೊಮಿನಿಕಾದಿಂದ ಕರೆತಲಿದೆ ಎಂದು ಮೂಲಗಳು ತಿಳಿಸಿವೆ.
ಅವರು ಇಳಿಯುವ ಕ್ಷಣದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಚೋಕ್ಸಿಯನ್ನು ಔಪಚಾರಿಕವಾಗಿ ಬಂಧಿಸಲಾಗುತ್ತದೆ. ಆದರೆ ಅದು ಪ್ರಸ್ತುತ ಅನೇಕ “ಇಫ್” ಗಳನ್ನು ಒಳಗೊಂಡಿದೆ.
62 ವರ್ಷದ ಚೋಕ್ಸಿ ಆಂಟಿಗುವಾದಿಂದ ಕ್ಯೂಬಾಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದ. ಸಾಲ ವಂಚನೆಯ ತನಿಖೆ ವೇಗವಾಗುತ್ತಿರುವಾಗ, ವಜ್ರದ ಆಭರಣ ವ್ಯಾಪಾರಿ ಆಂಟಿಗುವಾ ದೇಶದ ಪೌರತ್ವವನ್ನು ಪಡೆದುಕೊಂಡ.ಮತ್ತು ಅಂದಿನಿಂದ ಅಲ್ಲಿ ವಾಸಿಸುತ್ತಿದ್ದಾನೆ. ಡೊಮಿನಿಕಾದಲ್ಲಿ ಬಂಧನಕ್ಕೊಳಗಾದ ನಂತರ ಆಂಟಿಗುವಾ ಈತನನ್ನು ನೇರವಾಗಿ ಭಾರತಕ್ಕೆ ಒಪ್ಪಿಸಬೇಕು ಎಂದು ಹೇಳಿದೆ.
ಚೋಕ್ಸಿ ಡೊಮಿನಿಕಾದ ಪ್ರಜೆಯಲ್ಲ, ಆದ್ದರಿಂದ ಅವನು ದ್ವೀಪದಲ್ಲಿ ಯಾವುದೇ ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ” ಎಂದು ಮೂಲಗಳು ತಿಳಿಸಿವೆ.ಚೋಕ್ಸಿ ಮುಂದೆ ಭಾರತದ ಪ್ರಜೆಯಲ್ಲ ಮತ್ತು ಕಾನೂನುಬದ್ಧವಾಗಿ ಭಾರತಕ್ಕೆ ಗಡೀಪಾರು ಮಾಡಲು ಸಾಧ್ಯವಿಲ್ಲ ಎಂದು ಚೋಕ್ಸಿ ಪರ ವಕೀಲರು ಹೇಳುತ್ತಾರೆ. ಚೋಕ್ಸಿಯನ್ನು ಬಲವಂತವಾಗಿ ಡೊಮಿನಿಕಾಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ, ಇದು ಡೊಮಿನಿಕಾದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನಂದನ ನಿಲೇಕಣಿ ಈಗ ಮೋದಿ ಸರ್ಕಾರದ ಆಯ್ಕೆ ; ಎನ್‌ಟಿಎ ಸುಧಾರಣಾ ಟಾಸ್ಕ್‌ಫೋರ್ಸ್‌ ನೇತೃತ್ವದ ಹೊಣೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement