ಅಂತ್ಯಕ್ರಿಯೆ ನಡೆದು ಕೆಲದಿನಗಳ ನಂತರ ಅಜ್ಜಿ ಮನೆಯಲ್ಲಿ ಪ್ರತ್ಯಕ್ಷ..!

ಕೋವಿಡ್‌-19 ನಿಂದ ಚೇತರಿಸಿಕೊಂಡ ಆಂಧ್ರಪ್ರದೇಶದ 75 ವರ್ಷದ ಮಹಿಳೆಯೊಬ್ಬರು ಬುಧವಾರ ಮನೆಗೆ ಮರಳಿದ್ದು, ಆಗ ವೃದ್ಧ ಮಹಿಳೆಯ ಕುಟುಂಬವು ಮತ್ತೊಂದು ದೇಹವನ್ನು ತಪ್ಪಾಗಿ ಅಂತ್ಯಸಂಸ್ಕಾರ ಮಾಡಿರುವುದು ಗೊತ್ತಾಗಿದೆ…!
ಈ ವಿಲಕ್ಷಣ ಘಟನೆ ಆಂಧ್ರಪ್ರದೇಶ ರಾಜ್ಯದ ಕೃಷ್ಣ ಜಿಲ್ಲೆಯ ಜಗ್ಗಯ್ಯಪೇಟೆ ಪಟ್ಟಣದಲ್ಲಿ ಸಂಭವಿಸಿದೆ. ಸ್ಥಳೀಯ ಮೂಲಗಳ ಪ್ರಕಾರ, ಕ್ರಿಶ್ಚಿಯನ್‌ಪೇಟ್‌ನ ಗಿರಿಜಮ್ಮ ಎಂಬವರು ಮಹಿಳೆ, ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದರು. ಮೇ 12 ರಂದು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪತಿ ಗದ್ದಯ್ಯ ಮನೆಗೆ ಮರಳಿದ್ದಾರೆ. ತರುವಾಯ, ಗಡ್ಡಯ್ಯಅವರು ತಮ್ಮ ಪತ್ನಿಯನ್ನು ನೋಡಲು ಮೇ 15ರಂದು ಆಸ್ಪತ್ರೆಗೆ ತೆರಳಿದ್ದಾರೆ. ಆದರೆ, ಆಗ ಗಿರಿಜಮ್ಮ ಹಾಸಿಗೆಯಿಂದ ಕಾಣೆಯಾಗಿದ್ದರು ಮತ್ತು ಆಸ್ಪತ್ರೆಯ ಸಿಬ್ಬಂದಿ ಅವರ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸಿರಬಹುದು ಎಂದು ತಿಳಿಸಿದರು.
ಆಸ್ಪತ್ರೆಯ ಎಲ್ಲ ವಾರ್ಡ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೂ ಗಿರಿಜಮ್ಮ ಅವರನ್ನು ಪತ್ತೆ ಹಚ್ಚಲು ಗಡ್ಡಯ್ಯ ವಿಫಲರಾದರು. ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಗ ತನ್ನ ಹೆಂಡತಿಯನ್ನು ಶವಾಗಾರದಲ್ಲಿ ಪರೀಕ್ಷಿಸಲು ಹೇಳಿದರು. ಅವರು ಅಲ್ಲಿಗೆ ಹೋದಾಗ, ತಮ್ಮ ಹೆಂಡತಿಯನ್ನು ಹೋಲುವ ದೇಹವನ್ನು ನೋಡಿ ಸಿಬ್ಬಂದಿಗೆ ತಿಳಿಸಿದರು, ಅವರು ಶವವನ್ನು ಗಡ್ಡಯ್ಯ ಅವರಿಗೆ ಹಸ್ತಾಂತರಿಸಿದರು. ಅಲ್ಲದೆ ಗಿರಿಜಮ್ಮ ಹೆಸರಿನಲ್ಲಿ ಮರಣ ಪ್ರಮಾಣಪತ್ರವನ್ನೂ ನೀಡಿದರು. ಕುಟುಂಬವು ಶವವನ್ನು ಮನೆಗೆ ತೆಗೆದುಕೊಂಡು ಅಂತ್ಯಕ್ರಿಯೆ ಮಾಡಿತು. ಮೇ 23 ರಂದು ದಂಪತಿಯ ಪುತ್ರ ರಮೇಶ್ ಸಹ ಕೋವಿಡ್‌-19 ಸೋಂಕಿನಿಂದ ಮೃತಪಟ್ಟರು, ಗಡ್ಡಯ್ಯ ಅವರು ಮಂಗಳವಾರ ಗಿರಿಜಮ್ಮ ಮತ್ತು ರಮೇಶ್ ಅವರ ಅಂತಿಮ ವಿಧಿಗಳನ್ನು ಪೂರೈಸಿದರು.
ಅಷ್ಟರಲ್ಲಿ ಆಸ್ಪತ್ರೆಯಲ್ಲಿದ್ದ ಗಿರಿಜಮ್ಮ ಚೇತರಿಸಿಕೊಂಡಿದ್ದರು. ವರದಿಗಳ ಪ್ರಕಾರ, ತನ್ನ ಮನೆಗೆ ಕರೆದುಕೊಂಡು ಹೋಗಲು ಯಾರೂ ಯಾಕೆ ಬಂದಿಲ್ಲ ಎಂದು ಅವರು ಆಶ್ಚರ್ಯಪಟ್ಟಳು ಮತ್ತು ಬುಧವಾರ ಸ್ವತಃ ಹಿಂದಿರುಗಿದರು. ಗಿರಿಜಮ್ಮಾವರು ಇದ್ದಕ್ಕಿದ್ದಂತೆ ಬಂದಿದ್ದು ಗದ್ದಯ್ಯ ಮತ್ತು ಅವರ ಕುಟುಂಬಕ್ಕೆ ಒಂದು ಕ್ಷನ ನಂಬಲಾಗಲಿಲ್ಲ. ವೃದ್ಧ ದಂಪತಿಗಳು ಈಗ ತಮ್ಮ ಮಗ ರಮೇಶ್‌ಗಾಗಿ ದುಃಖಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement