ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ಬ್ಲೂ ಟಿಕ್ ಮರುಸ್ಥಾಪಿಸಿದ ಟ್ವಿಟರ್

ನವ ದೆಹ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಿದ ಕೆಲವೇ ಗಂಟೆಗಳ ಮತ್ತೆ ಟಿಕ್ ಮಾರ್ಕ್ ಕಾಣಿಸಿಕೊಂಡಿದೆ.
ಇಂದು (ಶನಿವಾರ) ಬೆಳಿಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆಯಲಾಗಿತ್ತು. ಬಳಿಕ, ಕೆಲವೇ ಗಂಟೆಗಳಲ್ಲಿ ಮತ್ತೆ ಬ್ಲೂ ಟಿಕ್ ನೀಡಲಾಗಿದೆ.
ಜುಲೈ 2020ರಿಂದ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಸಕ್ರಿಯವಾಗಿರಲಿಲ್ಲ ಎನ್ನುವ ಕಾರಣಕೊಟ್ಟು ಟ್ವಿಟ್ಟರ್ ಬ್ಲ್ಯೂ ಟಿಕ್ ಮಾರ್ಕ್ ತೆಗೆದುಹಾಕಿತ್ತು.
ಕಳೆದ ಕೆಲ ತಿಂಗಳ ಹಿಂದೆ ಟ್ವಿಟ್ಟರ್​ ಬ್ಲೂ ಟಿಕ್​ ವೇರಿಫಿಕೇಶನ್​ ಬ್ಯಾಡ್ಜ್​ ಆಯ್ಕೆಯನ್ನು ಮತ್ತೆ ಪ್ರಾರಂಭಿಸಿದೆ. 2017ರ ನಂತರ ಸ್ಥಗಿತಗೊಳಿಸಿದ ಈ ಪ್ರಕ್ರಿಯೆಯನ್ನು ಇದೀಗ ಪ್ರಾರಂಭಸಿದೆ.
ಟ್ವಿಟ್ಟರ್ ಅರ್ಹತೆ ಇರುವವರಿಗಾಗಿ ಮಾತ್ರ ಬ್ಯೂ ಬ್ಯಾಡ್ಜ್ ನೀಡುತ್ತಿದೆ. ಇನ್ನು ಖಾತೆ ವೈರಿಫೈಡ್ ಆದರೆ ಮಾತ್ರ ಅವರ ಹೆಸರಿನ ಮುಂದೆ ನೀಲಿ ಬಣ್ಣದ ಬ್ಲೂ ಟಿಕ್ ಕಾಣಿಸುತ್ತದೆ. ಟ್ವಿಟ್ಟರ್ ಕೆಲವು ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದನ್ನು ಪಾಲಿಸಬೇಕು ಎಂದು ಸಂಸ್ಥೆ ತಿಳಿಸಿತ್ತು. ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಕಚೇರಿ ಅಧಿಕೃತ ಖಾತೆಯ ಬ್ಲೂ ಟಿಕ್ ಮಾರ್ಕ್ ಹಾಗೆಯೇ ಉಳಿಸಿಕೊಂಡಿತ್ತು.
ಬಳಿಕ ಟ್ವಿಟ್ಟರ್‌ ಬಳಿ ಮಾತನಾಡಿದ್ದು, ಇದೀಗ ಟ್ವಿಟ್ಟರ್ ಬ್ಲ್ಯೂ ಟಿಕ್‌ ಮಾರ್ಕ್ ವಾಪಸ್ ನೀಡಿದೆ. ಇನ್ನು ಬ್ಲೂ ಟಿಕ್​ ಟಿಕ್​ ಹೊಂದಿದ ಖಾತೆಯು ಸಕ್ರಿಯವಾಗಿರಬೇಕು. ಸರ್ಕಾರದಿಂದ ಗುರುತಿಸಿಕೊಂಡಿರುವ, ಬ್ರಾಂಡ್​ಗಳು, ಲಾಭ ರಹಿತ ಸಂಸ್ಥೆ, ಸುದ್ದಿ ಸಂಸ್ಥೆಗಳಿಗೆ ಟ್ವಿಟ್ಟರ್​ ಬ್ಲೂ ಟಿಕ್​ ನೀಡುತ್ತದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement