ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ ಸಕಾರಾತ್ಮಕತೆ ದರ ಮತ್ತಷ್ಟು ಕಡಿಮೆಯಾಗಿದೆ. ರಾಜ್ಯದಲ್ಲಿ ಭಾನುವಾರದ ಮಾಹಿತಿಯಂತೆ ಕೋವಿಡ್ ಸಕಾರಾತ್ಮಕತೆ ದರ ಶೇ. 7.71ರಷ್ಟಕ್ಕೆ ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಸುಧಾಕರ ಅವರು, ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ 1,58,274 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 12,209 ಜನರಿಗೆ ಕೊರೊಮಾ ಪಾಸಿಟಿವ್ ಬಂದಿದೆ. ಹೀಗಾಗಿ ಕೋವಿಡ್ ಸಕಾರಾತ್ಮಕತೆ ದರ ಶೇ. 7.71ರಷ್ಟಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ಶೇ.10.66 ರಷ್ಟು ಇತ್ತು.ಶನಿವಾರ ಈ ಸಕಾರಾತ್ಮಕತೆ ದರ ಶೇ.9ಕ್ಕಿಂತ ಹೆಚ್ಚಿತ್ತು.
ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು 25,659 ಜನರು ಗುಣಮುಖರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕೇಂದ್ರ ಸರ್ಕಾರವು ಲಾಕ್‌ಡೌನ್ ಸಡಿಲಗೊಳಿಸಲು ಎರಡು ನಿಬಂಧನೆಗಳ ಬಗ್ಗೆ ಹೇಳುತ್ತಿ. ಯಾವುದೇ ಪ್ರದೇಶದಲ್ಲಿ ಲಾಕ್‌ಡೌನ್ ಸಡಿಲಗೊಳಿಸಲು ಕೋವಿಡ್ ಸಕಾರಾತ್ಕತೆ ದರ ಶೇ.5ಕ್ಕಿಂತ ಕಡಿಮೆ ಇರಬೇಕು ಅಥವಾ ಆ ಪ್ರದೇಶದಲ್ಲಿ ಕೋಮೊರ್ಲಿಟಿ ಜನರಿಗೆ ಶೇ.70ರಷ್ಟು ಲಸಿಕೆಯಾಗಿರಬೇಕು ಎಂದು ಹೇಳಿದೆ. ಸದ್ಯದಲ್ಲಿ ಜೂ.14ರ ಒಳಗೆ ಸಕಾರಾತ್ಮಕತೆ ಗಗುರಿ ತಲುಪುವ ಸಾಧ್ಯತೆ ಹೆಚ್ಚಿದೆ.


ನಿಮ್ಮ ಕಾಮೆಂಟ್ ಬರೆಯಿರಿ