ಕುಮಟಾ ನರ್ಸಿಂಗ್‌ ಹೋಂನಿಂದ ಅಗತ್ಯ ಇರುವವರಿಗೆ ಉಚಿತ ಆಮ್ಲಜನಕ ಪೂರೈಕೆ  

ಕುಮಟಾ : ಕೋವಿಡ್‌ ಬಿಕ್ಕಟ್ಟಿನಲ್ಲಿ   ಜನರ ಹಿತದ ದೃಷ್ಟಿಯಿಂದ  ಕುಮಟಾ ತಾಲೂಕು ವ್ಯಾಪ್ತಿಯಲ್ಲಿ  ಕುಮಟಾ ನರ್ಸಿಂಗ್ ಹೋಂನಿಂದ ಅಗತ್ಯ ಇರುವವರಿಗೆ ಉಚಿತವಾಗಿ ಆಮ್ಲಜಕ ಪೂರೈಸಲಾಗುವುದು. ಜೀವನ ಗಂಗಾ ಕೇಂದ್ರದಿಂದ ದಿನದ 24 ಗಂಟೆಯೂ ಈ ಸೇವೆ ನೀಡಲಾಗುತ್ತದೆ ಎಂದು ಡಾ. ಅನಿಲ ಹೆಗಡೆ ತಿಳಿಸಿದ್ದಾರೆ.
ಆಮ್ಲಜನಕ ಸಾಂದ್ರಕ (ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌) ಅಗತ್ಯ ಇರುವ ಸಾರ್ವಜನಿಕರು, ಸಮಾಜದ ಎಲ್ಲ ವರ್ಗದವರು ಈ ಪ್ರಯೋಜನ ಪಡೆದುಕೊಳ್ಳಬಹುದು. ತೊಂದರೆ ಇರುವವರಿಗೆ ಮನೆಗೆ ತೆಗೆದುಕೊಂಡು ಹೋಗುವ ಸಾಗಾಣಿಕೆ ವೆಚ್ಚವನ್ನು ಜೀವನ ಗಂಗಾ ಕೇಂದ್ರವೆ ಭರಿಸಲಿದೆ.

ಅಗತ್ಯ ಇರುವವರು ಆಮ್ಲಜನಕ ಕಾನ್ಸಂಟ್ರೇಟರ್ಸ್‌ ಒಯ್ಯುವಾಗ ಆಧಾರ್ ಕಾರ್ಡ್ ಪ್ರತಿ ಹಾಗೂ ದೂರವಾಣಿ ಸಂಖ್ಯೆಯನ್ನು ಜೀವನ ಗಂಗಾ ಕೇಂದ್ರದಲ್ಲಿ ಕಡ್ಡಾಯವಾಗಿ ನಮೂದಿಸ ಬೇಕು ಎಂದು ತಿಳಿಸಲಾಗಿದೆ.
ಆಮ್ಲಜನಕ ಕಾನ್ಸನ್ಟ್ರೇಟರ್ 5 ಮತ್ತು 10 ಲೀಟರ್ ಒಳಗೊಂಡಿರುತ್ತದೆ. ಕೇವಲ ಕೋವಿಡ್ ಸಂದರ್ಭ ಮಾತ್ರವಲ್ಲ ಆಕ್ಸಿಜನ್ ಅಗತ್ಯ ಇರುವ ಎಲ್ಲ ವರ್ಗ ಎಲ್ಲ ಸಂದರ್ಭದಲ್ಲಿ ನಮ್ಮ ಸಂಸ್ಥೆ ಮೂಲಕ ಆಮ್ಲಜನಕ ಪೂರೈಸುವ ಸಂಕಲ್ಪ ಇಟ್ಟು ಕೊಂಡಿದ್ದೇವೆ ಎಂದು ಡಾ.ಅನಿಲ ಹೆಗಡೆ ತಿಳಿಸಿದ್ದಾರೆ.
ಆಮ್ಲಜನಕ ಅಗತ್ಯ ಇರುವವರು  ದೂರವಾಣಿ ಅಥವಾ ವಾಟ್ಸಾಪ್‌ ಮೂಲಕ ಸಂಪರ್ಕಿಸಬಹುದಾಗಿದೆ. ಜೀವನಗಂಗಾ ಕೇಂದ್ರ ಕುಮಟಾ ನರ್ಸಿಂಗ್ ಹೋಮ್ ಕಟ್ಟಡ ಬಸ್ತಿಪೇಟೆ ಮೊಬೈಲ್‌ ಸಂಖ್ಯೆ- 8867887810, 9901630549, 6364331217, 9902398494, 9448014265  ಅಥವಾ ವಾಟ್ಸಾಪ್‌ ನಂಬರ್  9901051267, 8867887810 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

4.6 / 5. 8

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement