ಗಜ ಗರ್ಭ.. 10 ಶಿಶುಗಳ ಹೆತ್ತ ದಕ್ಷಿಣ ಆಫ್ರಿಕಾದ ಮಹಾತಾಯಿ..! ವೈದ್ಯರು ದೃಢಪಡಿಸಿದರೆ ವಿಶ್ವ ದಾಖಲೆ..!!

ದಕ್ಷಿಣ ಆಫ್ರಿಕಾದ ಮಹಿಳೆಯೊಬ್ಬಳು ಒಂದೇ ಗರ್ಭಾವಸ್ಥೆಯಲ್ಲಿ 10 ಶಿಶುಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ಇದು ವೈದ್ಯರಿಂದ ನಿಜವೆಂದು ಸಾಬೀತಾದರೆ, ಇದು ಗಿನ್ನೆಸ್ ವಿಶ್ವ ದಾಖಲೆ ಮುರಿಯಬಹುದು.
ಪ್ರಸ್ತುತ ದಾಖಲೆ ಆಸ್ಪತ್ರೆಯಲ್ಲಿ ಒಂಭತ್ತು ಶಿಶುಗಳಿಗೆ ಜನ್ಮ ನೀಡಿದ ಮಾಲಿಯ ಹಲೀಮಾ ಸಿಸ್ಸೆ ಹೊಂದಿದ್ದಾರೆ.
ಹಲೀಮಾ ನಾನ್‌ಪ್ಲೆಟ್‌ಗಳಿಗೆ ಜನ್ಮ ನೀಡಿದರೆ, 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಜೂನ್ 7 ರಂದು ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಡಿಕಪ್ಲೆಟ್‌ಗಳಿಗೆ ಜನ್ಮ ನೀಡಿದ್ದಾರೆ ಎಂದು ನಂಬಲಾಗಿದೆ.
ಆಗಲೇ ಅವಳಿ ತಾಯಿಯಾಗಿದ್ದ ಸಿಥೋಲ್ ಸೋಮವಾರ ಸಿಸೇರಿಯನ್ ಮೂಲಕ ಏಳು ಗಂಡು ಮತ್ತು ಮೂವರು ಬಾಲಕಿಯರಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. 37 ವರ್ಷದ ಆಕೆ ಹೊಟ್ಟೆಯಲ್ಲಿ ಆರು ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ವೈದ್ಯರು ಮೊದಲಿಗೆ ಹೇಳಿದ್ದರು.
37 ವರ್ಷ ವಯಸ್ಸಿನ ಈಕೆ ಸಾಕಷ್ಟು ಕಾಲು ನೋವು ಮತ್ತು ಎದೆಯುರಿಗಳನ್ನು ಎದುರಿಸಬೇಕಾಗಿರುವುದರಿಂದ ಗರ್ಭಧಾರಣೆಯು ಸುಲಭವಲ್ಲ. ಒಂದು ಹಂತದಲ್ಲಿ, ತನ್ನ ಮಕ್ಕಳು ಹೆಚ್ಚಿನ ಅಪಾಯದ ಗರ್ಭಧಾರಣೆಯಿಂದ ಬದುಕುಳಿಯುವುದಿಲ್ಲ ಎಂಬ ಕಳವಳವನ್ನೂ ವ್ಯಕ್ತಪಡಿಸಿದ್ದರು.

ಈಗ ಹೆರಿಗೆಯಾಗಿ ಆಕೆ ಹತ್ತು ಮಕ್ಕಳನ್ನು ಹೆತ್ತಿದ್ದಾಳೆ ಎಂದು ಹೇಲಲಾಗಿದೆ. ಆದರೆ ಇದನ್ನು ವೈದ್ಯರು ದೃಢಪಡಿಸಬೇಕು. ಇದು ವೈದ್ಯರು ಸಾಬೀತು ಪಡಿಸಿದರೆ ವಿಶ್ವ ದಾಖಲೆಯಅಗುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ | ಹತ್ತಿರ ಬಂದು, ಕಾರಿನ ಕೆಳಕ್ಕೆ ತೂರಿ ಕಾರನ್ನು ಸ್ವಯಂ ಎತ್ತಿ-ಒಯ್ದು, ಪರ್ಫೆಕ್ಟ್‌ ಪಾರ್ಕ್ ಮಾಡುವ ರೋಬೋಟ್ ವ್ಯಾಲೆಟ್ | ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement