ಕೋವಾಕ್ಸಿನ್‌ ಲಸಿಕೆಯಿಂದ ಬೀಟಾ, ಕೋವಿಡ್ -19 ರ ಡೆಲ್ಟಾ ರೂಪಾಂತರಗಳ ವಿರುದ್ಧ ರಕ್ಷಣೆ: ಆರಂಭಿಕ ಅಧ್ಯಯನ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಲಸಿಕೆ ತಯಾರಕ ಭಾರತ್ ಬಯೋಟೆಕ್ ಹಾಗೂ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಸಂಶೋಧಕರು,ಕೋವಿಡ್ -19 ರ ಬೀಟಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದು ಕಂಡುಹಿಡಿದಿದ್ದಾರೆ.
ಡೆಲ್ಟಾ ರೂಪಾಂತರ (ಬಿ .1.617.2) ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದಿದೆ ಮತ್ತು ಇದು ಇಲ್ಲಿ ಪ್ರಬಲವಾಗಿದೆ. ಮತ್ತೊಂದೆಡೆ, ಬೀಟಾ ರೂಪಾಂತರವನ್ನು (ಬಿ .1.351) ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಹಿಡಿಯಲಾಯಿತು.
ಡೆಲ್ಟಾ ರೂಪಾಂತರವು ಹೆಚ್ಚು ಸಾಂಕ್ರಾಮಿಕ ಮತ್ತು ಭಾರತದಲ್ಲಿ ವಿನಾಶಕಾರಿ ಎರಡನೇ ಅಲೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ಈ ರೂಪಾಂತರವು ಹೆಚ್ಚಿನ ಸಾವುಗಳು ಅಥವಾ ತೀವ್ರತರವಾದ ಪ್ರಕರಣಗಳಿಗೆ ಕಾರಣವಾಗುತ್ತದೆ ಎಂದು ಹೇಳಲು ಇನ್ನೂ ಯಾವುದೇ ಪುರಾವೆಗಳಿಲ್ಲ.
ಪೂರ್ವ-ಮುದ್ರಣ ಹಾಗೂ ಪ್ರಿ ರಿವ್ಯೂ ಆಗದ ಈ ಅಧ್ಯಯನವು ಕೋವಿಡ್ -19 ರಿಂದ ಚೇತರಿಸಿಕೊಂಡ 20 ಜನರು ಮತ್ತು ಅಧ್ಯಯನಕ್ಕೆ ಕನಿಷ್ಠ 28 ದಿನಗಳ ಮೊದಲು ತಮ್ಮ ಎರಡನೇ ಡೋಸ್ ಕೋವಾಕ್ಸಿನ್ ಪಡೆದ 17 ಜನರ ಮಾದರಿಗಳನ್ನು ಆಧರಿಸಿದೆ.
ಅಧ್ಯಯನದ ಪ್ರಕಾರ, ಕೊವಾಕ್ಸಿನ್ ಸಂಬಂಧಪಟ್ಟ ಎರಡೂ ರೂಪಾಂತರಗಳ ವಿರುದ್ಧ ರಕ್ಷಣೆ ನೀಡಿತು.
ಕೆಲವು ದಿನಗಳ ಹಿಂದೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯು ಕೋವಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಹೇಳಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ