ಬಿಎಸ್ಎನ್ಎಲ್ ಹೆಸರಿನಲ್ಲಿ ಗ್ರಾಹರಿಗೆ ಕರೆ ಮಾಡಿ ವಂಚನೆ: ಎಚ್ಚರಿಕೆಯಿಂದಿರಿ

ಹುಬ್ಬಳ್ಳಿ: ಬಿಎಸ್ಎನ್ಎಲ್ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ ಕೆವೈಸಿ ಪರಿಶೀಲನೆಗಾಗಿ ವೈಯಕ್ತಿಕ ಮಾಹಿತಿ ಪಡೆದು ವಂಚಿಸುವ ಪ್ರಕರಣಗಳು ಕಂಡುಬಂದಿವೆ. ಗ್ರಾಹಕರು ಇಂತಹ ಕರೆ ಅಥವಾ ಸಂದೇಶಗಳಿಗೆ ಸ್ಪಂದಿಸಿ ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆ, ಓಟಿಪಿ ಪಿನ್ ಮಾಹಿತಿಗಳನ್ನು ನೀಡಬಾರದು ಎಂದು ಬಿಎಸ್‌ಎನ್‌ಎಲ್‌ ತಿಳಿಸಿದೆ.
ಬಿಎಸ್ಎನ್ಎಲ್ ಗ್ರಾಹಕರಿಗೆ ಕರೆ ಅಥವಾ ಸಂದೇಶದ ಮೂಲಕ ವೈಯಕ್ತಿಕ ಮಾಹಿತಿ ಕೇಳುವುದಿಲ್ಲ. ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಸ್ಮಾರ್ಟ್ ಫೋನ್ ಬಳಕೆದಾರರು ಅನಾಮಿಕ ಸಂದೇಶಗಳೊಂದಿಗೆ ಬರುವ ಅ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ಲ್ಲಿ ಅಳವಡಿಸಿಕೊಳ್ಳಬಾರದು ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ವಂಚಕರಿಗೆ ಸುಲಭವಾಗಿ ಲಭಿಸುತ್ತದೆ.
ವಂಚನೆ ಪ್ರಕರಣಗಳು ಕಂಡು ಬಂದ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಹಾಗೂ ಬಿಎಸ್ಎನ್ಎಲ್ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement