ಮುಂಬೈ: ಮಲಾಡ್ ಪಶ್ಚಿಮದಲ್ಲಿ ವಸತಿ ಕಟ್ಟಡ ಕುಸಿದು 11 ಜನರು ಸಾವು, 8 ಮಂದಿಗೆ ಗಾಯ

ಮುಂಬೈ: ಮುಂಬೈನ ಮಲಾಡ್ ವೆಸ್ಟ್ ನಲ್ಲಿ ಬುಧವಾರ ರಾತ್ರಿ ವಸತಿ ಕಟ್ಟಡ (ಅಪಾರ್ಟ್‌ಮೆಂಟ್‌) ಕುಸಿದು 11 ಜನರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಹೆಚ್ಚಿನ ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದೆಂಬ ಶಂಕೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕುಸಿತವು ಹತ್ತಿರದ ವಸತಿ ರಚನೆಯನ್ನು ಆವರಿಸಿದೆ. ಇದು ಈಗ “ಅಪಾಯಕಾರಿ ಸ್ಥಿತಿಯಲ್ಲಿ” ಇರುವ ಪ್ರದೇಶದ ಮತ್ತೊಂದು ವಸತಿ ರಚನೆಯ ಮೇಲೂ ಪರಿಣಾಮ ಬೀರಿದೆ ಎಂದು ಪುರಸಭೆ ತಿಳಿಸಿದೆ. ವಸತಿ ಕಟ್ಟಡದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಬಿಎಂಸಿ ತಿಳಿಸಿದೆ.
ಮಹಿಳೆಯರು, ಮಕ್ಕಳು ಸೇರಿದಂತೆ 15 ಜನರನ್ನು ರಕ್ಷಿಸಲಾಗಿದೆ ಎಂದು ಮುಂಬೈನ ಡಿಸಿಪಿ ವಲಯ 11 ವಿಶಾಲ್ ಠಾಕೂರ್ ಮಾಹಿತಿ ನೀಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಜನರನ್ನು ರಕ್ಷಿಸಲು ತಂಡಗಳು ಇಲ್ಲಿವೆ ಎಂದು ಅವರು ಹೇಳಿದರು.
ಕಟ್ಟಡ ಕುಸಿತದ ಬಗ್ಗೆ ತನಿಖೆ..:
ಈವರೆಗೆ 18 ಜನರನ್ನು ರಕ್ಷಿಸಲಾಗಿದೆ ಎಂದು ಹೆಚ್ಚುವರಿ ಸಿಪಿ ದಿಲೀಪ್ ಸಾವಂತ್ ಮಾಹಿತಿ ನೀಡಿದ್ದು, ಘಟನೆ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸಲಿದ್ದಾರೆ. “ಇದು ದುರದೃಷ್ಟಕರ ಘಟನೆ. ಇದು ಜಿ +2 ಕಟ್ಟಡವಾಗಿದ್ದು ಮತ್ತೊಂದು ಕಟ್ಟಡದ ಮೇಲೆ ಬಿದ್ದಿದೆ. 18 ಜನರನ್ನು ರಕ್ಷಿಸಲಾಗಿದೆ, ಅವರಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಮಾರಿಕುಮಾರಿ ಹಿರಾಂಗನಾ (30), ಧನಲಕ್ಷ್ಮಿ ಬೇಬಿ (56), ಸಲೀಮ್ ಶೇಖ್ (49), ರಿಜ್ವಾನಾ ಸಯ್ಯದ್ (33), ಸೂರ್ಯಮಣಿ ಯಾದವ್ (39), ಕರೀಮ್ ಖಾನ್ (30) ಮತ್ತು ಗುಲ್ಜಾರ್ ಅಹ್ಮದ್ ಅನ್ಸಾರಿ ( 26) ಎಂದು ಗುರುತಿಸಲಾಗಿದೆ.
ಮಳೆಯಿಂದಾಗಿ ಕಟ್ಟಡ ಕುಸಿದಿದೆ’..:
ಏತನ್ಮಧ್ಯೆ, ಮಳೆಯಿಂದಾಗಿ ಕಟ್ಟಡಗಳು ಕುಸಿದಿವೆ ಎಂದು ಮಹಾರಾಷ್ಟ್ರ ಸಚಿವ ಅಸ್ಲಂ ಶೇಖ್ ಹೇಳಿದ್ದಾರೆ. “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಜನರು ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ನೋಡಲು ಕಟ್ಟಡಗಳ ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ” ಎಂದು ಅವರು ಹೇಳಿದರು.
ಮುಂಬೈ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಹಾರಾಷ್ಟ್ರದ ಮುಂಬೈ, ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲಿ ಭಾರತ ಹವಾಮಾನ ಇಲಾಖೆ (ಐಎಂಡಿ) ‘ಆರೆಂಜ್’ ಎಚ್ಚರಿಕೆಯನ್ನು ಹೊರಡಿಸಿದೆ.
ಮುಂಬೈನ ಸಾಂತಕ್ರೂಜ್ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2.30 ರವರೆಗೆ 164.8 ಮಿ.ಮೀ ಮಳೆಯಾಗಿದ್ದರೆ, ಕೊಲಾಬಾದಲ್ಲಿ 32.2 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement