ಸಕಲೇಶಪುರ ಹಳೆಕೆರೆ ಬಳಿ ಒಂಟಿ ಸಲಗನ ಸೆರೆ

posted in: ರಾಜ್ಯ | 0

ಹಾಸನ: ಮಲೆನಾಡು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ಒಂಟಿಸಲಗ ಸಕಲೇಶಪುರ ತಾಲ್ಲೂಕಿನ ಹಳೆಕೆರೆ ಗ್ರಾಮದ ಗೀತಾಂಜಲಿ ಎಸ್ಟೇಟ್‌ ಬಳಿ ಸೆರೆಯಾಗಿದೆ.
ಗುರುವಾರ ಬೆಳ್ಳಂಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ಭೀಮ‌‌ ಆನೆ ಬಳಸಿಕೊಂಡು ಈ ಒಂಟಿ ಸಲಗ ಹಿಡಿಯಲು ಕಾರ್ಯಚರಣೆ ನಡೆಸಿದ್ದಾರೆ.ಸುಮಾರು ಹೊತ್ತಿನ ಮೇಲೆ ಒಂಟಿಸಲಗ ಸೆರೆ ಸಿಕ್ಕಿದೆ.
ಡಿಸಿಎಫ್ ಬಸವರಾಜ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದರು. ಈ ಒಂಟಿ ಸಲಗನ ಸೆರೆ ಹಿಡಿಯಬೇಕು ಎಂದು ಸಾರ್ವಜನಿಕ ಒತ್ತಾಯಗಳು ಕೇಳಿಬಂದಿದ್ದವು. ಕೊನೆಗೂ ಇದಕ್ಕೆ ಮುಹೂರ್ತ ಕೂಡಿಬಂತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ