ಕೋವಿಡ್​ ವಿಚಾರದಲ್ಲಿ ಕೇಂದ್ರ ವಿರುದ್ಧ ಆರೋಪ: ಲಕ್ಷದ್ವೀಪದ ನಟಿ ಐಷಾ ಸುಲ್ತಾನ್​ ದೇಶದ್ರೋಹ ಪ್ರಕರಣ

ಕೋವಿಡ್​ ವಿಚಾರದಲ್ಲಿ ಕೇಂದ್ರದ ವಿರುದ್ಧ ಮಾತನಾಡಿರುವ ಲಕ್ಷದ್ವೀಪದ ನಟಿ ಆಯಿಷಾ ಸುಲ್ತಾನ್​ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಇದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಯಿಷಾ ಇತ್ತೀಚೆಗೆ ಮಾಧ್ಯಮವೊಂದರ ಚರ್ಚೆಯಲ್ಲಿ ಭಾಗಿಯಾಗಿದ್ದಾಗ ಲಕ್ಷದ್ವೀಪದಲ್ಲಿ ಕೊರೊನಾ ಹೆಚ್ಚಲು ಇಲ್ಲಿನ ಅಡ್ಮಿನಿಸ್ಟ್ರೇಟರ್​ ಪ್ರಫುಲ್​ ಪಟೇಲ್​ ಅವರ ನಿರ್ಧಾರವೇ ಕಾರಣ. ಮತ್ತು ಲಕ್ಷದ್ವೀಪದ ವಿರುದ್ಧ ಕೇಂದ್ರ ಸರ್ಕಾರ ಬಯೋ ವೆಪನ್​ ಬಳಕೆ ಮಾಡಿದೆ. ಆರಂಭದಲ್ಲಿ ಇಲ್ಲಿ ಕೊವಿಡ್​ ಕೇಸ್​ಗಳು ಇರಲೇ ಇಲ್ಲ. ಈಗ ನಿತ್ಯ ನೂರು ಪ್ರಕರಣಗಳು ಬರುತ್ತಿವೆ’ ಎಂದು ಆರೋಪಿಸಿದ್ದರು.
ಆಯಿಷಾ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ಇದು ವಿವಾದಾತ್ಮಕ ಹೇಳಿಕೆ ಎಂದು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ದೇಶದ್ರೋಹ ಪ್ರಕರಣ ದಾಖಲಿಸಿದೆ.
ನನ್ನ ವಿರುದ್ಧ ಬಿಜೆಪಿ ಕಾರ್ಯಕರ್ತರು ದೇಶದ್ರೋಹದ ಪ್ರಕರಣ ದಾಖಲು ಮಾಡಿದ್ದರೂ ಸತ್ಯವೇ ಗೆಲುವು ಕಾಣುತ್ತದೆ. ನಾನು ಜನಿಸಿದ ಭೂಮಿಗಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement