ಮೇ 4 ರಿಂದ 23ನೇ ಬಾರಿಗೆ ಏರಿಕೆ : ಇಂದು ದಾಖಲೆ ಗರಿಷ್ಠಮಟ್ಟ ಮುಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ

ನವದೆಹಲಿ: ಎಲ್ಲ ಮಹಾನಗರಗಳಲ್ಲಿ ಸತತ ಎರಡನೇ ಬಾರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ (ಜೂನ್ 12) ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮೇ 4 ರಿಂದ ಈ ಹೆಚ್ಚಳವು 23ನೇ ಏರಿಕೆಯಾಗಿದೆ.
ಇಂದಿನ (ಶನಿವಾರದ) ಬೆಲೆ ಪರಿಷ್ಕರಣೆಯೊಂದಿಗೆ, ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 102.30 ರೂ., ಡೀಸೆಲ್ ಬೆಲೆ 94.39 ರೂ ಎಂದು ಭಾರತೀಯ ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್ ತಿಳಿಸಿದೆ. ಮೇ 29 ರಂದು ಮುಂಬೈ ಪೆಟ್ರೋಲ್ ಅನ್ನು ಲೀಟರ್ 100 ರೂ.ಗೆ ಮಾರಾಟ ಮಾಡಲಾಗುತ್ತಿರುವದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೆಹಲಿಯಲ್ಲಿ ಇಂದು ಪೆಟ್ರೋಲ್ 96.12 ರೂ.ಗೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 86.98 ರೂ.ಗಳಾಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ 97.43 ರೂ. ಮತ್ತು ಡೀಸೆಲ್‌ಗೆ 91.64 ರೂ., ಕೋಲ್ಕತ್ತಾದಲ್ಲಿ ಏರಿಕೆಯ ನಂತರ ಪೆಟ್ರೋಲ್ ಪ್ರತಿ ಲೀಟರ್‌ಗೆ 96.06 ಮತ್ತು ಡೀಸೆಲ್ ಲೀಟರ್‌ಗೆ 89.83 ರೂ.ಗಳಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 99.33 ರೂ.ಗಳಾದರೆ, ಡೀಸೆಲ್‌ ದರ 94.82 ರೂ.ಗಳಾಗಿವೆ.
ಹೈದರಾಬಾದಿನಲ್ಲಿ ಪೆಟ್ರೋಲ್‌ ದರ 99.90ರೂ.ಗಳಾದರೆ ಡೀಸೆಲ್‌ ದರ 94.82 ರೂ.ಗಳಾಗಿದೆ. ನೋಯ್ಡಾದಲ್ಲಿ ಪೆಟ್ರೋಲ್‌ ದರ 93.46 ರೂ.ಗಳಾದರೆ ಡೀಸೆಲ್‌ ದರ 87.46ರೂ.ಗಳಾಗಿದೆ.
ಕನಿಷ್ಠ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಮಾರ್ಕ್ 100 ರೂ.ಗಳನ್ನು ತಲುಪಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

100 ರೂ. ಗಡಿದಾಟಿದ ಡೀಸೆಲ್:
ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ, ಡೀಸೆಲ್ ಬೆಲೆ ಮೊದಲ ಬಾರಿಗೆ 100 ರೂ.ಗಳನ್ನು ದಾಟಿದೆ ಮತ್ತು ಪ್ರತಿ ಲೀಟರ್‌ಗೆ 100.05 ರೂ.ಗೆ ಮಾರಾಟವಾಗುತ್ತಿದೆ. ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಜಿಲ್ಲೆಯಲ್ಲಿ ಈಗಾಗಲೇ ಪೆಟ್ರೋಲ್ ಪ್ರತಿ ಲೀಟರ್‌ಗೆ 107 ರೂ.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.
ಒಎಂಸಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರವನ್ನು ಪರಿಷ್ಕರಿಸುತ್ತವೆ. ಜೊತೆಗೆ, ದರಗಳು ಬ್ರೆಂಟ್ ಕಚ್ಚಾ ತೈಲ ದರಗಳ ಮೇಲೆ ಅವಲಂಬಿತವಾಗಿರುತ್ತದೆ ಏಕೆಂದರೆ ಭಾರತವು ತನ್ನ ಇಂಧನ ಅಗತ್ಯತೆಗಳಲ್ಲಿ ಶೇಕಡಾ 85 ರಷ್ಟು ಆಮದು ಮಾಡಿಕೊಳ್ಳುತ್ತದೆ. ಸ್ಥಳೀಯ ತೆರಿಗೆಗಳಾದ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್‌ನ ಚಿಲ್ಲರೆ ಬೆಲೆಯ ಶೇಕಡಾ 61 ಕ್ಕಿಂತಲೂ ಹೆಚ್ಚು ಮತ್ತು ಡೀಸೆಲ್‌ನ ಶೇಕಡಾ 56 ರಷ್ಟನ್ನು ಹೊಂದಿವೆ. ಕೇಂದ್ರ ಸರ್ಕಾರ ಪೆಟ್ರೋಲ್‌ಗೆ ಪ್ರತಿ ಲೀಟರ್ ಅಬಕಾರಿ ಸುಂಕಕ್ಕೆ 32.9 ರೂ. ಮತ್ತು ಡೀಸೆಲ್‌ಗೆ 31.80 ರೂ.ಗಳಾಗಿವೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement