ಕೋಣಗಳ ಹಿಂಸಾತ್ಮಕ ಸಾಗಾಟ: ಒಂದು ಕೋಣ ಸಾವು, ಮೂವರ  ಬಂಧನ

ಕುಮಟಾ :ತಾಲೂಕಿನ ಹಿರೇಗುತ್ತಿಯ ರಾಷ್ಟ್ರೀಯ ಹೆದ್ದಾರಿ 66ರ  ಚೆಕ್ ಪೋಸ್ಟ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 14 ಕೋಣಗಳು ಹಾಗೂ ಲಾರಿಯನ್ನು ವಶಕ್ಕೆ ತೆಗೆದುಕೊಳ್ಲಲಾಗಿದೆ. ಅದರಲ್ಲಿ ಒಂದು ಕೋಣ ಮೃತಪಟ್ಟಿದೆ.
ಖಚಿತ ಮಾಹಿತಿ ಆಧರಿಸಿ ಗೋಕರ್ಣ ಪೊಲೀಸರು ಲಾರಿ ತಡೆದಾಗ ಅದರಲ್ಲಿ ಹಿಂಸಾತ್ಮಕವಾಗಿ ಭಟ್ಕಳಕ್ಕೆ ಸಾಗಿಸುತ್ತಿದ್ದ  14 ಕೋಣಗಳು ಕಂಡುಬಂದವು. ಅದರಲ್ಲಿ ಒಂದು ಕೋಣ ಮೃತಪಟ್ಟಿತ್ತು. ತಕ್ಷಣ ಕಾರ್ಯ ಪ್ರವರ್ತರಾದ ಗೋಕರ್ಣ ಪಿಎಸ್ಐ ನವೀನ ನಾಯ್ಕ ಮೂವರು ಆರೋಪಿಗಳನ್ನು ಬಂಧಿಸಿದ್ದು ಕೋಣಗಳು ಮತ್ತು ಸಾಗಾಟ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಾದ ಲಾರಿ ಚಾಲಕ ಗೌರಿ ಬಿದನೂರಿನ  ಅಹಮದ್, ಕೆ. ಆರ್. ಪೇಟೆ ಮಂಡ್ಯದ ರವಿಕುಮಾರ, ರಾಣೇಬೆನ್ನೂರ್ ಅರುಣ ಕುಮಾರ ನಾಗನ ಗೌಡ ಪಾಟೀಲ್ ಅವರನ್ನು ಬಂಧಿಸಿದ್ದಾರೆ. ಇವರಿಗೆ ಸಹಾಯ ಮಾಡಿದ ಭಟ್ಕಳದ ಇಸ್ಮಾಯಿಲ್ ಮತ್ತು ರಿಯಾನ್ ಸಾ ಅವರ ಮೇಲೆ ಕೇಸ್ ದಾಖಲಿಸ ಲಾಗಿದೆ ಎಂದು ಪಿಎಸ್‌ಐ ತಿಳಿಸಿದ್ದಾರೆ. ಜೀವಂತ ಇರುವ 13 ಕೋಣ ಗಳ ಬೆಲೆ 2.60 ಲಕ್ಷ ರೂ.ಗಳು ಎಂದು ಅಂದಾಜು ಮಾಡಲಾಗಿದೆ. ಕುಮಟಾ ಸಿಪಿಐ  ನೇತೃತ್ವ ದಲ್ಲಿ ಗೋಕರ್ಣ ಪೊಲೀಸರು ತನಖೆ ಕೈ ಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement