36 ರೂ..ಪೆಟ್ರೋಲ್‌ ಮೇಲೆ ಬಿಜೆಪಿ ಸರ್ಕಾರ ಶೇಕಡಾ 163 ತೆರಿಗೆ: ಸರ್ಕಾರಗಳ ವಿರುದ್ಧ ದಾಖಲೆ ಸಮೇತ ಹರಿಹಾಯ್ದ ಲದವಾ

ಹುಬ್ಬಳ್ಳಿ: ಕೇ೦ದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್‌ 36ರೂ. ಗಳ ಮೇಲೆ 58.34ರೂ.ಗಳ ತೆರಿಗೆ ಹೇರಿ ಜನಸಾಮಾನ್ಯರ ಬದುಕು ಅಸಹನೀಯಗೊಳಿಸಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೋವಿಡ್‌ ಸ೦ಕಟ, ಆರ್ಥಿಕ ಸ೦ಕಟ, ನಿರುದ್ಯೋಗ ಸಮಸ್ಯೆ, ಹಣದುಬ್ಬರ ಕಾರಣದಿ೦ದ ದೇಶದ ಜನ ತತ್ತರಿಸಿರುವಾಗ, ಕೇಂದ್ರ ಹಾಗೂ ರಾಜ್ಯ ಸರಕಾರದ ತೆರಿಗೆ ಹೇರಿಕೆ ಕ್ರಮ ಖಂಡನೀಯ ಎಂದು ಅವರು ಹೇಳಿದ್ದಾರೆ.
ತೆರಿಗೆ ಸಹಿತವಾಯೂ ಕೇವಲ 60 ರೂ.ಗಳಿಗೆ ಪೆಟ್ರೋಲ್‌ ಹಾಗೂ 50 ರೂ.ಗಳಿಗೆ ಡೀಸೆಲ್‌ ಪ್ರತಿ ಲೀಟರಿಗೆ ಲಭ್ಯವಾಗಬಹುದಾಗಿದ್ದರೂ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಸರಕಾರಗಳ ತೆರಿಗೆ ಹೇರಿಕೆಯಿಂದ ಪೆಟ್ರೋಲ್‌ ದರ ಲೀಟರಿಗೆ 98.14ರೂ.ಗಳು ಹಾಗೂ ಡೀಸಲ್‌ 90.40 ರೂ.ಗಳಿಗೆ ಮಾರಾಟವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರತಿ ಲೀಟರ್‌ ಡೀಸೆಲ್‌ ಮೇಲೆ ಕೇವಲ 3.46 ರೂ.ಗಳಷ್ಟು ತೆರಿಗೆ ವಿಧಿಸಲಾಗುತ್ತಿತ್ತು, ಆದರೆ ಇ೦ದಿನ ಬಿಜೆಪಿ ಸರ್ಕಾರ ಪ್ರತಿ ಲೀಟರ್‌ ಡೀಸೆಲ್‌ ಮೇಲೆ 32 ರೂ.ಗಳ ತೆರಿಗೆ ವಿಧಿಸುತ್ತಿದೆ. ಪೆಟ್ರೋಲ್‌ ಮೇಲೆ ಪ್ರತಿ ಲೀಟರಿಗೆ ಅಂದು ಕೇವಲ 9 ರೂಪಾಯಿ ತೆರಿಗೆ ವಿಧಿಸುತ್ತಿದ್ದರೆ, ಇ೦ದು ಬಿಜೆಪಿ ಸರ್ಕಾರ 33 ರೂ.ಗಳ ತೆರಿಗೆ ಹೇರುತ್ತಿದೆ. ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆಗೆ ಕಚ್ಚಾತೈಲ ಬೆಲೆ ಏರಿಕೆ ಕಾರಣವಾಗಿರದೆ ಕೇವಲ ಕೇಂದ್ರ-ರಾಜ್ಯ ಸರ್ಕಾರಗಳ ಅತಿಯಾದ ತೆರಿಗೆಗಳು ಮಾತ್ರ ಕಾರಣ ಎ೦ದು ವಸ೦ತ ಲದವಾ ವಿವರಿಸಿದ್ದಾರೆ.
ಜೂನ್‌ 1ರ೦ದು ಕಚ್ಚಾತೈಲ ಬೆಲೆ 159 ಲೀಟರಿನ ಪ್ರತಿ ಬ್ಯಾರೆಲ್‌ ಗೆ ಭಾರತೀಯ ಮೌಲ್ಯದ ಪ್ರಕಾರ ರೂಪಾಯಿ 5,150 ರಷ್ಟು ಆಗುತ್ತದೆ. ಅಂದರೆ ಪ್ರತಿ ಲೀಟರ್‌ ತೈಲಬೆಲೆ ಕೇವಲ ರೂಪಾಯಿ 32.40 ಮಾತ್ರ ಆಗುತ್ತದೆ.

ವಸಂತ ಲದವಾ ಅವರು ಕೊಟ್ಟ ಪೆಟ್ರೋಲ್‌ ಮತ್ತು ಡೀಸೆಲ್‌ ದರದ ಲೆಕ್ಕಾಚಾರ ಕೆಳಗಿನ೦ತಿದೆ.

ವಿವರ                                                            ಪೆಟ್ರೋಲ್‌                            ಡೀಸೆಲ್‌
ಕಚ್ಚಾ ತೈಲ ಬೆಲೆ ಪ್ರತಿ ಲೀಟರಿಗೆ                            32.40 ರೂ.                         32.40 ರೂ.
ಸ೦ಸ್ಕರಣೆ, ಓಎ೦ಸಿ, ಸಾಗಾಟ ವೆಚ್ಚ                       03.60 ರೂ.                         06.10ರೂ.ಗಳು
ಪಂಪ್‌ ಗಳಿಗೆ ವಿತರಣಾ ತೈಲ ಬೆಲೆ                         36.00 ರೂ.                          38.50 ರೂ.
ಕೇಂದ್ರ ಸರ್ಕಾರದ ಸು೦ಕ ಮತ್ತು ರೋಡ್‌ ಸೆಸ್‌          32.90 ರೂ.                          31.80 ರೂ.
ಪೆಟ್ರೋಲ್‌ ಪ೦ಪ್‌ ಗಳ ಲಾಭ                               03.80 ರೂ.                          2.60 ರೂ.
ಒಟ್ಟು                                                            72.70 ರೂ.                          72.90 ರೂ. 
ಕರ್ನಾಟಕದ ತೆರಿಗೆ ಶೇಕಡಾ 35 ಮತ್ತು 24             25.44 ರೂ.                          17.50 ರೂ.
ಇಂದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ                98.14 ರೂ.                          90.40 ರೂ.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

2014ರಲ್ಲಿ ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ 159 ಲೀಟರ್‌ ನ ಒಂದು ಬ್ಯಾರೆಲ್‌ ಕಚ್ಚಾತೈಲ ಬೆಲೆ 7,889 ರೂ.ಇತ್ತು. ಪ್ರತಿ ಲೀಟರ್‌ ಕಚ್ಚಾತೈಲ ಬೆಲೆ 49.65 ರೂ.ಗಳು. ಇ೦ದಿನ ಬೆಲೆಗಿಂತ ಅತ್ಯ೦ತ ಹೆಚ್ಚಾಗಿ ಇತ್ತಾದರೂ, ದೇಶದ ಜನ ಸಾಮಾನ್ಯರ ಕಾಳಜಿವಹಿಸಿ ಜನಹಿತಕ್ಕಾಗಿ
ಡೀಸೆಲ್‌ ಗೆ ಕೇವಲ 3.50 ರೂ ಹಾಗೂ ಪೆಟ್ರೋಲಿಗೆ 9.48 ರೂ. ಮಾತ್ರ ತೆರಿಗೆ ವಿಧಿಸಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 76 ಮತ್ತು 68
ರೂ.ಗಳಿಗೆ ನಿಗದಿಪಡಿಸಲಾಗಿತ್ತು. ಆದರೆ ಇ೦ದು ಕಚ್ಚಾತೈಲ ಬೆಲೆ ಅತ್ಯ೦ತ ಕಡಿಮೆ ಇದ್ದರೂ ಸಹಿತ ಪೆಟ್ರೋಲ್‌ 98.14ರೂ.ಗಳು ಮತ್ತು ಡೀಸೆಲ್‌ .90.40 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದುಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ.
2012-13 ನೇ ಸಾಲಿನಲ್ಲಿ ಕೇಂದ್ರ ಸರಕಾರ ಕೇವಲ 52,537 ಕೋಟಿ ರು.ಗಳಷ್ಟು ಸುಂಕ ಸಂಗ್ರಹಿಸಿತ್ತು. 2014-15ರಲ್ಲಿ 72,160 ರೂ.ಗಳು . ಹಾಗೂ 2020-21 ರಲ್ಲಿ ಒಟ್ಟು ಸು೦ಕ ಸ೦ಗ್ರಹ ಮೂರು ಲಕ್ಷ ಕೋಟಿ ರು.ಗಳನ್ನು ದಾಟಿದೆ. 2011 ರಿ೦ದ 2014 ಅವಧಿಯಲ್ಲಿ ಕಚ್ಚಾತೈಲ ಬೆಲೆ ಸರಾಸರಿ ಪ್ರತಿ ಲೀಟರಿಗೆ 51.12 ರೂ.ಗಳಿತ್ತು.. ಆದರೆ ನಂತರದ 7 ವರ್ಷಗಳಲ್ಲಿ ಕಚ್ಚಾತೈಲ ಬೆಲೆ ಸರಾಸರಿ ಪ್ರತಿ ಲೀಟರಿಗೆ 29.67 ರೂ.ಗಳಷ್ಟಿದೆ. ಇ೦ದು ಸರಾಸರಿ ಶೇ.58ರಷ್ಟು ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ, ಕೇ೦ದ್ರ ಸರ್ಕಾರದ ಸುಮಾರು ಶೇ.571 ಹೆಚ್ಚುವರಿ ತೆರಿಗೆಗಳ ಕಾರಣ ಪಟ್ರೋಲ್‌ ಡೀಸೆಲ್‌ ಬೆಲೆ ಶತಕ ದಾಟುವ ಹಂತಕ್ಕ ಬಂದಿದೆ ಎಂದು ಅವರು ದಾಖಲೆ ಸಮೇತ ತಿಳಿಸಿದ್ದಾರೆ.
2019 ರ ಏಪ್ರಿಲ್‌ – ನವ೦ಬರ್‌ ಅವಧಿಯಲ್ಲಿ ದೇಶದಲ್ಲಿ ಪೆಟ್ರೋಲ್‌ 20.40 ದಶಲಕ್ಷ ಟನ್‌ ಹಾಗೂ ಡೀಸಲ್‌ 55.40 ದಶಲಕ್ಷ ಟನ್‌ ಬಳಕೆಯಾಗಿ ಕೇಂದ್ರ ಸರ್ಕಾರ ಒಟ್ಟು 1,32,899 ಕೋಟಿ ರೂ.ಗಳ ಸು೦ಕ ಸಂಗ್ರಹಿಸಿತು. 2020ರ ಇದೇ ಅವಧಿಯಲ್ಲಿ ಪೆಟ್ರೋಲ್‌ 13.5 ದಶಲಕ್ಷ ಟನ್‌ ಹಾಗೂ ಡೀಸೆಲ್‌ 44.90 ದಶಲಕ್ಷ ಟನ್‌ ಬಳಕೆಯಾಗಿತ್ತು. ದೇಶದಲ್ಲಿ 2019 ರ ಅವಧಿಗಿ೦ತ 2020 ರ ಅವಧಿಯಲ್ಲಿ 13.50 ದಶಲಕ್ಷ ಟನ್‌ ಪೆಟ್ರೋಲ್‌-ಡೀಸೆಲ್‌ ಬಳಕೆಯಾಗಿದ್ದರೂ ಸರಕಾರ ಹೆಚ್ಚುವರಿ ಸುಂಕ ವಿಧಿಸಿ 2020 ರಲ್ಲಿ 63,443 ಕೋಟಿ ಹೆಚ್ಚುವರಿ ಸುಂಕ ಜನಸಾಮಾನ್ಯರ ಮೇಲೆ ಹೊರಿಸಿ ಸ೦ಗ್ರಹಿಸಿತು.
2020 ರ ಏಪ್ರಿಲ್‌ ತಿ೦ಗಳಲ್ಲಿ ಕಚ್ಚಾತೈಲ ಬೆಲೆ ದೇಶದ ಬಿಸಿಲಿರಿ ನೀರಿಗಿಂತಲೂ ಕಡಿಮೆಯಾಗಿತ್ತು. ಆದರೆ ಸರಕಾರ ತೈಲ ಬೆಲೆ
ಇಳಿಕೆಯ ಲಾಭ ದೇಶದ ಬಳಕೆದಾರರಿಗೆ ವರ್ಗಾಯಿಸುವುದರ ಬದಲಾಗಿ ಹೆಚ್ಚುವರಿ ಸುಂಕ ವಿಧಿಸಿ ದೇಶದ ಬಳಕೆದಾರರಿಂದ ಸಂಗ್ರಹಿಸಿತು.
ಆಶ್ಚರ್ಯವೇನೆಂದರೆ ದೇಶದ ಜನಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ಸುಂಕ ವಿಧಿಸುವ ಸರಕಾರ ಶ್ರೀಮಂತರು ಬಳಸುವ ಎಟಿಎಫ್‌
ವೈಮಾನಿಕ ತೈಲ ಬೆಲೆ ದೇಶದಲ್ಲಿ ಪ್ರತಿ ಲೀಟರ್‌ ಗೆ ಕೇವಲ 57.80 ರೂ.ಗಳಿಗೆ ಮಾರಲಾಗುತ್ತಿದೆ.ಮಾಹಿತಿ ಹಕ್ಕು ಪ್ರಕಾರ ಪಡೆದ ಮಾಹಿತಿಯ ಪ್ರಕಾರ ದೇಶದಿಂದ ಸುಮಾರು 15 ದೇಶಗಳಿಗೆ ಸರಾಸರಿ ಪ್ರತಿ ಲೀಟರ್‌ ಪೆಟ್ರೋಲ್‌ ಗೆ 34 ರೂ.ಗಳು ಮತ್ತು 29 ದೇಶಗಳಿಗೆ ಸರಾಸರಿ 37 ರೂ.ಗಳಂತೆ ಡೀಸೆಲ್‌ ರಫ್ತು ಮಾಡಲಾಗುತ್ತದೆ. ಆದರೆ ದೇಶದ ಬಳಕದಾರರಿಗೆ ನೂರು ರೂಪಾಯಿ ಪ್ರತಿ ಲೀಟರ್‌ಗೆ ಮಾರಾಟ ಮಾಡಲಾಗುತ್ತಿದೆ ಎಂದು ವಸಂತ ಲದವಾ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

4.3 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement