ಷೇರು ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದ ಅದಾನಿ ಗ್ರೂಪ್ ಷೇರುಗಳು.. ಕಾರಣವೇನೆಂದರೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 14) ಅದಾನಿ ಕಂಪನಿಗಳ ಷೇರುಗಳ ಬೆಲೆ ಭಾರಿ ಕುಸಿಯುತ್ತಿದೆ. ಇದಕ್ಕೆ ಅದಾನಿ ಗ್ರೂಪ್ ನ ಮೂರು ವಿದೇಶಿ ಕಂಪನಿಗಳ ಷೇರುಗಳನ್ನು ಜಪ್ತಿ ಮಾಡಿರುವುದೇ ಕಾರಣ. ಅದಾನಿ ಕಂಪನಿಯು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಕಾಯಿದೆಯಡಿ ಕೈವೈಸಿ ನಿಯಮ ಪಾಲಿಸದೇ ಇರುವುದಕ್ಕೆ ಅವರ ಮೂರು ಕಂಪನಿಗಲ ಷೇರು ಜಪ್ತಿ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದು ಭಾರತೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು ಈವರೆಗೆ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಶೇ. 5 ರಿಂದ 20 ರಷ್ಟು ಕುಸಿತ ಕಾಣುತ್ತಿವೆ.
ಸೋಮವಾರ ಷೇರುಪೇಟೆ ಆರಂಭವಾದ ಮೂರೇ ಗಂಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡಿವೆ. ಇಂದು ಮೂರ್ನಾಲ್ಕು ಗಂಟೆಗಳಲ್ಲೇ ಸುಮಾರು 91,704 ಕೋಟಿ ರೂಪಾಯಿ ಕುಸಿತ ಆಗಿದೆ. ಷೇರುಪೇಟೆಯಲ್ಲಿ ಅದಾನಿ ಕಂಪನಿಗಳ ಒಟ್ಟಾರೆ ಷೇರು ಮಾರುಕಟ್ಟೆ ಬಂಡವಾಳ 8.58 ಲಕ್ಷ ಕೋಟಿ ರೂಪಾಯಿ.

ಅದಾನಿ ಪೋರ್ಟ್ ಕಂಪನಿಯ ಪ್ರತಿಯೊಂದು ಷೇರು ಬೆಲೆ ಇವತ್ತು 104 ರೂ.ಗಳ ಕುಸಿತವಾಗಿದೆ. ಕಂಡಿದೆ. ಬೆಳಿಗ್ಗೆ 9.15 ಕ್ಕೆ ಷೇರುಪೇಟೆ ವಹಿವಾಟು ಶುರುವಾದಾಗ, 840 ರೂಪಾಯಿ ಇದ್ದಿದ್ದು. ಮಧ್ಯಾಹ್ನ 12.24ರ ಹೊತ್ತಿಗೆ ಮಹಾಪತನ ಕಂಡು 104 ರೂ.ಗಳ ಕುಸಿತ ಕಂಡು 736ರೂಪಾಯಿಗೆ ಬಂದು ತಲುಪಿತ್ತು. ಶೇ.12.49 ರಷ್ಟು ಕುಸಿತ ಕಂಡಿತ್ತು.
ಅದಾನಿ ಎಂಟರ್ ಪ್ರೈಸಸ್ ಕಂಪನಿಯ ಷೇರುಗಳ ಬೆಲೆ ಬೆಳಿಗ್ಗೆ 1602 ರೂಪಾಯಿ ಇದಿದ್ದು, ಮಧ್ಯಾಹ್ನದ ವೇಳೆಗೆ 178 ರೂಪಾಯಿ ಕುಸಿತ ಕಂಡು 1423ಕ್ಕೆ ಬಂದು ನಿಂತಿತ್ತು. ಮಧ್ಯಾಹ್ನ 12.24ರ ಹೊತ್ತಿಗೆ ಶೇ.11.15 ರಷ್ಟು ಕುಸಿತ ಕಂಡಿದ್ದವು. ಅದಾನಿ ಟ್ರಾನ್ಸ್ ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಕಂಪನಿಗಳ ಷೇರು ಬೆಲೆ ತಲಾ ಶೇ.5 ರಷ್ಟು ಕುಸಿತ ಕಂಡಿವೆ.
ಹೂಡಿಕೆದಾರರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಬಾರಿ ಪ್ರಮಾಣದಲ್ಲಿ ಮಾರುತ್ತಿರುವುದಿರಂದ ಷೇರುಗಳಿಗೆ ಬೇಡಿಕೆ ಕುಸಿದು ಬೆಲೆ ಕುಸಿಯುತ್ತಿದೆ.
ಅದಾನಿ ಗ್ರೂಪ್ ಕಂಪನಿಗಳ ಬೆಲೆ ಇಂದು ಷೇರುಮಾರ್ಕೆಟ್ ನಲ್ಲಿ ಕುಸಿಯಲು ನ್ಯಾಷನಲ್ ಸೆಕ್ಯೂರೀಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ಅದಾನಿ ಗ್ರೂಪ್ ಗೆ ಸೇರಿದ ಮೂರು ವಿದೇಶಿ ಫಂಡ್ ಗಳ ಖಾತೆಯನ್ನು ಜಪ್ತಿ ಮಾಡಿದ್ದು ಕಾರಣ ಎಂದು ಮಾರುಕಟ್ಟೆ ವಿಷ್ಲೇಕರು ಹೇಳುತ್ತಿದ್ದಾರೆ. ಅಲಬುಲ್ ಇನ್ ವೆಸ್ಟ್ ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಎಪಿಎಂಎಸ್ ಫಂಡ್‌ನ ಖಾತೆಗಳಲ್ಲಿದ್ದ ಷೇರುಗಳನ್ನು ಇದು ಜಫ್ತಿ ಮಾಡಿದೆ.
ಈ ಮೂರು ಕಂಪನಿಗಳ 43,500 ಕೋಟಿ ರೂಪಾಯಿ ಷೇರುಗಳನ್ನು ಜಪ್ತಿ ಮಾಡಲಾಗಿದೆ.. ಮೇ 31 ಅಥವಾ ಅದಕ್ಕೂ ಮೊದಲೇ ಅದಾನಿ ಕಂಪನಿಯ ಮೂರು ವಿದೇಶಿ ಫಂಡ್ ಗಳ ಷೇರುಗಳ ಜಪ್ತಿಗೆ ಈ ಮೊದಲೇ ಆದೇಶ ನೀಡಿದೆ. ಆದರೇ, ಜೂನ್ 13ರವರೆಗೂ ಈ ಸುದ್ದಿ ಮಾಧ್ಯಮಗಳಲ್ಲಿ ಬಹಿರಂಗವಾಗಿರಲಿಲ್ಲ. ಜೂನ್ 13ರ ಭಾನುವಾರ ಸುದ್ದಿ ಬಹಿರಂಗವಾಗಿದೆ. ಹೀಗಾಗಿ ಹೂಡಿಕೆದಾರರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಿದ್ದರಿಂದ ಷೇರುಗಳ ಬೆಲೆ ಕುಸಿತ ಕಂಡಿದೆ.
ಈ ಕಂಪನಿಗಳು ಕೆವೈಸಿ ನಿಯಮ ಪಾಲಿಸಿರಲಿಲ್ಲ. ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆ್ಯಕ್ಟ್ ನಡಿ ಕೆವೈಸಿ ನಿಯಮ ಪಾಲಿಸಿ, ಷೇರುಗಳ ಮಾಲೀಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಸೆಬಿ ಹಾಗೂ ನ್ಯಾಷನಲ್ ಸೆಕ್ಯೂರೀಟೀಸ್ ಢಿಫಾಸಿಟರಿ ಲಿಮಿಟೆಡ್ ಗೆ ಸಲ್ಲಿಸುವುದನ್ನು ಕಳೆದ ವರ್ಷದಿಂದ ಸೆಬಿ ಕಡ್ಡಾಯ ಮಾಡಿದೆ.
ಸಮರ್ಪಕವಾಗಿ ವಿವರ ಸಲ್ಲಿಸದ ಕಾರಣದಿಂದ ಅದಾನಿ ಗ್ರೂಪ್‌ನ ಮಾರಿಷಸ್ ಕಂಪನಿಗಳ ಷೇರುಗಳನ್ನ ಜಫ್ತಿ ಮಾಡಲಾಗಿದೆ. ಈ ಮೂರು ವಿದೇಶಿ ಫಂಡ್ ಗಳು, ಅದಾನಿ ಎಂಟರ್ ಪ್ರೈಸಸ್ ನಲ್ಲಿ ಶೇ.682 ರಷ್ಟು ಷೇರು ಹೊಂದಿವೆ. ಅದಾನಿ ಟ್ರಾನ್ಸ್ ಮಿಷನ್ ನಲ್ಲಿ ಶೇ.8 ರಷ್ಟು ಷೇರು ಹೊಂದಿವೆ. ಅದಾನಿ ಟೋಟಲ್ ಗ್ಯಾಸ್ ನಲ್ಲಿ ಶೇ.5.92 ರಷ್ಟು ಷೇರು , ಅದಾನಿ ಗ್ರೀನ್ ನಲ್ಲಿ ಶೇ.3.58 ರಷ್ಟು ಷೇರು ಹೊಂದಿವೆ.
ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಕೂಡ ಕಳೆದ ಒಂದು ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಶೇ. 200 ರಿಂದ ಶೇ. 1000 ದ ವರೆಗೂ ಏರಿಕೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಷೇರು ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲು ಏನು ಕಾರಣ ಷೇರು ಬೆಲೆಯಲ್ಲಿ ಏನಾದರೂ ಮೋಸ ನಡೆದಿದೆಯೇ ಎಂಬ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement