ಭಾರತೀಯ ಮೂಲದ ಸತ್ಯ ನಾದೆಲ್ಲಾ ಈಗ ಮೈಕ್ರೋಸಾಫ್ಟ್ ಅಧ್ಯಕ್ಷ

ಮೈಕ್ರೋಸಾಫ್ಟ್ ಕಾರ್ಪ್ ಬುಧವಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲಾ ಅವರು ಕಂಪನಿಯ ನೂತನ ಚೇರ್ಮನ್‌ ಆಗಿ ನೇಮಕವಾಗಿದ್ದಾರೆ.
ಸ್ಟೀವ್ ಬಾಲ್ಮರ್ ನಂತರ ನಾದೆಲ್ಲಾ 2014 ರಲ್ಲಿ ಸಾಫ್ಟ್‌ವೇರ್ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಉನ್ನತ ಕಾರ್ಯನಿರ್ವಾಹಕರಾಗಿ 7 ವರ್ಷಗಳಿಗಿಂತ ಹೆಚ್ಚು ಸಮಯ ಕಾರ್ಯನಿರ್ವಹಿಸಿದ ನಂತರ ಈಗ 53 ವರ್ಷದ ನಾದೆಲ್ಲಾ ಜಾನ್ ಥಾಂಪ್ಸನ್ ಅವರ ಮೈಕ್ರೋಸಾಫ್ಟ್ ಕಾರ್ಪ್ ಚೇರ್ಮನ್‌ ಆಗಿ ನೇಮಕವಾಗಿದ್ದಾರೆ.
ಕಂಪನಿಯು ಮಾಜಿ ಅಧ್ಯಕ್ಷ ಜಾನ್ ಥಾಂಪ್ಸನ್‌ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಸತ್ಯ ನಾದೆಲ್ಲಾ ಸಿಇಒ ಕೆಲಸವನ್ನು ವಹಿಸಿಕೊಂಡಾಗ, ಬಿಲ್ ಗೇಟ್ಸ್ ಅವರು ಸಹ-ಸ್ಥಾಪಿಸಿದ ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದರು. ಮೈಕ್ರೋಸಾಫ್ಟ್‌ನಲ್ಲಿ ತಮ್ಮ ಪಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡರು ಮತ್ತು ಥಾಂಪ್ಸನ್‌ ಆ ವೇಳೆ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಭಾರತೀಯ ಮೂಲದ ಸತ್ಯ ನಾದೆಲ್ಲಾ ನಾಯಕತ್ವದಲ್ಲಿ ಸಾಫ್ಟ್‌ವೇರ್‌ ದೈತ್ಯ ಕಂಪನಿ ಮೈಕ್ರೋಸಾಫ್ಟ್ ಪುನರ್ಜನ್ಮ ಕಂಡಿದೆ. ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್‌ ಮಾರುಕಟ್ಟೆಯಲ್ಲಿನ ವೈಫಲ್ಯಗಳಿಂದ ಚೇತರಿಸಿಕೊಂಡಿದೆ. ಪ್ರಮುಖ ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಪ್ರಾಮುಖ್ಯತೆಯು ಕ್ಷೀಣಿಸುತ್ತಿರುವುದನ್ನು ಸಹ ತಡೆದಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಕೃತಕ ಬುದ್ಧಿಮತ್ತೆಯ ಸುತ್ತಲೂ ಕಂಪನಿಯನ್ನು ನಾದೆಲ್ಲಾ ಕೇಂದ್ರೀಕರಿಸಿದ್ದಾರೆ ಮತ್ತು ಆಫೀಸ್ ಸಾಫ್ಟ್‌ವೇರ್ ಫ್ರ್ಯಾಂಚೈಸ್‌ಗೆ ಹೊಸ ಜೀವನವನ್ನು ನೀಡಿರುವ ಅವರು ಕ್ಲೌಡ್‌ಗೆ ಮತ್ತು ಇತರ ಆಪರೇಟಿಂಗ್ ಸಿಸ್ಟಮ್‌ಗಳಿಗೆ ವರ್ಗಾಯಿಸಿದ್ದಾರೆ. ಈ ಹಿನ್ನೆಲೆ ಕಂಪನಿ ನಾದೆಲ್ಲಾ ಅವರನ್ನು ಚೇರ್ಮನ್‌ ಆಗಿ ನೇಮಿಸುವ ಮೂಲಕ ಬಳವಳಿ ನೀಡಿದೆ.
ಈ ಕಾರಣಗಳಿಂದ ಕಂಪನಿಯ ಷೇರುಗಳ ಮೌಲ್ಯ 7 ಪಟ್ಟು ಹೆಚ್ಚಾಗಿದೆ ಮತ್ತು ಅದರ ಮಾರುಕಟ್ಟೆ ಮೌಲ್ಯವು 2 ಟ್ರಿಲಿಯನ್ ಡಾಲರ್‌ ಸನಿಹಕ್ಕೆ ಬಂದಿದೆ.
ಗೇಟ್ಸ್ ಮತ್ತು ಥಾಂಪ್ಸನ್ ಅವರನ್ನು ಅನುಸರಿಸಿ ಕಂಪನಿಯ ಮೂರನೇ ಸಿಇಒ ಆದ ಸತ್ಯ ನಾದೆಲ್ಲಾ, ಈಗ ಮೈಕ್ರೋಸಾಫ್ಟ್ ಇತಿಹಾಸದಲ್ಲಿ ಮೂರನೇ ಮುಖ್ಯಸ್ಥರಾಗಲಿದ್ದಾರೆ. ನಾದೆಲ್ಲಾಗೆ ಮೊದಲು ಸಿಇಒ ಆಗಿದ್ದ ಸ್ಟೀವ್ ಬಾಲ್ಮರ್ ಅವರು ಎಂದಿಗೂ ಈ ಹುದ್ದೆಯನ್ನು ವಹಿಸಿರಲಿಲ್ಲ. ಏಕೆಂದರೆ ಆ ವೇಳೆ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಮುಖ್ಯಸ್ಥ ಹುದ್ದೆಯಲ್ಲಿದ್ದರು. ನಾದೆಲ್ಲಾ ಅವರ ಪರಿಹಾರ, ಉತ್ತರಾಧಿಕಾರ ಯೋಜನೆ, ಆಡಳಿತ ಮತ್ತು ಮಂಡಳಿಯ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಥಾಂಪ್ಸನ್ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಮುಂದುವರಿಸಲಿದ್ದಾರೆ ಎಂದು ಮೈಕ್ರೋಸಾಫ್ಟ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement