ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ 50%ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದ ನಿರ್ಧಾರ:ಸಚಿವ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ಬಿಎಸ್ಸಿ ಅಗ್ರಿ ಮತ್ತು ಸರಿ ಸಮಾನ ಕೋರ್ಸ್‌ಗಳಲ್ಲಿ ರೈತ ಮಕ್ಕಳಿಗೆ ನೀಡಲಾಗ್ತಿದ್ದ ಮೀಸಲಾತಿ ಪ್ರಮಾಣವನ್ನ ಶೇ.40ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ಸಚಿವ ಸಂಪುಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಸಾದಿಲ್ವಾರು ನಿಧಿಯನ್ನು 2500 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಮೈಸೂರು ಮೆಡಿಕಲ್‌ ಕಾಲೇಜಿಗೆ 154 ಕೋಟಿ ರೂಪಾಯಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಲಾಗಿದೆ. 100 ಪೊಲೀಸ್‌ ಠಾಣೆಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ 200 ಕೋಟಿ ರೂ.ಗಳ ವೆಚ್ಚವಾಗಲಿದೆ ಹಾಗೂ 2 ವರ್ಷದಲ್ಲಿ ಪೂರ್ಣಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹಾಸನ ಏರ್‌ಪೋರ್ಟ್‌ ನಿರ್ಮಾಣಕ್ಕೆ 193.65 ಕೋಟಿ ನೀಡುವುದಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಅಂಕೋಲಾ ತಾಲೂಕಿನ ಡೋಂಗ್ರಿಯಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಬ್ರಿಡ್ಜ್‌ ನಿರ್ಮಾಣ ಮಾಡುವುದಕ್ಕೂ ಒಪ್ಪಿಗೆ ಸೂಚಿಸಲಾಗಿದೆ. ಅಲ್ಲದೆ, ಭಟ್ಕಳ, ಚಳ್ಳಕೆರೆ ಮಿನಿ ವಿಧಾನಸೌಧ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಡ್ಯಾಮ್ ಗಳ ರೀಪೇರಿಗೆ 1500 ಕೋಟಿ ರೂ. ಯೋಜನೆಗೆ ಒಪ್ಪಿಗೆ ಕೇಂದ್ರ ಸರ್ಕಾರ 1050 ಕೋಟಿ ನೀಡಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೀದರ್ ವೈದ್ಯಕೀಯ ಕಾಲೇಜಿಗೆ 10 ಕೋಟಿ ರೂ. ಹೆಚ್ಚಳ ಮಾಡಲಾಗಿದೆ.ಪ್ಯಾರಾ ಮೆಡಿಕಲ್ ಬೋರ್ಡ್ ಕಟ್ಟಡ ನಿರ್ಮಾಣಕ್ಕೆ ಅನುಮತಿ 75 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಭೂ ಮಂಜೂರು ಕಾಯ್ದೆಗೆ ತಿದ್ದುಪಡಿ, ಖರಾಬ್ ಜಮೀನು ಮಧ್ಯ, ಕೆರೆ ಕಟ್ಟೆ ಬಂದಿದ್ದರೆ ಕಾಲ ಮಿತಿ ಇಲ್ಲದೆ ಬಳಕೆ ಮಾಡಲು ಅವಕಾಶ ಇತ್ತು. ಕನಿಷ್ಠ 10 ಇಲ್ಲದಿದ್ದರೆ ಮಾತ್ರ ಬಳಕೆ ಮಾಡಲು ತೀರ್ಮಾನ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಗಂಡಸಿ ಮತ್ತು ಬಾಣಾವರ ಯೋಜನೆಗೆ 19 ಕೋಟಿ ರೂ.ಗಳು, ಮೂಡಾ ದಲ್ಲಿ 107 ಲೇಔಟ್ ನಲ್ಲಿ ಅವರದೇ ಆದ ಹಣದಲ್ಲಿ ಅಭಿವೃದ್ಧಿಗೆ ಸೂಚನೆ 33 ಕೋಟಿ ರೂ. ಮೂಲ ಸೌಕರ್ಯಕ್ಕೆ ಹಣ ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಕರ್ನಾಟಕ ಮುನ್ಸಿಪಲ್ ನೇಮಕ ವಿಶೇಷ ನಿಯಮಗಳ ಅಡಿ ಲೋಡರ್ಸ್ ಮತ್ತು ಡ್ರೈವರ್ಸ್ ಸೇರ್ಪಡೆಗೆ ಅನುಮತಿ. ಕರ್ನಾಟಕ ಟೌನ್ ಪ್ಲಾನಿಂಗ್ ಆಕ್ಟ್ 1961 ಗೆ ತಿದ್ದುಪಡಿ, ಜಲ ನೀತಿ ಮಾಡುವ ಕುರಿತು ಸಂಪುಟ ಉಪ ಸಮಿತಿ ರಚನೆಗೆ ನಿರ್ಧಾರ.
ನಮ್ಮ ರಾಜ್ಯದಲ್ಲಿರಯವ ನೀರಿನ ಬಳಕೆ ಮಾಡುವ ಕುರಿತು, ನೀರು ನಿರ್ವಹಣೆ, ಯಾವುದಕ್ಕೆ ಆದ್ಯತೆ.ನೀಡಬೇಕು ಎನ್ನುವುದನ್ನು ನೋಡಲು ನೀತಿ ಸಿದ್ಧಪಡಿಸಲಾಗುತ್ತದೆ.
ನಬಾರ್ಡ್ ಯೋಜನೆ ಅಡಿಯಲ್ಲಿ 415 ಕೋಟಿ ವೆಚ್ಚದಲ್ಲಿ ಹೊನ್ನಾಳಿ ತಾಲೂಕಿನಲ್ಲಿ ಹನುಮಸಾಗರ ಏತ ನೀರಾವರಿ ಯೋಜನೆಗೆ ಒಪ್ಪಿಗೆ, ಇದರಲ್ಲಿ 94 ಕೆರೆ ತುಂಬಿಸಲಾಗುತ್ತದೆ, ಕೂಡಲಗಿ ತಾಲೂಕಿನಲ್ಲಿ 670 ಕೋಟಿ ವೆಚ್ಚದಲ್ಲಿ ಕೆರೆ ತುಂಬುವ ಯೋಜನೆಗೆ ಒಪ್ಪಿಗೆ.
ಸಾಸಿವೆ ಹಳ್ಳಿ ಏತ ನೀರಾವರಿ ಯೋಜನೆಗೆ 167 ಕೋಟಿ ಹೆಚ್ಚುವರಿ ಅನುದಾನ ನೀಡಲು ಒಪ್ಪಿಗೆ ಎಂದು ತಿಳಿಸಿದರು.
ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ. ಮಕ್ಕಳಿಗೆ ಸಮವಸ್ತ್ರ ಕ್ಕೆ 83 ಕೋಟಿ ರೂ.
ಶಿವಮೊಗ್ಗ ಆಸ್ಪತ್ರೆಯನ್ನು 250 ಬೆಡ್ ಗೆ ಹೆಚ್ಚಿಸಲು 32 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ