ಹುಬ್ಬಳ್ಳಿ; ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚಾಲನೆ ಸಿಬ್ಬಂದಿಯಿಂದ 07.04.2021 ರಿಂದ ಮುಷ್ಕರ ಹಾಗೂ ದಿನಾಂಕ: 28.04.2021 ರಿಂದ ಸರ್ಕಾರ ಜನತಾ ಕರ್ಪ್ಯೂ / ಲಾಕಡೌನ್ ಘೋಷಿಸಿದ ಕಾರಣ ಪ್ರಯಾಣಿಕರಿಗೆ ಅನನುಕೂಲವಾಗಿರುವುದನ್ನು ಗಮನದಲ್ಲಿರಿಸಿ, ಮುಷ್ಕರದ ಅವಧಿ ಹಾಗೂ ಲಾಕಡೌನ್ ಪ್ರಾರಂಭದ ಅವಧಿಯಲ್ಲಿ ಮಾಸಿಕ ಬಸ್ ಪಾಸುಗಳು ಚಾಲ್ತಿಯಲ್ಲಿದ್ದ ಹಾಗೂ ಲಾಕಡೌನ್ ನಂತರದ ದಿನಾಂಕಗಳಂದು ಅವಧಿ ಮುಕ್ತಾಯಗೊಂಡ ಹಂತವಾರು ಮಾಸಿಕ ಪಾಸುಗಳ ಮಾನ್ಯತಾ ಅವಧಿ ವಿಸ್ತರಿಸಲಾಗಿದೆ.
ಈ ಕುರಿತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆ ನೀಡಿದ್ದು, ಈ ವಿನಾಯಿತಿಯು ಮಾಸಿಕ ಬಸ್ ಪಾಸ್ ಚಾಲ್ತಿಯಲ್ಲಿರುವ ಉಳಿದ ಅವಧಿಗೆ ಅಥವಾ ಗರಿಷ್ಡ 18 ದಿನಗಳ ವರೆಗೆ ಅಂದರೆ ದಿನಾಂಕ: 08.07.2021 ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಹಾಗೆಯೇ, ದಿನಾಂಕ: 07.04.2021 ರಿಂದ 27.04.2021 ರ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಪಡೆದಿದ್ದಲ್ಲಿ, ಅಂತಹ ಪ್ರಯಾಣಿಕರಿಗೆ ದಿನಾಂಕಗಳನ್ನು ಸೂಕ್ತವಾಗಿ ಪರಿಶೀಲಿಸಿ, ಅಷ್ಟು ದಿನಗಳಿಗೆ ಅನುಗುಣವಾಗಿ ಪಾಸುಗಳ ಅವಧಿಯನ್ನು ವಿಸ್ತರಿಸಲಾಗುವುದು. ಈ ಸಂಬಂಧ ಪಾಸ್ ಹೊಂದಿರುವವರು ಪಾಸ್ ವಿತರಣೆಯ ಕೌಂಟರ್ನಲ್ಲಿ ಚಾಲ್ತಿ ಅವಧಿಯ ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ವಿಸ್ತರಣಾ ದಿನಾಂಕ, ಸಹಿ ಹಾಗೂ ಮೊಹರನ್ನು ಹಾಕಿಸಿಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ