ಯೋಗ ದಿನದ ಲಸಿಕೆ ಅಭಿಯಾನ:ಡೋಸ್‌ ನೀಡುವಲ್ಲಿ ಬೆಂಗಳೂರು ನಗರ ದೇಶದಲ್ಲೇ ಪ್ರಥಮ, ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು: ವಿಶ್ವ ಯೋಗ ದಿನದಂದು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೊವಿಡ್ ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡವರಲ್ಲಿ ಬೆಂಗಳೂರು ನಗರ ಜಿಲ್ಲೆ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 2,09,256 ಡೋಸ್ ಕೊವಿಡ್ ಲಸಿಕೆ ಡೋಸ್‌ ನೀಡಲಾಗಿದೆ. ಈ ಮೂಲಕ ಬೆಂಗಳೂರು ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಮಧ್ಯ ಪ್ರದೇಶದ 2,01,339 ಡೋಸ್ ಲಸಿಕೆ ನೀಡುವ ಮೂಲಕ ಇಂದೋರ್ 2ನೇ ಸ್ಥಾನ ಪಡೆದಿದೆ.
ಒಟ್ಟಾರೆಯಾಗಿಯೂ ಕೊವಿಡ್ ಲಸಿಕೆ ವಿತರಣೆಯಲ್ಲಿ ದೇಶದಲ್ಲೇ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ.ಸೋಮವಾರ ಸಂಜೆಯವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 54,88,684 ಡೋಸ್ ಲಸಿಕೆ ವಿತರಿಸಲಾಗಿದೆ. ಅತ್ಯಂತ ತಳಮಟ್ಟದಿಂದ ಯೋಜನೆ ರೂಪಿಸಿದ್ದರಿಂದ ಗುರಿ ಮೀರಿ ಲಸಿಕೆ ವಿತರಣೆ ನಡೆಸಲು ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ದೇಶದಲ್ಲಿ ಸೋಮವಾರ ಸಂಜೆ 6 ಗಂಟೆ ವೇಳೆಗೆ ಕರ್ನಾಟಕದಲ್ಲಿ 7 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಇತ್ತು. ಆದರೆ ಈ ಗುರಿಯನ್ನು ಮೀರಿ ರಾಜ್ಯದಲ್ಲಿ 10.36 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಮಧ್ಯಪ್ರದೇಶದಲ್ಲಿ 12 ಲಕ್ಷ ಡೋಸ್​ ಲಸಿಕೆ ವಿತರಿಸಲಾಗಿದ್ದು, ಉತ್ತರ ಪ್ರದೇಶದಲ್ಲಿಂದು 6.31 ಲಕ್ಷ ಡೋಸ್​ ಲಸಿಕೆ ವಿತರಿಸಲಾಗಿದೆ. ಕರ್ನಾಟಕ ಲಸಿಕೆ ನೀಡಿಕೆಯಲ್ಲಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ. ಮಧ್ಯ ಪ್ರದೇಶ ಮೊದಲ ಸ್ಥಾನ ಪಡೆದಿದೆ.
ದೇಶದಲ್ಲಿ ಸೋಮವಾರ ಸಂಜೆ 6 ಗಂಟೆ ವೇಳೆಗೆ ದೇಶದಲ್ಲಿ 80 .96ಲಕ್ಷ ಡೋಸ್ ಕೊರೊನಾ ಲಸಿಕೆ ವಿತರಿಸಲಾಗಿದೆ.
ಸೋಮವಾರ ದೇಶದಲ್ಲಿ ಒಂದೇ ದಿನ 50 ಲಕ್ಷ ಡೋಸ್ ಲಸಿಕೆ ನೀಡಿಕೆಯ ಗುರಿ ಇತ್ತು. ಆದರೆ ಸಂಜೆ ವೇಳೆಗೆ 80 .96ಲಕ್ಷ ಡೋಸ್ ನೀಡಿ ಹೊಸ ದಾಖಲೆ ಬರೆಯಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಕುಮಟಾ : ಬಾಡದಲ್ಲಿ 26 ಗಂಟೆಗಳ ನಂತರ ಮನೆಗೆ ನುಗ್ಗಿದ್ದ ಚಿರತೆ ಬಂಧಿ ; ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದರು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement