ಉತ್ತರ ಕನ್ನಡ: 4 ತಿಂಗಳಲ್ಲಿ 5338 ಮಕ್ಕಳಿಗೆ ಕೋವಿಡ್ ಸೋಂಕು..1ನೇ ಅಲೆಗಿಂತ 2ನೇ ಅಲೆಯಲ್ಲಿ ಬಹುತೇಕ 3 ಪಟ್ಟು ಹೆಚ್ಚಳ..!

posted in: ರಾಜ್ಯ | 0

ಕಾರವಾರ: ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆ ಇದೆ ಎಂದು ಕೆಲತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಎರಡನೇ ಅಲೆಯಲ್ಲಿಯೂ ಕೋವಿಡ್‌ ಸೋಂಕು ಬಾಧಿಸಿದ್ದು ವರದಿಯಾಗುತ್ತಿದೆ.
ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 5,338 ಮಕ್ಕಳು ಕೋವಿಡ್ ಸೋಂಕಿತಗೆ ಒಳಗಾಗಿರುವುದು ಇದನ್ನು ಪುಷ್ಟೀಕರಿಸುವಂತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ್‌ 1ರಿಂದ ಜೂನ್‌ 21ರವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ 5,338 ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಇವುಗಳಲ್ಲಿ ಕಾರವಾರ ತಾಲೂಕು- 387, ಅಂಕೋಲಾ -319, ಕುಮಟಾ- 511, ಭಟ್ಕಳ- 338, ಹಳಿಯಾಳ- 728, ಜೊಯಿಡಾ -296, ಹೊನ್ನಾವರ -568, ಮುಂಡಗೋಡ- 491, ಸಿದ್ದಾಪುರ- 498, ಶಿರಸಿ- 681 ಹಾಗೂ ಯಲ್ಲಾಪುರ -527 ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.
ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿ ಬಹುತೇಕ ನಾಲ್ಕು ಪಟ್ಟು ಹೆಚ್ಚು ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 1,909 ಮಕ್ಕಳಲ್ಲಿ ಸೋಂಕು ವರದಿಯಾಗಿತ್ತು. ಮೊದಲ ಅಲೆ ಹಾಗೂ ಎರಡನೇ ಅಲೆ ಸೇರಿ ಈವರೆಗೆ ಜಿಲ್ಲೆಯಲ್ಲಿ 7,247 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಮರಣ ಪ್ರಮಾಣ ಬಹಳ ಕಡಿಮೆಯದೆ. ಈವರೆಗೆ ಇಬ್ಬರು ಮಕ್ಕಳು ಮಾತ್ರ ಈವರೆಗೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಉತ್ತರ ಜಿಲ್ಲೆಯಲ್ಲಿ ಸರ್ಕಾರಿ ದಾಖಲೆ ಪ್ರಕಾರ 1ರಿಂದ 18 ವರ್ಷದೊಳಗಿನ 3,91,519 ಜನ ಮಕ್ಕಳಿದ್ದಾರೆ. ಇದರಲ್ಲಿ ಕಳೆದ 10 ದಿನಗಳ ಅಂತರದಲ್ಲಿ 216 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶಿರಸಿ ಮತ್ತು ಹಳಿಯಾಳದಲ್ಲಿ ಮಕ್ಕಳ ಸೋಂಕಿನ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಆರು ವರ್ಷದ ಒಳಗಿನ 1,06,263 ಮಂದಿ ಮಕ್ಕಳು ಇದ್ದಾರೆ ಎಂದು ಹೇಳಲಾಗಿದೆ.
ಹೀಗಾಗಿ ಜಿಲ್ಲೆಯ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮಕ್ಕಳಿಗಾಗಿ ಆಮ್ಲಜನಕ ಬೆಡ್ ವ್ಯವಸ್ಥೆಯುಳ್ಳ ಕೋವಿಡ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ