ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಖಾಲಿ ಖಾಲಿ..!

posted in: ರಾಜ್ಯ | 0

ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್‌ ವ್ಯಾಕ್ಸಿನ್‌ ಇರಲಿಲ್ಲ.
ಶುಕ್ರವಾರ ಬೆಳಿಗ್ಗೆ ಕೇವಲ ೧೦೦ ಜನರಿಗೆ ಮಾತ್ರ ಲಸಿಕೆ ನೀಡಲಾಗಿತ್ತು. ನಂತರ ಲಸಿಕೆ ಖಾಲಿಯಾಗಿದೆ.ಸರದಿಯಲ್ಲಿ ನಿಂತಿದ್ದ ನೂರಾರು ಜನ ವ್ಯಾಕ್ಸಿನ್‌ ಸಿಗದೆ ಪರದಾಡಬೇಕಾಯಿತು. ಕೆಲವರಿಗೆ ಈ ಬಗ್ಗೆಮಾಹಿತಿ ಇಲ್ಲದ ಕಾರಣ ಅವರು ಆಸ್ಪತ್ರೆಗೆ ಲಸಿಕೆ ಪಡೆಯಲು ಬಂದಿದ್ದರು. ಬಹಳ ಹೊತ್ತಿನಿಂದ ಕಾಯುತ್ತಿದ್ದ ಸಾರ್ವಜನಿಕರು ಕಿಮ್ಸ್‌ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು.
ಸರ್ಕಾರ ಜೂನ್‌ ೨೧ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ೧೮ ವರಷ್ಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಜೊತೆಗೆ ಕೊ ವ್ಯಾಕ್ಸಿನ್‌ ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯವನ್ನು ತೆಗೆದು ಹಾಕಿದೆ. ಹೀಗಾಗಿ ಹೆಚ್ಚಿನ ಜನರು ನೇರವಾಗಿ ಆಸ್ಪತ್ರೆಗೆ ಬಂದಿದ್ದರು. ಲಸಿಕೆ ಸಿಗದೆ ಮನೆಗೆ ತೆರಳಬೇಕಾಯಿತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

advertisement

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇದೀಗ ಗದಗದಲ್ಲಿ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ಕೃಷಿ ಭೂಮಿ ವಾರದಲ್ಲಿ ಪರಿವರ್ತನೆ : ಸುಗ್ರೀವಾಜ್ಞೆಗೆ ಸರ್ಕಾರದ ತೀರ್ಮಾನ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement