ಜಮ್ಮು -ಕಾಶ್ಮೀರ ಬೆಳವಣಿಗೆ ಸಭೆಗೆ ಕಾಶ್ಮೀರಿ ಹಿಂದೂಗಳನ್ನು ಆಹ್ವಾನಿಸಿಲ್ಲ ಯಾಕೆ: ಕೇಂದ್ರಕ್ಕೆ ಮುತಾಲಿಕ ಪ್ರಶ್ನೆ

posted in: ರಾಜ್ಯ | 0

ಬೆಂಗಳೂರು: ಜೂ.೨೪ ರಂದು ಪ್ರಧಾನಿ ನೇತೃತ್ವದಲ್ಲಿ ಜಮ್ಮುಮತ್ತು  ಕಾಶ್ಮೀರ ಮುಂದಿನ ಬೆಳವಣಿಗೆ ಸಂಬಂಧ ನವದೆಹಲಿಯಲ್ಲಿ ಸಭೆ ಕರೆದಿದ್ದು ಅತ್ಯಂತ ಸ್ವಾಗತಾರ್ಹವಾಗಿದ್ದು, ಈ ಸಭೆಗೆ ಕಾಶ್ಮೀರಿ ಪಂಡಿತರ ಪ್ರತಿನಿಧಿಗಳನ್ನು ಆಹ್ವಾನಿಸದೇ ಇರುವುದು ಖಂಡನೀಯವಾಗಿದೆ ಎಂದು ಶ್ರೀರಾಮ ಸೇನೆ  ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರುವ ಆಗಸ್ಟ ೫ ರಂದು ೩೭೦ನೇ ವಿಧಿ ರದ್ದು ಮಾಡಿದ ಐತಿಹಾಸಿಕ ನಿರ್ಣಯಕ್ಕೆ ಎರಡು ವರ್ಷಗಳಾಗುತ್ತದೆ. ಜನಸಂಘ-ಬಿಜೆಪಿ ಪ್ರಾರಂಭದಿಂದಲೂ ಚುನಾವಣೆ ಪ್ರಣಾಳಿಕೆಯಲ್ಲಿ ೩೭೦ನೇ ವಿಧಿ, ಕಾಶ್ಮಿರದ ಭಯೋತ್ಪಾದನೆ ನಿರ್ಮೂಲನೆ ಹಾಗೂ ಕಾಶ್ಮೀರಿ ಪಂಡಿತರ ಪುನರ್ವಸತಿ ಇವುಗಳನ್ನು ಉಲ್ಲೇಖಿಸುತ್ತಲೇ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಿಂದ ೭ ಲಕ್ಷ ಹಿಂದೂಗಳನ್ನು (ಕಾಶ್ಮೀರಿ ಪಂಡಿತರನ್ನು) ಹೊರಹಾಕಿ ೩೨ ವರ್ಷಗಳು ಕಳೆದಿವೆ. ೩೭೦ನೇ ವಿಧಿ ರದ್ದಾದ ದಿನದಿಂದ ಪಂಡಿತರಲ್ಲಿ ಒಂದು ಆಶಾ  ಭಾವನೆ ಮೂಡಿದೆ. ತಾವು ಜನಿಸಿದ ಊರಿಗೆ ಮರಳಬಹುದು ಎಂನ ಯೋಚನೆ ಬಂದಿದೆ. ಆದರೆ ೩೭೦ನೇ ವಿಧಿ ರದ್ದಾಗಿ ೨ ವರ್ಷ ಕಳೆದರೂ ಆ ಭಾಗ್ಯ ದೊರೆಯದಿರುವುದು ದೇಶದ ಹಿಂದುಗಳಿಗೆ ಹಾಗೂ ಕಾಶ್ಮೀರಿ ಪಂಡಿತರಿಗೆ ನಿರಾಶೆಯಾಗಿದ್ದು ವಾಸ್ತ ಎಂದು ಮುತಾಲಿಕ ತಿಳಿಸಿದ್ದಾರೆ.

ಯಾರು ೭ ಲಕ್ಷ ಹಿಂದುಗಳನ್ನು ಹೊರ ಹಾಕಿದರೋ, ಯಾರು ಸಾವಿರಾರು ವೀರಯೋಧರ ಹತ್ಯೆಗೆ ಕಾರಣರಾದರೋ, ಯಾರು ಲಕ್ಷಾಂತರ ಹಿಂದುಗಳ ಕಗ್ಗೊಲೆ, ಅತ್ಯಾಚಾರ, ಮಹಿಳೆಯರ ಮಾರಾಟ ಮಾಡಿದರೋ ಅಂತಹ ಪಕ್ಷದ ಶಾಸಕರನ್ನು ಮಾತುಕತೆಗೆ ಆಹ್ವಾನಿಸಲಾಗಿದೆ. ಆದರೆ, ಈ ಸಭೆಗೆ ಕಾಶ್ಮೀರಿ ಪಂಡಿತರನ್ನು ಏಕೆ ಆಹ್ವಾನಿಸಲಿಲ್ಲ ಎಂದು ಮುತಾಲಿಕ್‌ ಪ್ರಶ್ನಿಸಿದ್ದಾರೆ.

ಕಾಶ್ಮೀರಿ ಹಿಂದುಗಳು ಚುನಾವಣೆ, ಮತಕ್ಕೆ ಮಾತ್ರ ಸೀಮೀತವಾಗಿದ್ದಾರಾ? ಹಿಂದುಗಳ ಅನಿವಾರ್ಯತೆ ಹಾಗೂ ಅಸಹಾಯಕತೆಗಳ ದುರ್ಲಾಭ ಪಡೆಯವುದು ಸಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

೩೭೦ನೇ ವಿಧಿ ಮರುಸ್ಥಾಪನೆಯ ಬೇಡಿಕೆ ಹಾಗೂ ಪ್ರತಿಷ್ಠಾಪನೆ ಆಗುವ ವರೆಗೆ ನಾವು ಹೋರಾಡುತ್ತೇವೆ ಎಂದು ಕನವರಿಸುತ್ತಿರುವವರಿಗೆ ಕಠಿಣ ಉತ್ತರ ಕೊಡಬೇಕಾಗಿದೆ. ಎರಡು ವರ್ಷದಲ್ಲಿ ಹಿಂದುಗಳು ಮಾತ್ರ ಮುಕ್ತತೆ-ಸ್ವಾತಂತ್ರ್ಯ-ಸಂತೋಷದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ೩೭೦ನೇ ವಿಧಿ ಮರುಸ್ಥಾಪಕರ ಮಾನಸಿಕತೆ ಯಾವುದು? ಹಿಂದುಗಳ ಕಗ್ಗೊಲೆ, ಅತ್ಯಾಚಾರ, ಸೈನಿಕರಿಗೆ ಅವಮಾನ, ನಿಷ್ಕ್ರೀಯತೆ, ಪಾಕಿಸ್ತಾನಕ್ಕೆ  ಆಹ್ವಾನ ಇವರ ಮೂಲ ಉದ್ಧೇಶವಾಗಿದೆ. ಇದಕ್ಕೆ ಸ್ವಾತಂತ್ರ್ಯ ಪಡೆದ ದಿನದಿಂದಲೂ ಕಾಂಗ್ರೆಸ್ ಬೆಂಬಲಿಸುತ್ತ ಬಂದಿದೆ. ಈಗಲೂ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿಕೆ ಇದಕ್ಕೆ ಸಾಕ್ಷಿಯಾಗಿದೆ. ಕಾಶ್ಮೀರಿ ಪಂಡಿತರು ಇಲ್ಲದೇ ಮಾತುಕತೆ ಅಪೂರ್ಣ ಮತ್ತು ಅರ್ಥವಿಲ್ಲದ್ದು  ಎಂದು ಪ್ರಮೋದ ಮುತಾಲಿಕ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ