ಧಾರವಾಡ ಜಿಲ್ಲಾ ಪಂಚಾಯತದ ಕ್ಷೇತ್ರಗಳ ಮೀಸಲು ಪ್ರಕಟ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತದ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಕೊರೊನಾ ಕಾರಣದಿಂದ ಚುನಾವಣೆ ನಡೆದಿರಲಿಲ್ಲ. ಆದರೆ ಈಗ ರಾಜ್ಯ ಚುನಾವಣಾ ಆಯೋಗ ಧಾರವಾಡ ಜಿಲ್ಲಾ ಪಂಚಾಯತದ ಕ್ಷೇತ್ರಗಳಿಗೆ ಮೀಸಲಾತಿಯನ್ನು ಗುರುವಾರ ಪ್ರಕಟ ಮಾಡಿದೆ.
ಗರಗ ಜಿಲ್ಲಾ ಪಂಚಾತದ ಕ್ಷೇತ್ರಕ್ಕೆ ಸಾಮಾನ್ಯ ಸ್ಥಾನ, ನರೇಂದ್ರಕ್ಕೆ ಹಿಂದುಳಿದ ಅ ವರ್ಗ (ಮಹಿಳೆ), ಉಪ್ಪಿನ ಬೆಟಗೇರಿಗೆ ಸಾಮಾನ್ಯ (ಮಹಿಳೆ), ಅಮ್ಮಿನಭಾವಿಗೆ ಹಿಂದುಳಿದ ವರ್ಗ ‘ಅ’, ಹೆಬ್ಬಳ್ಳಿಗೆ ಸಾಮಾನ್ಯ (ಮಹಿಳೆ), ಮುಗದಕ್ಕೆ ಹಿಂದುಳಿದ ವರ್ಗ ‘ಅ’, ಮನಗುಂಡಿಗೆ ಸಾಮಾನ್ಯ (ಮಹಿಳೆ), ಬ್ಯಾಹಟ್ಟಿಗೆ ಹಿಂದುಳಿದ ವರ್ಗ ‘ಬ’ (ಮಹಿಳೆ), ಕೋಳಿವಾಡಕ್ಕೆ ಸಾಮಾನ್ಯ, ಅದರಗುಂಚಿಗೆ ಹಿಂದುಳಿದ ವರ್ಗ ಅ (ಮಹಿಳೆ), ಛಬ್ಬಿಗೆ ಅನುಸೂಚಿತ ಜಾತಿ, ಅಂಚಟಗೇರಿಗೆ ಅನುಸೂಚಿತ ಪಂಗಡ (ಮಹಿಳೆ), ಮೊರಬಕ್ಕೆ ಸಾಮಾನ್ಯ, ತಿರ್ಲಾಪುರಕ್ಕೆ ಅನುಸೂಚಿತ ಜಾತಿ (ಮಹಿಳೆ), ಅಳಗವಾಡಿಗೆ ಹಿಂದುಳಿದ ವರ್ಗ ಅ (ಮಹಿಳೆ), ಗಳಗಿಗೆ ಸಾಮಾನ್ಯ (ಮಹಿಳೆ), ಮಿಶ್ರಿಕೋಟೆಗೆ ಹಿಂದುಳಿದ ವರ್ಗ ಅ, ದೇವಿಕೊಪ್ಪಕ್ಕೆ ಹಿಂದುಳಿದ ವರ್ಗ ಬ, ತಬಕದಹೊನ್ನಳ್ಳಿಗೆ ಅನುಸೂಚಿತ ಪಂಗಡ, ಯರಗುಪ್ಪಿಗೆ ಹಿಂದುಳಿದ ವರ್ಗ ಅ (ಮಹಿಳೆ), ಸಂಶಿಗೆ  ಸಾಮಾನ್ಯ (ಮಹಿಳೆ), ಗುಡಗೇರಿಗೆ ಸಾಮಾನ್ಯ, ಕಮಡೊಳ್ಳಿಗೆ ಸಾಮಾನ್ಯ (ಮಹಿಳೆ), ಯಲಿವಾಳಕ್ಕೆ ಸಾಮಾನ್ಯ (ಮಹಿಳೆ), ಹೊನ್ನಾಪುರಕ್ಕೆ ಸಾಮಾನ್ಯ, ಶಲವಡಿಗೆ ಸಾಮಾನ್ಯ, ನಲವಡಿಗೆ ಸಾಮಾನ್ಯ ಮೀಸಲಾತಿ ಪ್ರಕಟ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement