ಪ್ರಧಾನಿ ಮೋದಿ ಮೆಗಾ ಸಂಪುಟ ವಿಸ್ತರಣೆ: ಅಚ್ಚರಿ ಆಯ್ಕೆಯೋ..ಚುನಾವಣೆ ದೃಷ್ಟಿಕೋನದ ಸೇರ್ಪಡೆಯೋ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ಐದು ರಾಜ್ಯಗಳಲ್ಲಿ ಮುಂದಿನವರ್ಷ ನಡೆಯುವಚುನಾವಣೆಯನ್ನು ಗಮನದಲ್ಲಿಟ್ಟು ತಮ್ಮ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದೆ.
ಒಂದು ಅಥವಾ ಎರಡು ದಿನಗಳಲ್ಲಿ ನಿರೀಕ್ಷಿಸಿದ ಬದಲಾವಣೆಯು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬಂಪರ್‌ ಗಿಫ್ಟ್‌ ನೀಡಬಹುದು, ಕಳೆದ ವರ್ಷ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಬಿಜೆಪಿಗೆ ಮಧ್ಯಪ್ರದೇಶದಲ್ಲಿ ಪುನಹ ಅಧಿಕಾರಕ್ಕೆ ಬರಲು ಜ್‌ಯೋತಿರಾದಿತ್ಯ ಕಾರಣರಾಗಿದ್ದಾರೆ. ಜೊತೆಗೆ ಅಸ್ಸಾಂನಲ್ಲಿ ಬಿಜೆಪಿ ಎರಡನೇ ಅವಧಿಗೆ ಗೆದ್ದ ನಂತರ ಹಿಮಾಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂ ಮುಖ್ಯಮಂತ್ರಿಯಾಗಿ ನೇಮಿಸಿದ ಹಿಂದಿನ ಅವಧಿಯಲ್ಲಿ ಮುಖ್ಯಮಮತ್ರಿಯಾಗಿದ್ದ ಸರ್ಬಾನಂದ ಸೋನೊವಾಲ್ ಅವರಿಗೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ನೀಉವುದು ನಿಚ್ಚಳವಾಗಿದೆ. ಆದರೆ ಸಂಪುಟ ವಿಸ್ತರಣೆ ಅಚ್ಚರಿಗೂ ಕಾರಣವಾಗಬಹುದು.
ರಾಮ ವಿಲಾಸ್‌ ಪಾಸ್ವಾನ್‌ ನಿಧನರಾದ ನಂತರ ತೆರವಾದ ಸ್ಥಾನಕ್ಕೆ ಚಿರಾಗ್ ಪಾಸ್ವಾನ್ ಅವರಿಗೆ ನೀಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಚಿರಾಗ್‌ ಪಾಸ್ವಾನ್‌ ವಿರುದ್ಧದ ದಂಗೆ ಮುನ್ನಡೆಸಿದ ಮತ್ತು ಕಳೆದ ತಿಂಗಳು ಲೋಕ ಜನಶಕ್ತಿ ಪಕ್ಷವನ್ನು (ಎಲ್ಜೆಪಿ) ವಿಭಜಿಸಿದ ಅವರ ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಪಶುಪತಿ ಪರಾಸ್ ಅವರು ರಾಮ್ ವಿಲಾಸ್ ಪಾಸ್ವಾನ್‌ ನಿಧನದಿಂದ ತೆರವಾದ ಸ್ಥಾನವನ್ನು ಚಿರಾಗ್‌ ಅವರಿಂದಕಿತ್ತುಕೊಳ್ಳಬಹುದಾಗಿದೆ. ವರ್ಷ.
ತೀವ್ರ ಊಪೋಹಗಳ ಹೊರತಾಗಿಯೂ, ಇನ್ನೊಂದು ಮಿತ್ರ ಪಕ್ಷ ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಅಂತಿಮವಾಗಿ ಕೇಂದ್ರ ಸಚಿವ ಸಂಪುಟಕ್ಕೆ ಸೇರುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 2019 ರಲ್ಲಿ ಅಸಮಾಧಾನಗೊಂಡ ಬಿಹಾರ ಮುಖ್ಯಮಂತ್ರಿ ಒಂದು ಸಚಿವಾಲಯದ ಬಿಜೆಪಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಮತ್ತು ಹೊರಗುಳಿಯಲು ನಿರ್ಧರಿಸಿದ್ದರು. ನಿತೀಶ್‌ ಕುಮಾರ್ ಕನಿಷ್ಠ ಎರಡು ಸಚಿವಾಲಯಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೆಡಿಯು ನಾಯಕರಾದ ಲಲ್ಲನ್ ಸಿಂಗ್, ರಾಮನಾಥ ಠಾಕೂರ್ ಮತ್ತು ಸಂತೋಷ್ ಕುಶ್ವಾಹ ಅವರು ಸ್ಪರ್ಧೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ, ಬಿಹಾರ ನಾಯಕ ಸುಶೀಲ್ ಮೋದಿ, ಮಹಾರಾಷ್ಟ್ರ ನಾಯಕ ನಾರಾಯಣ್ ರಾಣೆ ಮತ್ತು ಬಿಹಾರ ಮತ್ತು ಗುಜರಾತ್ ಉಸ್ತುವಾರಿ ಬಿಜೆಪಿಯ ಹಿರಿಯ ನಾಯಕ ಭೂಪೇಂದ್ರ ಯಾದವ್ ಕೂಡ ಮೋದಿ ಸಂಪುಟಕ್ಕೆ ಸೇರುವ ಸಾಧ್ಯತೆ ಇದೆ.
ಒಂದು ತಿಂಗಳ ಅವಧಿಯ ಪರಿಶೀಲನೆಯ ನಂತರ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ, ಇದರಲ್ಲಿ ಪ್ರಧಾನಿ ಮೋದಿ ವಿವಿಧ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಿದ್ದಾರೆ.
ಮುಂದಿನ ವರ್ಷ ಚುನಾವಣೆ ನಡೆಯಲಿರುವ ರಾಜಕೀಯವಾಗಿ ಮಹತ್ವದ ಉತ್ತರ ಪ್ರದೇಶ ಈ ಸುತ್ತಿನ ಸಚಿವ ಸಂಪುಟದಲ್ಲಿ ಉತ್ತಮವಾಗಿ ಪ್ರತಿನಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವರುಣ್ ಗಾಂಧಿ, ರಾಮಶಂಕರ್ ಕಥೇರಿಯಾ, ಅನಿಲ್ ಜೈನ್, ರೀಟಾ ಬಹುಗುಣ ಜೋಶಿ ಮತ್ತು ಜಫರ್ ಇಸ್ಲಾಂ ಅವರು ಸಚಿವ ಸಂಪುಟಕ್ಕೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಿಜೆಪಿಯ ಉತ್ತರ ಪ್ರದೇಶದ ಮಿತ್ರ ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರಿಗೂ ನೀಡುವ ಸಾಧಯತೆಯಿದೆ.
ಉತ್ತರಾಖಂಡದಿಂದ, ಅಜಯ್ ಭಟ್ ಅಥವಾ ಅನಿಲ್ ಬಲೂನಿ ಅವರು ಸೇರ್ಡೆಯಾಗಬಹುದು. ಮೈಸೂರು ಸಂಸದ ಪ್ರತಾಪ್ ಸಿಂಹ ಕರ್ನಾಟಕವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ.
ಇದರ ಜೊತೆಗೆ ಪ್ರಧಾನಿ ಮೋದಿಯವರು ಬಂಗಾಳದ ನಾಯಕರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ, ಅಲ್ಲಿ ಪಕ್ಷವು ಇತ್ತೀಚೆಗೆ ಮಮತಾ ಬ್ಯಾನರ್ಜಿಯವರ ವಿರುದ್ಧದ ಚುನಾವಣೆಯಲ್ಲಿ ಸೋತಿದೆ. ಜಗನ್ನಾಥ ಸರ್ಕಾರ್, ಶಾಂತನು ಠಾಕೂರ್ ಮತ್ತು ನಿಥೀತ್ ಪ್ರಮಾಣಿಕ್ ಹೆಸರುಗಳು ಚಲಾವಣೆಯಲ್ಲಿವೆ.
ಇತರ ಸಾಧ್ಯತೆಗಳೆಂದರೆ – ಬ್ರಿಜೇಂದ್ರ ಸಿಂಗ್ (ಹರಿಯಾಣ), ರಾಹುಲ್ ಕಸ್ವಾನ್ (ರಾಜಸ್ಥಾನ), ಅಶ್ವನಿ ವೈಷ್ಣವ್ (ಒಡಿಶಾ), ಪೂನಂ ಮಹಾಜನ್ ಅಥವಾ ಪ್ರೀತಮ್ ಮುಂಡೆ (ಮಹಾರಾಷ್ಟ್ರ) ಮತ್ತು ಪರ್ವೇಶ್ ವರ್ಮಾ ಅಥವಾ ಮೀನಾಕ್ಷಿ ಲೇಖಿ (ದೆಹಲಿ).
ಪ್ರಧಾನಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಹೆಸರುಗಳನ್ನು ಅಂತಿಮಗೊಳಸಲು ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಗಮನ ಹರಿಸುವುದರೊಂದಿಗೆ ಮುಂದಿನ ವರ್ಷ ಬರಲಿರುವ ಕೆಲವು ರಾಜ್ಯಗಳ ಚುನಾವಣೆ ಗಮನದಲ್ಲಿಟ್ಟು ಎಚ್ಚರಿಕೆಯಿಂದ ನಿರ್ಣಯಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೆಚ್ಚುವರಿ ಖಾತೆಗಳನ್ನು ಹೊಂದಿರುವ ಪ್ರಕಾಶ್ ಜಾವಡೇಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ನಿತಿನ್ ಗಡ್ಕರಿ, ಹರ್ಷ್ ವರ್ಧನ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ ಮತ್ತು ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಕೆಲವು ಸಚಿವರ ಕೈಯಲ್ಲಿದ್ದ ಹೆಚ್ಚುವರಿ ಖಾತೆಗಳು ಸಂಪುಟ ವಿಸ್ತರಣೆಯಾದ ನಂತರ ಹೊಸದಾಗಿ ಸೇರ್ಡಪೆಯಾಗುವವರಿಗೆ ಹೋಗಬಹುದು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ಒಟ್ಟಿನಲ್ಲಿ ಬಹುನಿರೀಕ್ಷಿತ ಪ್ರದಾನಿ ಮೋದಿ ಅವರ ಸಂಪುಟ ವಿಸ್ತರಣೆಯಲ್ಲಿ ಯಾರ್ಯಾರಿಗೂ ಸ್ಥನ ಸಿಗಲಿದೆ, ಯಾರ್ಯಾರು ಅಚ್ಚರಿಯಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಬಹುದು.
ಕೇಂದ್ರ ಸಚಿವ ಸಂಪುಟ 81 ಸದಸ್ಯರನ್ನು ಹೊಂದಬಹುದು ಮತ್ತು ಪ್ರಸ್ತುತ 53 ಮಂತ್ರಿಗಳಿದ್ದಾರೆ. ಇನ್ನೂ 28 ಸಚಿವರ ಸೇರ್ಡೆಗೆ ಅವಕಾಶವಿದೆ..

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement