ನಿಗೂಢ ಶಬ್ದಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿನ ಕೆಲ ಬಡಾವಣೆಗಳು..!ಮತ್ತೊಂದು ಸೋನಿಕ್ ಬೂಮ್?

ಬೆಂಗಳೂರು: ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಬೆಚ್ಚಿ ಬೀಳುವಂಥ ಭಾರಿ ಶಬ್ದದ ಕೇಳಿಸಿದೆ. ಸದ್ಯಕ್ಕೆ ಈ ಶಬ್ದದ ಮೂಲ ಇನ್ನೂ ನಿಗೂಢವಾಗಿದೆ.

https://twitter.com/YashBossKingdom/status/1410883516510859265

ಜುಲೈ 2 ರ ಶುಕ್ರವಾರ ಮಧ್ಯಾಹ್ನ 12.30ರ ನಂತರ ಬೆಂಗಳೂರಿನ ಅನೇಕ ಭಾಗಗಳಲ್ಲಿ ಜೋರಾಗಿ ಶಬ್ದ ಕೇಳಿಸಿದೆ ಎಂದು ವರದಿಯಾಗಿದೆ. ನಗರದ ಹಲವಾರು ನಿವಾಸಿಗಳು ಥಡ್’ ಮತ್ತು ‘ಬೂಮ್’ ಶಬ್ದವನ್ನು ಕೇಳಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟ್‌ಗಳ ಪ್ರಕಾರ, ಸರ್ಜಾಪುರ ಪ್ರದೇಶ, ಜೆ.ಪಿ.ನಗರ, ಬೆನ್ಸನ್ ಟೌನ್, ಉಲ್ಸೂರ್, ಇಸ್ರೋ ಲೇಔಟ್, ಎಚ್‌ಎಸ್‌ಆರ್ ಲೇ ಔಟ್, ದಕ್ಷಿಣ ಬೆಂಗಳೂರು ಮತ್ತು ಪೂರ್ವ ಬೆಂಗಳೂರಿನಲ್ಲಿ ಧ್ವನಿ ಕೇಳಿದೆ.

ಬೆಂಗಳೂರನ್ನು ನಡುಗುವಂತೆ ಮಾಡಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟವಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ(kSNDMC)ದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.ಆದರೆ ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಹವಾಮಾನ ಇಲಾಖೆ ಗಣಿಗಾರಿಕೆ ಅಥವಾ ವೈಮಾನಿಕ ಅಧಿಕಾರಿಗಳಿಂದ ಸ್ಪಷ್ಟವಾದ ಉತ್ತರ ಸಿಕ್ಕಿರಲಿಲ್ಲ. ಸಂಜೆ ವೇಳೆಗೆ ಗೊಂದಲ, ಕುತೂಹಲಕ್ಕೆ ಸ್ಪಷ್ಟ ಉತ್ತರ ಸಿಗಬಹುದು. ಕಳೆದ ವರ್ಷ ಇದೇ ರೀತಿ ಭಾರಿ ಶಬ್ದ ಕೇಳಿಬಂದಿತ್ತು. ನಂತರ ಇದಕ್ಕೆ ರಕ್ಷಣಾ ಇಲಾಖೆ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದರು.
2021ರ ಶುಕ್ರವಾರ ಜುಲೈ 22ರಂದು ಮಧ್ಯಾಹ್ನ ಸುಮಾರು 12.22ರ ಸುಮಾರಿಗೆ ಎಚ್‌ಎಸ್ ಆರ್ ಲೇಔಟ್ ನಲ್ಲಿ ಭಾರಿ ಶಬ್ದ ಕೇಳಿಸಿದೆ. ನಂತರ ಪದ್ಮನಾಭನಗರ, ಮೈಸೂರು ರಸ್ತೆ, ದಕ್ಷಿಣ ಬೆಂಗಳೂರಿನ ಅನೇಕ ಕಡೆಗಳಲ್ಲಿ ಕೇಳಿಸಿದೆ ಎಂದು ನಾಗರಿಕರು ಅನುಭವ ಹಂಚಿಕೊಂಡಿದ್ದಾರೆ.
ಎಚ್‌ಎಎಲ್ ಸ್ಪಷ್ಟನೆ: ಎಚ್‌ಎಎಲ್ ತರಬೇತಿ ಕೇಂದ್ರ ಆರಂಭವಾಗಿದ್ದರೂ ಯಾವುದೇ ಯುದ್ಧ ವಿಮಾನ ಹಾರಾಟ, ಅಭ್ಯಾಸ ನಡೆಸುತ್ತಿಲ್ಲ ಎಂದು ಎಚ್‌ಎಎಲ್ ಸಂಸ್ಥೆ ಹೇಳಿದೆ.

ಇದು ಸೋನಿಕ್ ಬೂಮ್ ಇರಬಹುದಾ?: ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎಂದು ಹೇಳಲಾಗುತ್ತದೆ.
ಸುಖೋಯ್ 30 ವಿಮಾನ ಹಾರಾಟವಾದಾಗ ಈ ರೀತಿ ಶಬ್ದ ಕೇಳಿಸಬಹುದು. ಭಾರತದಲ್ಲೇ ನಿರ್ಮಾಣಗೊಂಡ ತೇಜಸ್ ಯುದ್ಧ ವಿಮಾನದ ಹಾರಾಟವೂ ಇದೇ ರೀತಿ ಶಬ್ದ ಉಂಟು ಮಾಡಬಹುದು ಎಂದು ಹೇಳಲಾಗಿದೆ.
ನಗರದ ಮೇಲೆ ಹಾರುವ ಫೈಟರ್ ಜೆಟ್‌ನಿಂದ ಈ ಶಬ್ದವು ‘ಸೋನಿಕ್ ಬೂಮ್’ ಆಗಿರಬಹುದು ಎಂಬ ಊಹಾಪೋಹಗಳಿವೆ. ಆದರೆ, ಇದನ್ನು ಪೊಲೀಸರು ಅಥವಾ ವಾಯುಪಡೆ ಖಚಿತಪಡಿಸಿಲ್ಲ. ವಿಮಾನದ ವೇಗದ ಚಲನೆಯ ಪರಿಣಾಮವೆಂದರೆ ಸೋನಿಕ್ ಬೂಮ್ – ಈ ವಸ್ತುಗಳು ಶಬ್ದದ ವೇಗಕ್ಕಿಂತ ವೇಗವಾಗಿ ಮೇಲಕ್ಕೆ ಹಾರಿದಾಗ ಗುಡುಗು ಶಬ್ದ ಉತ್ಪತ್ತಿಯಾಗುತ್ತದೆ. ಶಬ್ದ ಗಾಳಿಯಲ್ಲಿ ಸೆಕೆಂಡಿಗೆ 343 ಮೀಟರ್ ವೇಗದಲ್ಲಿ ಚಲಿಸುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement