ಕರ್ನಾಟಕದಲ್ಲಿ 50 ಸಾವಿರಕ್ಕಿಂತ ಕೆಳಗೆ ಕುಸಿದ ಸಕ್ರಿಯ ಪ್ರಕರಣಗಳು

posted in: ರಾಜ್ಯ | 0

ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ‌ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಕಡಿಮೆ ದಾಖಲಾಗಿದ್ದು ಶನಿವಾರ 2082 ಜರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ವರದಿಯಾಗಿದೆ.
ಇದೇ ಸಮಸಯದಲ್ಲಿ ಸೋಂಕಿನಿಂದ 86 ಮೃತಪಟ್ಟಿದ್ದಾರೆ ಹಾಗೂ 7,751 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,52,079 ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,68,632 ಕ್ಕೆ ಹೆಚ್ಚಳವಾಗಿದೆ .ಒಟ್ಟು ಮೃತಪಟ್ಟವರ ಸಂಖ್ಯೆ 35,308ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ಸದ್ಯ ರಾಜ್ಯದಲ್ಲಿ 48,116 ಕ್ಕೆ ಸಕ್ರಿಯ ಪ್ರಕರಣಗಳು ಕುಸಿದಿವೆ.ಈ ಮೂಲಕ ಹಲವು ದಿನಗಳ ಬಳಿಕ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೂ ಕಡಿಮೆ ದಾಖಲಾಗಿದೆ. ಕೊರೊನಾ ಸೋಂಕಿನ ಪಾಸಿಟಿವಿ ಪ್ರಮಾಣ ಶೇ.1.34ಕ್ಕೆ ಕುಸಿದಿದೆ.
ಬೆಂಗಳೂರಿನಲ್ಲಿ ಅತಿ ಕಡಿಮೆ:
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 481 ಮಂದಿಯಲ್ಲಿ ಸೋಂಕು ದಾಖಲಾಗಿದೆ. 10 ಮಂದಿ ಮೃತಪಟ್ಟಿದ್ದಾರೆ. .ಜೊತೆಗೆ 4484 ಜನರು ಚೇತರಿಸಿಕೊಂಡಿದ್ದಾರೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

03-07-2021 HMB Kannada

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ