ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾದ ಭಾರತೀಯ ಮೂಲದ ಮತ್ತೊಬ್ಬ ಮಹಿಳೆ

ಕಲ್ಪನಾ ಚಾವ್ಲಾ ಬಳಿಕ ಮತ್ತೊಬ್ಬ ಭಾರತೀಯ ಮೂಲದ ಮಹಿಳಾ ಗಗನಯಾತ್ರಿ ಅಂತರಿಕ್ಷ ಪ್ರಯಾಣಕ್ಕೆ ಸಜ್ಜಾಗಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಅಂತರಿಕ್ಷ ಯಾನಕ್ಕೆ ಮುಂದಾಗಿರುವ ಭಾರತ ಮೂಲದ ಎರಡನೇ ಮಹಿಳೆಯಾಗಿದ್ದಾರೆ.
ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ಜಗತ್ತಿನ ನಾಲ್ಕನೇ ಮಹಿಳಾ ಗಗನಯಾತ್ರಿಯೂ ಹೌದು. ವರ್ಜಿನ್​ ಗೆಲಾಕ್ಟಿಕ್ ಯ ವಿಎಸ್​ಎಸ್​ ಯೂನಿಟಿ ಬಾಹ್ಯಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು ಜನರಲ್ಲಿ ಸಿರಿಶಾ ಕೂಡ ಒಬ್ಬರು. ಜು. 11 ರಂದು ನ್ಯೂ ಮೆಕ್ಸಿಕೊದಿಂದ ಈ ಗಗನಯಾತ್ರಿಗಳು ಬಾಹ್ಯಾಕಾಶಕ್ಕ ಜಿಗಿಯಲಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್​ ಇಂಜಿನಿಯರ್​ ಪದವೀಧರೆಯಾಗಿರುವ 34 ವರ್ಷದ ಸಿರಿಶಾ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮಗೆ ಸಿಕ್ಕ ಅವಕಾಶ ಅದ್ಭುತ ಗೌರವ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ವರ್ಜಿನ್​ ಗೆಲಾಕ್ಟಿಕ್​ ಬಾಹ್ಯಕಾಶಕ್ಕೆ ಪ್ರಯಾಣಿಸಲಿರುವ ಆರು ಜನ ಫೋಟೋ ಹಂಚಿಕೊಂಡಿದ್ದು, ಅವರಿಗೆ ಶುಭ ಹಾರೈಸಿದೆ.
ಸಿರಿಶಾ ಬಾಂಡ್ಲಾ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದರೂ ಬೆಳೆದದ್ದು ಟೆಕ್ಸಾಸ್​ನ ಹೂಸ್ಟನ್​ನಲ್ಲಿ. ಏರೋನಾಟಿಕಲ್​ ಪದವಿ ಪಡೆದಿರುವ ಅವರು, ಜಾರ್ಜ್‌ಟೌನ್ ವಿವಿಯಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದಿದ್ದಾರೆ. 2015ರಲ್ಲಿ ವರ್ಜಿನ್​ ಗ್ಯಾಲಕ್ಟಿಕ್​ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇದೇ ಕಂಪನಿಯಲ್ಲಿ ಅವರು ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್‌ನಲ್ಲಿ ಕೆಲಸ ಮಾಡುವ ಮೊದಲು, ಅವರು ಟೆಕ್ಸಾಸ್‌ನಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಅವರು ಕಮರ್ಷಿಯಲ್ ಸ್ಪೇಸ್ ಫ್ಲೈಟ್ ಫೆಡರೇಶನ್‌ನಲ್ಲಿ ಬಾಹ್ಯಾಕಾಶ ನೀತಿಯಲ್ಲಿ ಕೆಲಸ ಮಾಡಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಏರೋನಾಟಿಕಲ್​ ಇಂಜಿನಿಯರ್​ ಪದವೀಧರೆಯಾಗಿರುವ 34 ವರ್ಷದ ಸಿರಿಶಾ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ತಮಗೆ ಈ ಅವಕಾಶ ಸಿಕ್ಕಿರುವುದು ಅದ್ಭುತ ಗೌರವ ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ. ವರ್ಜಿನ್​ ಗೆಲಾಕ್ಟಿಕ್​ ಕೂಡ ಬಾಹ್ಯಕಾಶಕ್ಕೆ ಪ್ರಯಾಣಿಸಲಿರುವ ಆರು ಜನ ಫೋಟೋ ಹಂಚಿಕೊಂಡಿದ್ದು, ಶುಭ ಹಾರೈಸಿದೆ.
ಸಿರಿಶಾ ಸಾಧನೆ ಕುರಿತು ಭಾರತದ ಅವರ ಸಂಬಂಧಿ ರಾಮರಾವ್​ ಕಣ್ಣೆಗಂಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಅಮೆರಿಕದಲ್ಲಿನ ತೆಲುಗು ಅಸೋಸಿಯೇಷನ್​ ಆಫ್​ ನಾರ್ತ್​​ ಅಮೆರಿಕಾದೊಂದಿಗೆ ಸಿರಿಶಾ ನಿಕಟ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಬಾಹ್ಯಕಾಶದಲ್ಲಿ ನೌಕಾಯಾನ ಕೈಗೊಂಡ ಭಾರತ ಮೂಲಕ ಎರಡನೇ ಭಾರತೀಯ ಮೂಲದ ಮಹಿಳೆ ಇವರಾಗಿದ್ದಾರೆ. ಇದಕ್ಕೂ ಮೊದಲು ಕಲ್ಪನಾ ಚಾವ್ಲಾ ಯಾನ ಕೈಗೊಂಡ ಮಹಿಳೆಯರಾಗಿದ್ದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement