ಗರ್ಭಿಣಿ ಮಹಿಳೆಯರು ಸಹ ಕೋವಿಡ್-19 ಲಸಿಕೆ ಪಡೆಯಬಹುದು: ಕೇಂದ್ರ ಸರ್ಕಾರ

ನವದೆಹಲಿ: ಗರ್ಭಿಣಿ ಮಹಿಳೆಯರೂ ಕೊರೋನಾ ಲಸಿಕೆ ಪಡೆಯಬಹುದು ಎಂದು ಎನ್ ಟಿಎಜಿ ಹೇಳಿದೆ.
ಕೋವಿಡ್-19 ಗೆ ಗರ್ಭಿಣಿ ಮಹಿಳೆಯರು ಅತಿ ಹೆಚ್ಚು ದುರ್ಬಲರಾಗಿರುವುದರಿಂದ ಕೋವಿಡ್-19 ಲಸಿಕೆಯನ್ನು ಪಡೆಯಬಹುದು ಎಂದು ರೋಗನಿರೋಧಕ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಹೇಳಿದೆ.
ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿಲ್ಲ, ಆಯ್ಕೆಯಾಗಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೊರೋನಾ ಸೋಂಕು ಗರ್ಭಿಣಿಯರಿಗೆ ತಗುಲಿದರೆ ಅವರ ಆರೋಗ್ಯ ಕುಗ್ಗಲಿದೆ, ಅದು ಭ್ರೂಣದ ಮೇಲೂ ಪರಿಣಾಮ ಬೀರಬಹುದು ಎಂದು ವೈದ್ಯರು ಹೇಳಿದ್ದಾರೆ.
ಗರ್ಭಿಣಿಯರಿಗೆ ಯಾವ ಸಮಯ (ಮಾಸ)ದಲ್ಲಿ ಲಸಿಕೆ ನೀಡಬಹುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲವಾದರೂ ಮೊದಲ ಮೂರು ತಿಂಗಳಲ್ಲಿ ಲಸಿಕೆಯನ್ನು ತಪ್ಪಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ.
ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯುತ್ತಿರುವವರು ಯಾವುದೇ ಲಭ್ಯವಿರುವ ಲಸಿಕೆಯನ್ನು ಸ್ಥಳೀಯವಾಗಿ ಪಡೆಯಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement