ವೀಡಿಯೊ…| ಹುಲಿ-ಕರಡಿ ಮಧ್ಯೆ “ಅಪರೂಪದ” ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಪಿಲಿಭಿತ್(ಉತ್ತರ ಪ್ರದೇಶ) : ಕರಡಿಯೊಂದು ಹುಲಿಯೊಂದಿಗೆ ಮುಖಾಮುಖಿಯಾದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಡಾ. ರವಿ ಗುಪ್ತಾ ಅವರು ಹಂಚಿಕೊಂಡಿರುವ ವೀಡಿಯೊವು ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮತ್ತು ಕರಡಿ ಪರಸ್ಪರ ಎದುರಾದ”ಅಪರೂಪದ” ದೃಶ್ಯಗಳನ್ನು ಸೆರೆಹಿಡಿದಿದೆ. ವೀಡಿಯೊದಲ್ಲಿ, ಸಫಾರಿ ಜೀಪ್‌ಗಳಲ್ಲಿ ಪ್ರವಾಸಿಗರು ದೂರದಿಂದಲೇ ಈ ದೃಶ್ಯವನ್ನು ವೀಕ್ಷಿಸುತ್ತಿರುವಾಗ ಹುಲಿಯು ದಟ್ಟವಾದ ಕಾಡಿನ ರಸ್ತೆಯ ಉದ್ದಕ್ಕೂ ಗಂಭೀರವಾಗಿ ನಡೆಯುತ್ತಿರುವುದು ಕಂಡುಬರುತ್ತದೆ.

ಕರಡಿ ಇದ್ದಕ್ಕಿದ್ದಂತೆ ಪೊದೆಗಳ ನಡುವಿನಿಂದ ಕಾಣಿಸಿಕೊಂಡು ಹುಲಿಯ ಮುಂದೆ ರಸ್ತೆ ದಾಟುತ್ತದೆ. ಕರಡಿ ನೋಡಿದ ಹುಲಿಯು ನಿಂತುಕೊಳ್ಳುತ್ತದೆ ಹಾಗೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಮತ್ತು ಕರಡಿ ರಸ್ತೆ ದಾಟುವ ವರೆಗೆ ಹುಲಿ ಕಾಯುವುದನ್ನು ವೀಡಿಯೊ ತೋರಿಸುತ್ತದೆ ಹಾಗೂ ಕರಡಿಯ ಚಲನವಲನಗಳನ್ನು ಎಚ್ಚರಿಕೆಯಿಂದ ಗಮನಿಸುತ್ತದೆ.
ಕರಡಿ ರಸ್ತೆ ದಾಟಿ ಮತ್ತೊಂದು ಭಾಗಕ್ಕೆ ಹೋದ ಸ್ವಲ್ಪ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಕರಡಿ ವಾಪಸ್‌ ಬಂದು ಹುಲಿಯ ಮೇಲೆ ದಾಳಿಗೆ ಮುಂದಾಗುತ್ತದೆ. ಎರಡು ಅಸಾಧಾರಣ ಪರಭಕ್ಷಕಗಳು ಮತ್ತೆ ಮುಖಾಮುಖಿಯಾಗುತ್ತವೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ಅನಿರೀಕ್ಷಿತ ಘಟನೆಯ ಹೊರತಾಗಿಯೂ, ಹುಲಿ ಶಾಂತತೆ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಇದರ ನಂತರ ಕರಡಿ ಅಲ್ಲಿಂದ ಹೊರಡುವಾಗ ಹುಲಿಯು ಅದನ್ನು ವೀಕ್ಷಿಸುತ್ತದೆ.
ವೀಡಿಯೊ ಕುರಿತು ಕಾಮೆಂಟ್ ಮಾಡುತ್ತಾ, ಬಳಕೆದಾರರೊಬ್ಬರು, “ಇಬ್ಬರೂ ಜಗಳವಾಡದೆ ಅಥವಾ ಪರಸ್ಪರ ಹಾನಿಯಾಗದಂತೆ ಮುಖಾಮುಖಿಯಾಗುವುದು ಮತ್ತು ಶಾಂತಿಯುತವಾಗಿ ಅಲ್ಲಿಂದ ತೆರಳುವುದು ಅದ್ಭುತವಾಗಿದೆ ಎಂದು ಬರೆದಿದ್ದಾರೆ. “ಅದ್ಭುತ ಸ್ವಭಾವ” ಎಂದು ಮತ್ತೊಬ್ಬರು ಬರೆದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement