ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ನೇಮಕ ಅಂತಿಮ ಹಂತದಲ್ಲಿ: ದೆಹಲಿ ಹೈಕೋರ್ಟಿಗೆ ಟ್ವಿಟರ್ ಮಾಹಿತಿ

ನವದೆಹಲಿ: ಟ್ವಿಟರ್ ಇಂಡಿಯಾದ ಹಂಗಾಮಿ ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದು, ಅದೇ ಹುದ್ದೆಗೆ ಮತ್ತೋರ್ವರ ನೇಮಕ ಅಂತಿಮ ಹಂತದಲ್ಲಿರುವುದನ್ನು ಸಂಸ್ಥೆ ದೆಹಲಿ ಹೈಕೋರ್ಟಿಗೆ ತಿಳಿಸಿದೆ.
ಈ ನಡುವೆ ಭಾರತೀಯ ಚಂದಾದಾರರ ದೂರುಗಳಿಗೆ ಅಧಿಕಾರಿಯೊಬ್ಬರು ಸ್ಪಂದಿಸುತ್ತಿದ್ದಾರೆ ಎಂದೂ ಟ್ವಿಟರ್ ಕೋರ್ಟ್ ಗೆ ಮಾಹಿತಿ ನೀಡಿದೆ. ಟ್ವಿಟರ್ ಭಾರತದ ಹೊಸ ಐಟಿ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ಆಧರಿಸಿ ದೆಹಲಿ ಕೋರ್ಟ್ ಟ್ವಿಟರ್ ಗೆ ನೊಟೀಸ್ ಜಾರಿಗೊಳಿಸಿತ್ತು.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್ ಗೆ ಹೇಳಿಕೆ ನೀಡಿದ್ದ ಟ್ವಿಟರ್, ಐಟಿ (ಮಧ್ಯಂತರ ಮಾರ್ಗಸೂಚಿ ಹಾಗೂ ಡಿಜಿಟಲ್ ಮಾಧ್ಯಮ ನಿಯಮಗಳು) 2021, ರ ಅನುಸರಣೆ ಮಾಡಲಾಗುತ್ತಿದೆ ಹಾಗೂ ನಿಯಮ 4ರ ಅಡಿಯಲ್ಲಿ ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ಮೇ.28, 2021 ರಂದು ನೇಮಕ ಮಾಡಲಾಗಿದೆ ಎಂದು ಹೇಳಿತ್ತು.ಮುಂದಿನ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement