ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಿಗೆ 15 ತಿಂಗಳು ಜೈಲು ಶಿಕ್ಷೆ

ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್ ಜುಮಾ ಅವರಿಗೆ ವಿಧಿಸಲಾಗಿರುವ ಶಿಕ್ಷೆ ಅನುಭವಿಸಲು ಸ್ವಯಂ ಶರಣಾಗಲು ನಿರಾಕರಿಸಿರುವುದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ. ಜುಮಾ ಅವರ ಮೇಲಿರುವ ಭ್ರಷ್ಟಚಾರ ಪ್ರಕರಣಗಳಿಗೆ ಸಂಬಂಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯ 15 ತಿಂಗಳ ಶಿಕ್ಷೆ ವಿಧಿಸಿದೆ.
ಈ ನಡುವೆ ತಮ್ಮ ವಿರುದ್ಧ ನೀಡಲಾಗಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಜುಮಾ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಜಾಸತಾತ್ಮಕ ದೇಶದಲ್ಲಿ ಪ್ರತಿಯೊಂದು ಮನವಿಯನ್ನು ಪರಿಗಣಿಸುವ ಅವಕಾಶಗಳಿವೆ ಎಂದು ಜುಮಾ ವಕ್ತಾರರು ಪ್ರತಿಪಾದಿಸಿದ್ದಾರೆ.
79 ವರ್ಷದ ಜುಮಾ ತಮ್ಮ ವಯಸ್ಸು, ಆರೋಗ್ಯದ ಸಮಸ್ಯೆಗಳನ್ನು ಆಧರಿಸಿ ಶಿಕ್ಷೆಯಿಂದ ವಿನಾಯಿತಿ ಕೇಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತಾವು ಜೈಲು ಸೇರುವುದರಿಂದ ಮತ್ತಷ್ಟು ಆರೋಗ್ಯದ ಸಮಸ್ಯೆಗಳಾಗುವ ಸಾಧ್ಯತೆಯನ್ನು ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ನ್ಯಾಯಾಲಯ ಮೇಲ್ಮನವಿ ವಿಚಾರಣೆ ನಡೆಸುವುದಾಗಿ ಹೇಳಿದೆ.
ಈ ನಡುವೆ ಜುಮಾ ಅವರನ್ನು ಬಂಧಿಸಲು ಎಲ್ಲಾ ರೀತಿಯ ತಯಾರಿಗಳು ನಡೆದಿದ್ದವು. ಅವರ ಮನೆ ಸುತ್ತ ಮಿಲಿಟರಿ ಹಾಗೂ ಪೊಲೀಸ್ ಪಡೆಯನ್ನು ಜಮಾವಣೆ ಮಾಡಲಾಗಿತ್ತು.
ಅಧ್ಯಕ್ಷರಾಗಿದ್ದಾಗ ಜುಮಾ ತಮ್ಮ ಸಹೋದರರ ಜೊತೆ ಶಾಮೀಲಾಗಿ ಬೋಕ್ಕಸವನ್ನು ದುರುಪಯೋಗ ಪಡಿಸಿಕೊಂಡರು. ಭ್ರಷ್ಟಚಾರದಿಂದ ಭಾರೀ ಪ್ರಮಾಣದ ಆಸ್ತಿ ಮಾಡಿದ್ದರು. ಅವರ ಕುಟುಂಬ ಸದಸ್ಯರು ದುಬೈನಲ್ಲಿ ನೆಲೆಸಿದ್ದಾರೆ ಎಂಬ ಆರೋಪಗಳಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ