ರಾಡಿನಿಂದ ಹೊಡೆದು ಅಜ್ಜಿಯನ್ನೇ ಕೊಂದ ಮೊಮ್ಮಗ; ತಾಯಿ ಮೇಲೂ ಹಲ್ಲೆ..!

posted in: ರಾಜ್ಯ | 0

ಧಾರವಾಡ: ಧಾರವಾಡ ನಗರದ ಸಪ್ತಾಪುರ ಬಡಾವಣೆಯಲ್ಲಿ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿದ ದುರ್ಘಟನೆ ನಡೆದಿದೆ.
ದತ್ತಾತ್ರೇಯ (ದತ್ತು) ಎಂಬ ಯುವಕ ಕಬ್ಬಿಣದ ರಾಡಿನಿಂದ ಅಜ್ಜಿ ಭೀಮವ್ವ (70 ವರ್ಷ)ಅವರ ಮೇಲೆ ಭೀಕರ ಹಲ್ಲೆ ನಡೆಸಿದ ಪರಿಣಾಮ ಅಜ್ಜಿ ಮೃತಪಟ್ಟಿದ್ದಾರೆ. ತಾಯಿ ಗೌರಮ್ಮ ಅವರ ಮೇಲೂ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿರುವ ಗೌರಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡದ ಜಯನಗರ ಲಾಸ್ಟ್ ಸ್ಟಾಪ್ ಬಳಿ ಇರುವ ದುರ್ಗಾದೇವಿ ಕಾಲೊನಿಯಲ್ಲಿ ಈ ಘಟನೆ ನಡೆದಿದೆ.
ತೀವ್ರ ಸ್ವರೂಪದಲ್ಲಿ ಗಾಯಗೊಂಡಿರುವ ತಾಯಿ ಗೌರಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ದತ್ತಾತ್ರೇಯ ಎಂಬಾತ ಪ್ರತಿದಿನ ಮದ್ಯ ಕುಡಿಯಲು ಹಣ ಕೊಡಿ ಎಂದು ತನ್ನ ತಾಯಿ ಹಾಗೂ ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದ. ಸೋಮವಾರ ರಾತ್ರಿ ಸಹ ಈ ಬಗ್ಗೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ದತ್ತಾತ್ರೇಯ ರಾಡ್‌ನಿಂದ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿದ್ದರಿಂದ ಅಜ್ಜಿ ಅಸು ನೀಗಿದ್ದಾಳೆ. ತನ್ನ ತಾಯಿ ಗೌರವ್ವ ಅವರ ಮೇಲೂ ಹಲ್ಲೆ ಮಾಡಿದ್ದಾನೆ. ಆಕೆಯೂ ಗಂಭೀರವಾಗಿ ಗಾಯಗೊಂಡಿದ್ದಾಳೆ. ನಿನ್ನೆ ತಡರಾತ್ರಿಯೇ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ