ಹನಿ ನೀರಾವರಿಯಿಂದ ಶೇಂಗಾ ಬೆಳೆ: ಬಂಪರ್ ಫಸಲು ನಿರೀಕ್ಷೆಯಲ್ಲಿ ರೈತ

posted in: ರಾಜ್ಯ | 0

ಪಾವಗಡ: ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ವಿವಿಧ ಬೆಳೆಗಳನ್ನು ಬಳೆಯುವುದು ಸಾಮಾನ್ಯ ಆದರೆ, ಹನಿ ನೀರಾವರಿ ಬೇಸಾಯದಡಿ ಶೇಂಗಾ ಬೆಳೆಯನ್ನು ಬೆಳೆಯಬಹುದು ಎಂಬುದನ್ನು ರಾಜ್ಯ ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಪ್ರಗತಿಪರ ರೈತ ಹೆಂಜಾರಪ್ಪ ಸಾಬೀತು ಮಾಡಿದ್ದಾರೆ.

ಮಳೆಯ ಕೊರತೆಯಿಂದಾಗಿ ಮತ್ತು ನಿರಂತರ ಬೆಳೆ ನಷ್ಟಕ್ಕೆ ಒಳಗಾಗುತ್ತಿರುವ ರೈತರು ಕೃಷಿಯಲ್ಲಿನ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಶೇಂಗಾ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರೈತರದು ಹೊಸ ಸಾಧನೆಯೇ ಸರಿ.

ನೀರಾವರಿ ಕ್ರಮದಿಂದ ಶೇಂಗಾವನ್ನು ಬೆಳೆಯುತ್ತಿರುವುದನ್ನು ನೋಡಿದ್ದೇವೆ. ಆದರೆ ಕೊಂಡೇತಿಮ್ಮನಹಳ್ಳಿಯ ಹೆಂಜಾರಪ್ಪ ಎಂಬುವರು ತಮ್ಮ ಜಮೀನಲ್ಲಿ ಹನಿನೀರಾವರಿ ಮೂಲಕ ಶೇಂಗಾ ಬೆಳೆಯುತ್ತಿರುವ ಪ್ರಯೋಗನ್ನು ಮಾಡಿದ್ದಾರೆ.

ಟೊಮೇಟೋ ಬೆಳೆ ಬೆಳೆಯಲು ಮಾಡಿದ್ದ ಬದುವುಗಳಲ್ಲಿ ಶೇಂಗಾ ಬೆಳೆಯನ್ನು ಬೆಳೆಯುತ್ತಿದ್ದು, ೪೦ ದಿನಗಳ ಬೆಳೆ ಸೊಗಸಾಗಿ ಬೆಳೆದು ನಿಂತಿದೆ. ಮಳೆಗಾಗಿ ಕಾಯದೆ ಹನಿನೀರಾವರಿ ಮೂಲಕ ನೀರು ಹಾಯಿಸಲಾಗಿದ್ದು, ಬದುವುಗಳ ಮದ್ಯೆ ಇರುವ ಕಳೆ ತೆಗೆಯುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

ಬೀಜಗಳನ್ನು ಬದುಗಳ ಮೇಲೆ ಕೈಯಿಂದ ಹಾಕಲಾಗಿದ್ದು ಬೀಜದಿಂದ ಬೀಜಕ್ಕೆ ಅಂತವನ್ನು ನೀಡಲಾಗಿಲ್ಲ. ಬದಲಾಗಿ ಬೀಜಗಳನ್ನು ಒತ್ತಾಗಿ ಹಾಕಲಾಗಿದೆ. ಗಿಡಗಳು ಬೇರು ಬಿಡಲು ಬದುಗಳು ಸಡಿಲವಾಗಿ ಇರುವುದರಿಂದ ಗಿಡಗಳು ಸೊಗಸಾಗಿ ವೇಗವಾಗಿ ಬೆಳೆಯುತ್ತಿವೆ. ಇದೇ ರೀತಿ ಕಾಯಿ ಕಚ್ಚಿದರೆ ಅತಿಹೆಚ್ಚು ಇಳುವರಿ ನಿರೀಕ್ಷಿಸಬಹುದಾಗಿದೆ ಇಂತಹ ಪದ್ದತಿಯಿಂದ ಕಡಿಮೆ ಬೀಜದಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

ತುಂತುರು ಹಾಗೂ ಹನಿ ನೀರಾವರಿ ಕ್ರಮದಿಂದ ನೀರು ಮತ್ತು ಬೀಜದ ಉಳಿತಾಯವಾಗಲಿದೆ, ಕಳೆ ಕೀಳುವ ಕೆಲಸವು ಕಡಿಮೆ ಎನ್ನುತ್ತಾರೆ ತೋಟವನ್ನು ನೋಡಿಕೊಳ್ಳುವ ಈರಜ್ಜಿ. ಇದೇ ಮೊದಲ ಬಾರಿಗೆ ಈ ರೀತಿ ಬೆಳೆಯುತ್ತಿದ್ದು ಇಳುವರಿಯನ್ನು ಗಮನಿಸಬೇಕಿದೆ ಎನ್ನುತ್ತಾರೆ ರೈತ ಹೆಂಜಾರಪ್ಪ ಅವರು. ಈಗಾಗಲೇ ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿರುವ ರೈತರು ಶೇಂಗಾ ಬೆಳೆಯನ್ನೂ ಬೆಳೆದರೆ ಉತ್ತಮ ಫಸಲು ಬೆಳೆಯಬಹುದಾಗಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement