ಸಿಎಂ ಬಿಎಸ್ ವೈಗೆ ಬಿಗ್ ರಿಲೀಫ್ : ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆಪ್ತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾ ಮಾಡಿದೆ. 2021ರ ಜೂನ್ 6 ರಂದು ಟಿ.ಜೆ.ಅಬ್ರಹಾಂ ಭ್ರಷ್ಟಾಚಾರ ಆರೋಪದಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಪುತ್ರ … Continued

ಐಟಿ ನಿಯಮಗಳ ವಿವಾದ: ಅನುಸರಣೆ ವಿರುದ್ಧ ಕೇಂದ್ರ ಕ್ರಮ ಕೈಗೊಂಡರೆ ಟ್ವಿಟರ್‌ಗೆ ಯಾವುದೇ ರಕ್ಷಣೆ ಇಲ್ಲ ಎಂದ ದೆಹಲಿ ಹೈಕೋರ್ಟ್

ನವದೆಹಲಿ: ಭಾರತ ಮೂಲದ ಅನುಸರಣೆ ಅಧಿಕಾರಿಗಳನ್ನು ನೇಮಿಸುವ ಷರತ್ತುಗಳನ್ನು ಒಳಗೊಂಡಂತೆ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮ 2021 ಅನ್ನು ಅನುಸರಿಸದಿದ್ದರೆ ಟ್ವಿಟರ್ ತನ್ನ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಲಿದೆ ಎಂದು ದೆಹಲಿ ಹೈಕೋರ್ಟ್ ಗುರುವಾರ ಸಾಮಾಜಿಕ ಮಾಧ್ಯಮ ಟ್ವಿಟ್ಟರಿಗೆ ತಿಳಿಸಿದೆ. ಟ್ವಿಟರ್ ನೇಮಕ ಮಾಡಿದ ಮಧ್ಯಂತರ ಅಧಿಕಾರಿಗಳಿಗೆ ಎರಡು ದಿನಗಳೊಳಗೆ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ. … Continued

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆವಿಮೆ : ಮುಂಚಿತವಾಗಿ ಕಂತು ಪಾವತಿಸಿ

posted in: ರಾಜ್ಯ | 0

ಗದಗ: ಕರ್ನಾಟಕ ರೈತ ಸುರಕ್ಷಾ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಬೆಳೆಗಳಾದ ಹೆಸರು ಬೆಳೆಗೆ ವಿಮಾ ಕಂತು ತುಂಬಲು ಜುಲೈ 15 ಕೊನೆಯ ದಿನವಾಗಿದೆ. ಶೇಂಗಾ, ಮುಸುಕಿನ ಜೋಳ, ಜೋಳ, ಹತ್ತಿ, ಸಜ್ಜೆ, ಒಣ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳಿಗೆ ವಿಮಾ ಕಂತು ತುಂಬಲು ಜುಲೈ 31 ಹಾಗೂ ಸೂರ್ಯಕಾಂತಿ ಬೆಳೆಗೆ ಅಗಸ್ಟ 16 ಕೊನೆಯ … Continued

ನಿಯಮ ಉಲ್ಲಂಘನೆ: 14 ಬ್ಯಾಂಕುಗಳಿಗೆ ದಂಡ ವಿಧಿಸಿದ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಿಯಮಗಳ ಉಲ್ಲಂಘನೆಗೆ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳು ಒಳಗೊಂಡಂತೆ ಸುಮಾರು 14 ಬ್ಯಾಂಕುಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದೆ. ಇತ್ತೀಚೆಗೆ ಆರ್‌ಬಿಐ ಯು ದೊಡ್ಡ ಗ್ರೂಪ್ ನ ಕಂಪನಿಗಳ ಅಕೌಂಟ್ ಪರಿಶೀಲಿಸಿದಾಗ ಈ 14 ಬ್ಯಾಂಕುಗಳು ಆರ್‌ಬಿಐನ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ನಿಯಾಮಾವಳಿಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ … Continued

ಗದಗ: ಆಗಸ್ಟ 14 ರಂದು ಮೆಗಾ ಲೋಕ್ ಅದಾಲತ್

posted in: ರಾಜ್ಯ | 0

ಗದಗ: ಅಗಸ್ಟ 14 ರಂದು ಜಿಲ್ಲಾದ್ಯಂತ  ನಡೆಯುವ ಮೆಗಾ ಲೋಕ್ ಅದಾಲತ್‌ ನಲ್ಲಿ ಸಾರ್ವಜನಿಕರು ಹೆಚ್ಚು ಹೆಚ್ಚು ಪಾಲ್ಗೊಂಡು ರಾಜಿ ಸಂದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ್ಯ ಮಾಡಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್. ಮಹಾಲಕ್ಷ್ಮಿ ನೇರಳೆ ಅವರು ಹೇಳಿದರು. ಜಿಲ್ಲಾ ನ್ಯಾಯಾಯಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು … Continued

ಮಹತ್ವದ ಬೆಳವಣಿಗೆಯಲ್ಲಿ ಧಾರವಾಡ ಜಿಪಂ ಸದಸ್ಯ ಯೋಗೇಶ್ ಹತ್ಯೆ ಪ್ರಕರಣದಲ್ಲಿ ಗದಗ ಎಪಿಎಂಸಿ ಕಾರ್ಯದರ್ಶಿ ಬಂಧನ..!

posted in: ರಾಜ್ಯ | 0

ಗದಗ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿನಲ್ಲಿದ್ದು, ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ   ಸದ್ಯ ಗದಗ ಎಪಿಎಂಸಿ ಕಾರ್ಯದರ್ಶಿ  ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಸ್ತುತ ಗದಗ ಎಪಿಎಂಸಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಎಸ್ ಅಧಿಕಾರಿ … Continued

ದುಬೈನ ವಿಶ್ವದ ಅತಿ ದೊಡ್ಡ ಬಂದರಿನಲ್ಲಿ ಸ್ಫೋಟ: 25 ಕಿಮೀ ದೂರದಲ್ಲಿಯೂ ಗೋಡೆ-ಕಿಟಕಿಗಳು ನಡುಗಿದ ಅನುಭವ..!

ದುಬೈ: ವಿಶ್ವದ ಅತಿದೊಡ್ಡ ಬಂದರುಗಳಲ್ಲಿ ಒಂದಾದ ದುಬೈನಲ್ಲಿ ಲಂಗರು ಹಾಕಿದ ಕಂಟೇನರ್ ಹಡಗಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಯುನೈಟೆಡ್ ಅರಬ್ ಎಮಿರೇಟ್ಸ್‌ ವಾಣಿಜ್ಯ ಕೇಂದ್ರದಾದ್ಯಂತ ಇದು ನಡುಕ ಉಂಟು ಮಾಡಿದೆ. ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ನೆಲೆಸಿರುವ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನ ಮೇಲೆ ದೈತ್ಯ ಕಿತ್ತಳೆ ಜ್ವಾಲೆಗಳನ್ನು … Continued

ಕಾಶ್ಮೀರ ಎನ್ ಕೌಂಟರ್: ಇಬ್ಬರು ಎಲ್‌ಇಟಿ ಉಗ್ರರು ಸೇರಿ ಐವರು ಉಗ್ರರು ಹತ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಯಲ್ಲಿ ಭದ್ರತಾ ಪಡೆಗಳು ಐವರು ಉಗ್ರರನ್ನು ಹತ್ಯೆ ಮಾಡಿದೆ. ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಈ ಎನ್ ಕೌಂಟರ್ ಗಳು ನಡೆದಿದೆ ಎಂದು ವರದಿಯಾಗಿದೆ. ಕುಲ್ಗಾಮ್ ಜೊದಾರ್ ಪ್ರದೇಶದಲ್ಲಿ ಉಗ್ರರಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದೆ. ಉಗ್ರರು ಗುಂಡು ಹಾರಿದ … Continued

ಐಟಿ ನಿಯಮ ಪಾಲಿಸಲು ಇನ್ನೂ 8 ವಾರಗಳು ಬೇಕು ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಟ್ವಿಟ್ಟರ್‌

ನವದೆಹಲಿ: ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ನಿವಾಸಿ ಕುಂದುಕೊರತೆ ಅಧಿಕಾರಿಯನ್ನು (ಆರ್‌ಜಿಒ) ನೇಮಕ ಮಾಡಲು ಇನ್ನೂ ಎಂಟು ವಾರಗಳು ಬೇಕಾಗುತ್ತದೆ ಎಂದು ಟ್ವಿಟ್ಟರ್ ಗುರುವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹೊಸ ಐಟಿ ನಿಯಮಗಳ ಅನುಸರಣೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸುವ ದೆಹಲಿ ಹೈಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಟ್ವಿಟರ್ ಭಾರತದಲ್ಲಿ ಸಂಪರ್ಕ ಕಚೇರಿ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ … Continued

ವಿದ್ಯಾರ್ಥಿಗಳಿಗೆ ಈ ವರ್ಷವೂ ಸೈಕಲ್ ಭಾಗ್ಯ ಮರೀಚಿಕೆ ..?

posted in: ರಾಜ್ಯ | 0

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅದರಲ್ಲೂ ಪ್ರೌಢಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಹ ಸರಕಾರದ ಸೈಕಲ್ ಭಾಗ್ಯ ಮರೀಚೆಕೆಯಾಗಿದೆ ರಾಜ್ಯದ ೮ ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೊರೊನಾ ಕಾರಣದಿಂದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ೮ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿಯೂ ಸೈಕಲ್ ನೀಡುವುದು ಅನುಮಾನ ಎನ್ನಲಾಗಿದೆ. … Continued